ನವದೆಹಲಿ(ಡಿ.23):  ಟಿಬೆಟ್‌ನ್ನು ತನ್ನ ಕಪಿಮುಷ್ಠಿಯಲ್ಲಿಡಲು ಪ್ರಯತ್ನಿಸುತ್ತಿರುವ ಚೀನಾಗೆ ಭಾರಿ ಹಿನ್ನಡೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಮಹತ್ವದ ಮಸೂದೆ ಅಂಗೀಕರಿಸಿದೆ. ಇದು ಚೀನಾಗೆ ಕಪಾಳಮೋಕ್ಷ ಮಾಡಿದಂತಿದೆ. ಟಿಬೆಟ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ಮಾಡುವ ಟಿಬೆಟಿಯನ್ನರ ಹಕ್ಕನ್ನು ಪುನರುಚ್ಚರಿಸುವ ಮಸೂದೆಯನ್ನು ಯುಎಸ್ ಕಾಂಗ್ರೆಸ್ ಅಂಗೀಕರಿಸಿದೆ.

ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಚೀನಾದಿಂದ ಬೃಹತ್‌ ಡ್ಯಾಮ್‌!.

ಅಮೆರಿಕ ಕಾಂಗ್ರೆಸ್ ತೆಗೆದುಕೊಂಡು ನಿರ್ಧಾರ ಐತಿಹಾಸಿಕ ಎಂದು ಟಿಬೆಟ್ ಕೇಂದ್ರ ಆಡಳಿತ(CTA) ಅಧ್ಯಕ್ಷ ಲೊಬ್ಸಾಂಗ್ ಸಾಂಗೇ ಹೇಳಿದ್ದಾರೆ. ಆದರೆ ಅಮೆರಿಕ ತನ್ನ ಆತಂರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದೆ. ಎಂದು ಚೀನಾ ವಿದೇಶಾಂಗ ಸಚಿವಾಲಯ ಆರೋಪಿಸಿದೆ. ಇಷ್ಟೇ ಅಲ್ಲ ಈ ಕಾನೂನಿಗೆ ಅಂತಿಮ ಮುದ್ರೆ ಹಾಕದಂತೆ ಎಚ್ಚರಿಕೆ ನೀಡಿದೆ.

ಯುಎಸ್ ಕಾಂಗ್ರೆಸ್ ಈ ಬಿಲ್ ಪಾಸ್ ಮಾಡಿದರೆ, ಅಮೆರಿಕ ಹಾಗೂ ಚೀನಾ ನಡುವಿನ ವ್ಯವಹಾರ ಹಾಗೂ ರಾಜತಾಂತ್ರಿಕತೆಗೆ ಧಕ್ಕೆಯಾಗಲಿದೆ ಎಂದು ಚೀನಾ ಎಚ್ಚರಿಸಿದೆ. ಆದರೆ ಟಿಬೆಟ್‌ನಲ್ಲಿ ಸಂಭ್ರಮ ಮನೆ ಮಾಡಿದೆ.