ಸೆಲ್ಫಿ ತೆಗೆದುಕೊಳ್ಳುವಾಗ ಹುಲಿ ಇದ್ದಕ್ಕಿದ್ದಂತೆ ಪ್ರವಾಸಿಗನ ಮೇಲೆ ಎರಗಿತು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪುಕೆಟ್: ಮೃಗಾಲಯ, ಜಂಗಲ್ ಸಫಾರಿ ವೇಳೆ ಪ್ರವಾಸಿಗರು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಪ್ರಾಣಿಗಳ ಬಳಿ ತೆರಳದಂತೆ ಫಲಕಗಳನ್ನು ಸಹ ಅಳವಡಿಸಲಾಗಿರುತ್ತದೆ. ಅದೇ ರೀತಿ ಪ್ರಾಣಿಗಳಗೆ ಹೊರಗಿನ ಯಾವುದೇ ಆಹಾರ ನೀಡದಂತೆ ನಿಬಂಧನೆ ಹಾಕಲಾಗಿರುತ್ತದೆ. ಆದ್ರೂ ಪ್ರವಾಸಿಗರು ನಿಯಮಗಳಿರೋದೇ ಉಲ್ಲಂಘನೆ ಮಾಡಲೆಂದು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇದೀಗ ಇಂತಹುವುದೇ ಒಂದು ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ.

ಫುಕೆಟ್‌ನಲ್ಲಿ ಹುಲಿ ದಾಳಿಯಿಂದ ಭಾರತೀಯ ಪ್ರವಾಸಿಗರೊಬ್ಬರು ಗಾಯಗೊಂಡಿದ್ದಾರೆ.. ಥೈಲ್ಯಾಂಡ್‌ನ ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್ ವನ್ಯಜೀವಿ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗ ಯಾರೆಂದು ಇನ್ನೂ ತಿಳಿದುಬಂದಿಲ್ಲ. ಹುಲಿಯ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಈ ದಾಳಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದೆ.

ಭಯಾನಕ ವಿಡಿಯೋದಲ್ಲಿ ಪ್ರವಾಸಿಗ ಹುಲಿಯ ಸರಪಣಿಯನ್ನು ಹಿಡಿದುಕೊಂಡು ನಡೆಯುವುದನ್ನು ಕಾಣಬಹುದು. ಆದರೆ, ಸೆಲ್ಫಿ ತೆಗೆದುಕೊಳ್ಳುವಾಗ ಹುಲಿ ಇದ್ದಕ್ಕಿದ್ದಂತೆ ಪ್ರವಾಸಿಗನ ಮೇಲೆ ಎರಗಿತು. ಪಾರ್ಕ್‌ನ ತರಬೇತುದಾರ ಪ್ರವಾಸಿಗನನ್ನು ರಕ್ಷಿಸಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಹುಲಿಯನ್ನು ಕೂರಿಸಲು ತರಬೇತುದಾರ ಕೋಲು ಬಳಸುತ್ತಾನೆ. ಆದರೆ, ಕೆಲವೇ ಕ್ಷಣಗಳಲ್ಲಿ ಹುಲಿ ಪ್ರವಾಸಿಗನ ಮೇಲೆ ತಿರುಗಿ ದಾಳಿ ಮಾಡುತ್ತದೆ. ಪ್ರವಾಸಿಗನ ಕಿರುಚಾಟವನ್ನೂ ವಿಡಿಯೋದಲ್ಲಿ ಕೇಳಬಹುದು.

Analysis of the Tiger Attack in Thailand: @AmazingThailand@Protect_Wldlife
Character 1 : Tiger
Character 2 : Cruel Handler
Character 3 : Stupid Indian Tourist

1. Tiger was provoked to pose with a tourist.
2. Instinctively, the tiger leapt on the tourist—not the… pic.twitter.com/Q7JOI5YTLU

— Ajay Joe (@joedelhi) May 30, 2025

ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್ ಪ್ರವಾಸಿಗರಿಗೆ ಹುಲಿಗಳನ್ನು ಹತ್ತಿರದಿಂದ ನೋಡಲು ಅವಕಾಶ ನೀಡುತ್ತದೆ. ವನ್ಯಜೀವಿಗಳ ಜೊತೆ ಹತ್ತಿರದಿಂದ ಬೆರೆಯಲು ಅವಕಾಶ ನೀಡುವ ಇಂತಹ ಪ್ರವಾಸಿ ಕೇಂದ್ರಗಳ ಸುರಕ್ಷತೆ ಮತ್ತು ಪ್ರಾಣಿಗಳ ರಕ್ಷಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಟೈಗರ್ ಕಿಂಗ್‌ಡಮ್‌ನಂತಹ ಪಾರ್ಕ್‌ಗಳು ಪ್ರಾಣಿಗಳ ಯೋಗಕ್ಷೇಮಕ್ಕಿಂತ ಪ್ರವಾಸಿಗರ ಅಗತ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತವೆ ಮತ್ತು ನಿರಂತರ ಮಾನವ ಹಸ್ತಕ್ಷೇಪದ ಒತ್ತಡವು ಹುಲಿಗಳಂತಹ ವನ್ಯಪ್ರಾಣಿಗಳನ್ನು ಕೆರಳಿಸುತ್ತದೆ ಎಂದು ಕೆಲವರು ಹೇಳುತ್ತಾರೆ. 

ಇದನ್ನೂ ಓದಿ: ಹನಿಮೂನ್‌ನಲ್ಲಿ ಗಂಡ ಕೊಟ್ಟ ಸರ್ಪೈಸ್‌ಗೆ ಯುವತಿ ಫುಲ್ ಖುಷ್!

ಟೈಗರ್ ಕಿಂಗ್‌ಡಮ್‌ ಎಂಬ ಸ್ಥಳದಲ್ಲಿ ವನ್ಯಮೃಗಗಳು ತುಂಬಾ ಶಾಂತವಾಗಿರುತ್ತವೆ. ಪ್ರೆವಾಸಿಗರು ಅವುಗಳ ಪಕ್ಕದಲ್ಲಿಯೇ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಥೈಲ್ಯಾಂಡ್ ಪ್ರವಾಸಕ್ಕೆ ಭೇಟಿ ನೀಡಿದ ಪ್ರವಾಸಿಗರು ಟೈಗರ್ ಕಿಂಗ್‌ಡಮ್‌ಗೆ ಹೆಚ್ಚು ಭೇಟಿ ನೀಡುತ್ತಾರೆ.

2014 ರಲ್ಲಿ ಇದೇ ಪಾರ್ಕ್‌ನಲ್ಲಿ ಆಸ್ಟ್ರೇಲಿಯಾದ ಪ್ರವಾಸಿಗನ ಮೇಲೆ ಹುಲಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ನಂತರ ಪಾರ್ಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

ಅರಣ್ಯ ಪ್ರದೇಶದಲ್ಲಿ ಜಾಗರೂಕತೆ

ಇನ್ನು ಅರಣ್ಯ ಪ್ರದೇಶದಲ್ಲಿ ವಾಹನ ಚಾಲನೆ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಅರಣ್ಯ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುವರ ಕ್ರೇಜ್ ಇಂದು ಹೆಚ್ಚಾಗಿದೆ. ಈ ಸಮಯದಲ್ಲಿ ಕಾಡು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆಗಳಿರುತ್ತವೆ. ಇಂತಹ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

ಇದನ್ನೂ ಓದಿ: ಬೈಕ್ ಕಾಲುವೆಗೆ ಬಿದ್ದಾಗ ಯುವಕನ ಸಮಯಪ್ರಜ್ಞೆಗೆ ಕಂಡು ಜನತೆ ಶಾಕ್; ವಿಡಿಯೋಗೆ 4 ಮಿಲಿಯನ್ ವ್ಯೂವ್