Asianet Suvarna News Asianet Suvarna News

ಗಂಡನೊಂದಿಗೆ ಜಗಳ ಮಾಡುತ್ತಿದ್ದ ಹೆಂಡತಿಯನ್ನ ಎಳೆದೊಯ್ದು ತಿಂದು ತೇಗಿದ ಹುಲಿ!

ಟೈಗರ್ ಸಫಾರಿಗೆ ಹೋಗಿದ್ದ ವೇಳೆ ಗಂಡನೊಂದಿಗೆ ಜಗಳವಾಡುತ್ತಾ ಕಾರಿನಿಂದ ಇಳಿದುಬಂದ ಹೆಂಡತಿಯನ್ನು, ಕಚ್ಚಿ ಎಳೆದೊಯ್ದು ತಿಂದುಹಾಕಿದ ಹುಲಿ.
 

Tiger dragged and ate the wife who was fighting with her husband during safari sat
Author
First Published Aug 9, 2024, 12:56 PM IST | Last Updated Aug 9, 2024, 12:56 PM IST

Viral video: ಟೈಗರ್ ಸಫಾರಿಗೆ ಹೋಗಿದ್ದ ವೇಳೆ ಗಂಡನೊಂದಿಗೆ ಜಗಳವಾಡುತ್ತಾ ಕಾರಿನಿಂದ ಇಳಿದುಬಂದ ಹೆಂಡತಿಯನ್ನು, ಪಕ್ಕದ ಮರದ ಬಳಿ ಅವಿತುಕೊಂಡು ಕುಳಿತಿದ್ದ ಹುಲಿ ಕಚ್ಚಿ ಎಳೆದೊಯ್ದು ತಿಂದುಹಾಕಿದ ಘಟನೆ ನಡೆದಿದೆ.

ಗಂಡ ಹೆಂಡತಿಯ ನಡುವೆ ಆಗಿಂದಾಗ್ಗೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ನಡೆಯುತ್ತದೆ. ಜಗಳ ಆಡಿದ ಸಮಯದಷ್ಟೂ ವಿಳಂಬ ಮಾಡದೇ ಅವರಿಬ್ಬರೂ ಪುನಃ ಒಂದಾಗುತ್ತಾರೆ. ಗಂಡ-ಹೆಂಡತಿ ಪೈಕಿ ಯಾರಿಗಾದರೂ ನೋವುಂಟಾದರೆ ಒಬ್ಬರಿಗೊಬ್ಬರು ಪ್ರಾಣ ಕೊಡಲೂ ಮುಂದಾಗುತ್ತಾರೆ. ಆದರೆ, ಎಲ್ಲೆಂದರಲ್ಲಿ ಜಗಳವಾಡಿಕೊಂಡರೆ ಅವರಿಗೆ ದೊಡ್ಡ ನಷ್ಟವೇ ಸಂಭವಿಸಬಹುದು. ಹೀಗಾಗಿ ಸಮಯ ಸಂದರ್ಭವನ್ನು ನೋಡಿಕೊಂಡು ಗಂಡ-ಹೆಂಡತಿ ತಮ್ಮ ಹೊಂದಾಣಿಕೆಯನ್ನು ತೋರಿಸಬೇ. ಎಲ್ಲೆಂದರಲ್ಲಿ ಜಗಳ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ..

ಕನ್ನಡ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಧಾರಾವಾಹಿ ನಟಿ ಜ್ಯೋತಿ ರೈ ಕೊಟ್ಟ ಕಾರಣ ಹೀಗಿದೆ..

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಗಂಡ ಹೆಂಡತಿ ಕಾರಿನಲ್ಲಿ ಟೈಗರ್ ಸಫಾರಿಗೆ ಹೋಗಿದ್ದಾರೆ. ಆದರೆ, ಇಲ್ಲಿ ಗಂಡ ಕಾರಿನ ಡ್ರೈವರ್ ಪಕ್ಕದಲ್ಲಿ ಕುಳಿತುಕೊಂಡಿದ್ದಾನೆ. ಇನ್ನು ಹೆಂಡತಿ ಕಾರಿನ ಹಿಂಬದಿಯಲ್ಲಿ ಕುಳಿತುಕೊಂಡಿದ್ದಾಳೆ. ಇದರಿಂದ ಕಾರಿನಲ್ಲಿ ಜಗಳ ಮಾಡುತ್ತಲೇ ಬಂದ ಜೋಡಿ ಟೈಗರ್ ಸಫಾರಿ ರಸ್ತೆಯ ಮಧ್ಯದಲ್ಲಿಯೇ ಕಾರನ್ನು ನಿಲ್ಲಿಸಲು ಹೇಳಿದ್ದಾರೆ. ಆಗ ಕಾರಿನಿಂದ ಇಳಿದುಬಂದ ಹೆಂಡತಿ ಗಂಡನೊಂದಿಗೆ ಜಗಳ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಅನತಿ ದೂರದಲ್ಲಿ ಹೊಂಚು ಹಾಕಿ ಕುಳಿತಿದ್ದ ಹುಲಿ ಮರದ ಪಕ್ಕದಲ್ಲಿ ಅಡಗಿಕೊಂಡಿತ್ತು.

ಮಹಿಳೆ ಕಾರಿನಿಂದ ಹೊರಗೆ ಇಳಿದು ಬಂದು ಗಂಡ ಕುಳಿತಿದ್ದ ಮುಂಭಾಗದ ಕಾರಿನ ಬಾಗಿಲು ತೆರೆದು ಜಗಳ ಮಾಡಲು ಮುಂದಾಗಿದ್ದಾಳೆ. ಆಗ ಮರದ ಪಕ್ಕದಲ್ಲಿ ಅಡಗಿ ಕುಳಿತಿದ್ದ ಹುಲಿ ಏಕಾಏಕಿ ದಾಳಿ ಮಾಡಿ ಆಕೆಯನ್ನು ಕಚ್ಚಿ ಹಿಡಿದು ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಕಾರಿನಲ್ಲಿದವದರು ಇಳಿದು ಬರುತ್ತಲೇ ಹುಲಿ ಆಕೆಯನ್ನು ಕಾಡಿನೊಳಗೆ ಎಳೆದು ಓಡಿ ಹೋಗಿದೆ. ಮಹಿಳೆಯನ್ನು ಎಳೆದೊಯ್ದ ತಕ್ಷಣವೇ ಕಾರಿನಲ್ಲಿದ್ದ ಗಂಡ ಹಾಗೂ ಹಿಂಬದಿ ಸೀಟಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಯೂ ಕಾರಿನಿಂದ ಇಳಿದು ಮಹಿಳೆಯನ್ನು ರಕ್ಷಣೆ ಮಾಡಲು ಮುಂದೆ ಹೋಗಿದ್ದಾರೆ. ಆಗ, ಅಲ್ಲಿದ್ದವರು ನೀವೂ ಕೂಡ ಇತರೆ ಹುಲಿಗಳಿಗೆ ಬಲಿಯಾಗುವ ಸಾಧ್ಯತೆಯಿದೆ. ಕಾರಿನಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ನಂತರ, ಸಫಾರಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಹಿಂದೂ ಯುವಕನ ಜೊತೆ ಪ್ರೀತಿ : ನಡುರಸ್ತೆಯಲ್ಲೇ ಕತ್ತು ಹಿಸುಕಿ ತಂಗಿಯ ಕೊಂದ ಮುಸ್ಲಿಂ ಯುವಕ

ಸಫಾರಿ ನಡೆಸುವ ಸಿಬ್ಬಂದಿ ಬಂದು ಮಹಿಳೆಯನ್ನು ರಕ್ಷಣೆ ಮಾಡುವ ವೇಳೆಗಾಗಲೇ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಬಲಿಷ್ಟ ಹುಲಿ ಆಕೆಯ ಕುತ್ತಿಗೆಗೆ ಬಾಯಿ ಹಾಕಿ ರಕ್ತವನ್ನು ಹೀರಿತ್ತು. ಜೊತೆಗೆ, ಆಕೆಯ ದೇಹದ ಮಾಂಸವನ್ನೂ ತಿಂದು ಹಾಕಿತ್ತು. ಟೈಗರ್ ಸಫಾರಿ ವೇಳೆ ಸಾಮಾನ್ಯ ಜ್ಞಾನ ಇಲ್ಲದವರಂತೆ ಮೂರ್ಖತನದಿಂದ ಕಾರಿನಿಂದ ಇಳಿದುಬಂದ ಮಹಿಳೆ ಕಾಡು ಪ್ರಾಣಿಗೆ ಬಲಿಯಾಗಿದ್ದಾಳೆ. ಆ ನಂತರ ಖಾಸಗಿ ವಾಹನಗಳಲ್ಲಿ ಹೋಗುವ ಸಫಾರಿ ಪ್ರಿಯರಿಗೆ ಕಾರಿನಿಂದ ಇಳಿದು ಹೊರಗೆ ಬರದಂತೆ ಖಡಕ್ ಸೂಚನೆಯನ್ನೂ ರವಾನೊಸಲಾಗುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿರುವ ವ್ಯಕ್ತಿ, ಸಫಾರಿ ವೇಳೆ ಮಹಿಳೆ ಕಾರಿನಿಂದ ಇಳಿದುಬಂದು ಗಂಡನೊಂದಿಗೆ ಜಗಳ ಮಾಡುತ್ತಿರುವಾಗ ಹುಲಿ ಬಂದಿ ಆಕೆಯನ್ನು ಕಚ್ಚಿ ಎಳೆದೊಯ್ದಿದೆ ಎಂದು ಬರೆದುಕೊಂಡಿದ್ದಾನೆ. ಮುಂದುವರೆದು ಗಂಡನ ಮೇಲೆ ಇಂತಹ ಸ್ಥಳದಲ್ಲಿ ನೀವು ಕೂಡ ಹೀಗೆ ರಿಯಾಕ್ಟ್ ಮಾಡ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆದಿದ್ದು, ಯಾವಾಗ ನಡೆದಿದ್ದು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಇಲ್ಲಿದೆ ವೈರಲ್ ವಿಡಿಯೋ ಲಿಂಕ್: https://www.facebook.com/reel/1526346051323873

Latest Videos
Follow Us:
Download App:
  • android
  • ios