ನಾಸಾ ಕೊಟ್ಟ ಶಾಕ್, 2020ರಲ್ಲಿ ಭೂಮಿಗೆ ಅಪ್ಪಳಿಸಲಿದೆ ಕ್ಷುದ್ರಗ್ರಹ!

ಭೂಮಿಯತ್ತ ಬರುತ್ತಿದೆ ಕ್ಷುದ್ರಗ್ರಹ/ ನವೆಂಬರ್ 2 ಕ್ಕೆ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ/ ಎಚ್ಚರಿಕೆ ನೀಡಿದ ನಾಸಾ ವಿಜ್ಞಾನಿಗಳು/ 2020  ರಲ್ಲಿ ಇನ್ನೊಂದು ಆಘಾತ

Tiny Asteroid May Hit Our Earth a Day November 2020

ನವದೆಹಲಿ(ಆ. 24)  ಕೊರೋನಾ, ಭೀಕರ ಮಳೆ, ಪ್ರವಾಹ  2020 ರಲ್ಲಿ ನಿಸರ್ಗ ಒಂದಾದ ಮೇಲೆ ಒಂದು ಆಘಾತ ನೀಡುತ್ತಿದೆ. ಈಗ ಮತ್ತೊಂದು ಆತಂಕಕಾರಿ ಅಂಶವನ್ನು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರ ಚುನಾವಣೆ ನವೆಂಬರ್  3ಕ್ಕೆ ನಿಗದಿಯಾಗಿದ್ದು ಅದಕ್ಕೂ ಒಂದು ದಿನ ಮೊದಲು ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಾಳೆ ಹಾಕಿ ಹೇಳಿದ್ದಾರೆ.

ಅಂತರಿಕ್ಷದಲ್ಲಿದೆ ಅದ್ಭುತ ಸಂಪತ್ತು; ಸಿಕ್ಕರೆ ಬದಲಾಗಬಹುದೆ ಜಗತ್ತು

ಸುಮಾರು 6.5 ಅಡಿ ವಿಸ್ತೀರ್ಣ ಇರುವ  '2018VP1' ಎಂದು ಹೆಸರಿಸಲಾಗಿರುವ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಣ್ಣ ಸಾಧ್ಯತೆ ಶೇ. 0.41ರಷ್ಟಿದೆ. ಅತಿ ಹತ್ತಿರದಲ್ಲಿ ಹಾದುಹೋಗಲಿದೆ ಎಂದು ತಿಳಿಸಿದ್ದಾರೆ. ಈಗ ಸಾಗಿ ಬರುತ್ತಿರುವ ಕ್ಷುದ್ರಗ್ರಹವನ್ನು  2018ರಲ್ಲಿಯೇ ಗುರುತಿಸಲಾಗಿದೆ.

ಕಳೆದ ವಾರ ಭೂಮಿಯನ್ನು ಹಾದುಹೋಗಿದ್ದ ಕ್ಷುದ್ರಗ್ರಹ ಒಂದು ಮಾಮೂಲಿಯ ಕಾರಿನಷ್ಟು ಗಾತ್ರ ಇತ್ತು.  ಹಿಂದೂ ಮಹಾಸಾಗರದ ಮೇಲೆ 2,950 ಕಿಮೀ ದೂರದಲ್ಲಿ ಹಾದುಹೋಗಿದೆ. ಎಲ್ಲ ವಿಜ್ಞಾನಿಗಳ ಕಣ್ಣು ತಪ್ಪಿಸಿ ಹೋದ ಕ್ಷುದ್ರಗ್ರಹವನ್ನು ಭಾರತೀಯ ವಿದ್ಯಾರ್ಥಿಗಳು ದಾಖಲೆ ಸಮೇತ ಇಟ್ಟಿದ್ದರು.

ಎಸ್ಯುವಿ ಆಕಾರದ ಕ್ಷುದ್ರಗ್ರಹವನ್ನು  ಐಐಟಿ-ಬಾಂಬೆ ವಿದ್ಯಾರ್ಥಿಗಳು ಕಂಡುಹಿಡಿದು ತಿಳಿಸಿದ್ದರು.  ಐಐಟಿ ವಿದ್ಯಾರ್ಥಿಗಳಾದ ಕುನಾಲ್ ದೇಶ್ಮುಖ್ ಮತ್ತು ಕೃತಿ ಶರ್ಮಾ ಅವರು ಭೂಮಿಯ  ಹತ್ತಿರ ಬಂದಿದ್ದ ಕ್ಷುದ್ರಗ್ರಹದ ಎಲ್ಲ ವಿವರ ದಾಖಲಿಸಿದ್ದರು.

 

 

Latest Videos
Follow Us:
Download App:
  • android
  • ios