2023ರ ಫೆಬ್ರವರಿಯಲ್ಲಿ ಟರ್ಕಿ-ಸಿರಿಯಾ ಭೂಕಂಪ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ಅಂದಾಜು 50 ಸಾವಿರಕ್ಕೂ ಅಧಿಕ ಮಂದಿ ಸಾವು ಕಂಡರು. ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಶರಫ್‌ ನಿಧನ ಕೂಡ ಸುದ್ದಿಯಾಯಿತು. 


ಬೆಂಗಳೂರು (ಡಿ.14): ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿನ ಅತ್ಯಂತ ಭೀಕರ ಭೂಕಂಪ ಫೆಬ್ರವರಿಯಲ್ಲಿ ಘಟಿಸಿತು. ಅದರೊಂದಿಗೆ ಕಾಶ್ಮೀರ ಯುದ್ಧಕ್ಕೆ ನೇರವಾಗಿ ಕಾರಣೀಕರ್ತರಾಗಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಶರಫ್‌ ದೀರ್ಘಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಅದರೊಂದಿಗೆ ಕೆನಡಾದಲ್ಲಿ ಅಚ್ಚರಿಯ ಘಟನೆಯೊಂದಿಗೆ ನಡೆಯಿತು. ತನ್ನ ಹುಟ್ಟುಹಬ್ಬದಲ್ಲಿ ಲಾಟರಿ ಖರೀದಿ ಮಾಡಿದ್ದ ಮಹಿಳೆಯೆಗೆ ಜಾಕ್‌ಪಾಟ್‌ ಎನ್ನುವಂತೆ 290 ಕೋಟಿ ರೂಪಾಯಿ ಗೆದ್ದಿದ್ದರು.

ದೀರ್ಘಕಾಲದ ಅನಾರೋಗ್ಯದಿಂದ ಮುಶರಫ್‌ ನಿಧನ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸೇನಾ ಜನರಲ್‌ ಪರ್ವೇಜ್‌ ಮುಷರಫ್‌ ನಿಧನರಾದರು. ದುಬೈ ಆಸ್ಪತ್ರೆಯಲ್ಲಿ ಪರ್ವೇಜ್‌ ಮುಷರಫ್‌ ನಿಧನರಾಗಗಿದ್ದಾರೆ ಎಂದು ಪಾಕ್‌ ಮೂಲದ ಜಿಯೋ ನ್ಯೂಸ್‌ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಬಹು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದುಬೈನ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 79 ವರ್ಷ ವಯಸ್ಸಿನ ಪರ್ವೇಜ್‌ ಮುಷರಫ್‌ ನಿಧನರಾಗಿದ್ದಾರೆ ಎಂದೂ ವರದಿ ತಿಳಿಸಿದೆ.

ಮನುಕುಲದ ಅತ್ಯಂತ ಭೀಕರ ಭೂಕಂಪ: ಸಿರಿಯಾ ಹಾಗೂ ಟರ್ಕಿಯಲ್ಲಿ ಭೀಕರ ಭೂಕಂಪನ ಸಂಭವಿಸಿದ್ದು, ಪರಿಣಾಮ ಮಲಗಿದ್ದ 180ಕ್ಕೂ ಹೆಚ್ಚು ಮಂದಿ ಸಜೀವ ಭೂ ಸಮಾಧಿಯಾಗಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಫೆ.6ರ ನಸುಕಿನ ಜಾವ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ಸುಮಾರು 200 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಅನೇಕರು ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದಾಗಲೇ ಭೂಕಂಪ ಸಂಭವಿಸಿದ್ದು, ಭೂಕಂಪನದ ತೀವ್ರತೆಗೆ ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು ಕುಸಿದ ಪರಿಣಾಮ ಅಂದಾಜು 200 ಜನ ಸಜೀವ ಸಮಾಧಿಯಾಗಿದ್ದಾರೆ. ಸೈಪ್ರಸ್ ದ್ವೀಪ ಹಾಗೂ ಈಜಿಪ್ಟ್‌ನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. 

ಮೂತ್ರ ಕುಡಿದು ಬದುಕಿ ಬಂದ 17 ವರ್ಷದ ಯುವಕ: ಭೂಕಂಪದಿಂದ ಅಕ್ಷರಶಃ ನರಕದಂತಾಗಿರುವ ಟರ್ಕಿಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಗುರುವಾರ ರಾತ್ರಿ ಟರ್ಕಿಯ ರಕ್ಷಣಾ ಸಿಬ್ಬಂದಿಗಳು ಭೂಕಂಪದ ಕೇಂದ್ರಬಿಂದುವಾದ ದಕ್ಷಿಣ ಗಾಜಿಯಾಟೆಂಪ್‌ ಪ್ರಾಂತ್ಯದಲ್ಲಿ ಕುಸಿದ ಅಪಾರ್ಟ್‌ಮೆಂಟ್‌ನ ಕಟ್ಟಡದ ಕೆಳಗಿನಿಂದ 17 ವರ್ಷದ ಯುವಕನನ್ನು ಜೀವಂತವಾಗಿ ಹೊರತೆಗೆಯಲು ಯಶಸ್ವಿಯಾಗಿದ್ದಾರೆ. ಭೂಕಂಪ ಸಂಭವಿಸಿದ 94 ಗಂಟೆಗಳ ಬಳಿಕ ಯುವಕನ್ನು ಹೊರತೆಗೆಯಲಾಗಿದೆ. 

ಕೆನಡಾ ಹುಡುಗಿಗೆ ಒಲಿಯತು ಜಾಕ್‌ಪಾಟ್‌: ಕೆನಡಾದ ಯುವತಿ ತನ್ನ 18ನೇ ವರ್ಷದ ಹುಟ್ಟು ಹಬ್ಬಕ್ಕೆ ಲಾಟರಿ ಖರೀದಿಸಿದ್ದಾಳೆ. ಇದೂ ಕೂಡ ತನ್ನ ಅಜ್ಜ ನೀಡಿದ ಸಲಹೆ. ಈಕೆಗೆ ಲಾಟರಿ ಖರೀದಿಸುವುದು, ಅದರಲ್ಲಿನ ನಂಬರ್ ಯಾವುದರ ಬಗ್ಗೆಯೂ ಎಳ್ಳಷ್ಟು ಜ್ಞಾನವಿಲ್ಲ. ಆದರೆ ಅಜ್ಜ ಸಲಹೆ ನೀಡಿದ್ದು ಮಾತ್ರವಲ್ಲ ಒತ್ತಾಯ ಮಾಡಿದ್ದಾರೆ. ಹೀಗಾಗಿ ಕೆನಡಾದ ಲುಟ್ಟೋ ಲಾಟರಿ ಖರೀದಿಸಿದ್ದಾಳೆ. ಬಳಿಕ ಮರೆತು ಬಿಟ್ಟಿದ್ದಾಳೆ. ಫಲಿತಾಂಶ ನೋಡಿದಾಗ ಈಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾರಣ ಬರೋಬ್ಬರಿ 290 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾಳೆ. ಈ ಕೋಟಿ ಒಡತಿಯ ಹೆಸರು ಜೂಲಿಟ್ ಲ್ಯಾಮೋರ್. 

ರಾಮಮಂದಿರದ ಮೇಲೆ ಖಲಿಸ್ತಾನಿ ಬರಹ: ಕೆನಡಾ ರಾಜಧಾನಿ ಟೊರಂಟೋ ಸಮೀಪ ಮಿಸ್ಸಿಸ್ಸೋಗಾ ಪ್ರದೇಶದಲ್ಲಿ ಫೆ.13ರ ರಾತ್ರಿ ಖಲಿಸ್ತಾನಿ ಉಗ್ರರು (Khalistani militant) ಇಲ್ಲಿನ ರಾಮ ಮಂದಿರದ ಗೋಡೆಯ ಮೇಲೆ ಭಾರತ ವಿರೋಧಿ ಹಾಗೂ ಮೋದಿ ವಿರೋಧಿ ಬರಹಗಳನ್ನು ಬರೆದು ವಿರೂಪಗೊಳಿಸಿದ್ದಾರೆ. ಗೋಡೆಯ ಮೇಲೆ ಮೋದಿಯನ್ನು ಉಗ್ರ ಎಂದು ಘೋಷಿಸಿ, ಹಿಂದುಸ್ತಾನ್‌ ಮುರ್ದಾಬಾದ್‌ ಎಂದು ಬರೆದು ಖಲಿಸ್ತಾನಿ ಹೋರಾಟಗಾರ ಭಿಂದ್ರನ್‌ವಾಲೆ ಪರ ಬರಹಗಳನ್ನು ಗೀಚಲಾಗಿದೆ. 

ಪಾಕಿಸ್ತಾನದ ಹಣಕಾಸು ಒದ್ದಾಟ: ಸಾಲ ಪಡೆಯಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಓಲೈಸುವ ಕಾರ್ಯವನ್ನು ಮುಂದುವರೆಸಿರುವ ಪಾಕಿಸ್ತಾನ ಸರ್ಕಾರ ಗುರುವಾರ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ದಾಖಲೆಯ ಪ್ರಮಾಣದಲ್ಲಿ ಏರಿಸಿ ಜನರಿಗೆ ಶಾಕ್‌ ನೀಡಿದೆ. ಪೆಟ್ರೋಲ್‌ ಬೆಲೆ ಲೀಟರ್‌ಗೆ 22.20 ರು. ಹೆಚ್ಚಳ ಮಾಡಿದ್ದು, ಒಂದು ಲೀಟರ್‌ ಪೆಟ್ರೋಲ್‌ ಬೆಲೆ 272 ರು. ತಲುಪಿದೆ. ಹೈಸ್ಪಿಡ್‌ ಡಿಸೇಲ್‌ ಬೆಲೆ 17.20 ರು. ಹೆಚ್ಚಳ ಮಾಡಲಾಗಿದ್ದು, ಪ್ರತಿ ಲೀಟರ್‌ಗೆ 280 ರೂ.. ಹಾಗೂ ಸೀಮೆಎಣ್ಣೆ 12.90 ರು. 202 ರು. ಗೆ ಏರಿಕೆ ಮಾಡಲಾಗಿದೆ. ಸಾಲ ನೀಡುವ ಮುನ್ನ ಆದಾಯ ಹೆಚ್ಚಿಸುವಂತೆ ಪಾಕಿಸ್ತಾನಕ್ಕೆ ಷರತ್ತು ಹಾಕಿತ್ತು. ಪೆಟ್ರೋಲ್‌, ಡಿಸೇಲ್‌ ಬೆಲೆಏರಿಕೆಯು ಐಎಂಎಫ್‌ ಷರತ್ತಿನಲ್ಲಿ ಒಂದಾಗಿತ್ತು.

ವಿಶ್ವಬ್ಯಾಂಕ್‌ಗೆ ಅಜಯ್‌ ಬಂಗಾ: ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಭಾರತೀಯ ಮೂಲದ ಅಧಿಕಾರಿ ಅಜಯ್‌ ಬಂಗಾ ಅವರ ಹೆಸರನ್ನು ವಿಶ್ವಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ. ಈ ಕುರಿತಾಗಿ ಶ್ವೇತಭವನ ಕೂಡ ಅಧಿಕೃತ ಪ್ರಕಟಣೆ ಹೊರಡಿಸಿದೆ. ಪ್ರಸ್ತುತ ವಿಶ್ವಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡೇವಿಡ್‌ ಮಾಲ್ಪಾಸ್‌ ಅವಧಿಗಿಂತ ಮುನ್ನವೇ ತಮ್ಮ ಸ್ಥಾನ ತೊರೆಯುವುದಾಗಿ ಹೇಳಿರುವ ಕಾರಣ, ಅವರ ಸ್ಥಾನಕ್ಕೆ ಅಜಯ್‌ ಬಂಗಾ ಹೆಸರನ್ನು ಶಿಫಾರಸು ಮಾಡಿರುವುದಾಗಿ ಬಿಡೆನ್‌ ಸರ್ಕಾರ ಘೋಷಣೆ ಮಾಡಿದೆ. 

Sports Flashback 2023: ಏಪ್ರಿಲ್‌ನಲ್ಲಿ ಐಪಿಎಲ್ ಕಿಕ್‌, ಮುರುಳಿ ಬಯೋಪಿಕ್ ಪೋಸ್ಟರ್ ಔಟ್..!

ರಷ್ಯಾ ಉಕ್ರೇಕ್‌ ಯುದ್ಧಕ್ಕೆ 1 ವರ್ಷ: ಉಕ್ರೇನಿನ ಮೇಲೆ ರಷ್ಯಾ ನಡೆಸಿದ ಯುದ್ಧವನ್ನು ಸಂಖ್ಯೆಯಲ್ಲಿ ಹೇಳುವುದಾದರೆ, ಸಾಮೂಹಿಕ ಹತ್ಯೆ, ಬಿಲಿಯನ್‌ಗಟ್ಟಲೆ ಸಹಾಯ, ಸಾವಿರಾರು ನಾಶಗೊಂಡ ಟ್ಯಾಂಕ್‌ಗಳು, ಹಾಗೂ ರಷ್ಯಾದ ಅಪ್ರಚೋದಿತ ದಾಳಿಯ ಇನ್ನಷ್ಟು ಅಂಕಿ ಸಂಖ್ಯೆಗಳೇ ನಮ್ಮ ಕಣ್ಣಿಗೆ ಬೀಳುತ್ತವೆ. ಫೆಬ್ರವರಿ 24, 2023ರಂದು ರಷ್ಯಾ ಉಕ್ರೇನ್ ಮೇಲೆ ನಡೆಸಿದ ದಾಳಿಗೆ ಒಂದು ವರ್ಷ ಪೂರ್ಣಗೊಂಡಿತು.

Throwback 2023: ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಜೋಡಿಗಳಿವು!

ವಿಶ್ವಸಂಸ್ಥೆಯಲ್ಲಿ ಕೈಲಾಸದ ಪ್ರತಿನಿಧಿ: ವಿವಾದಿತ ಸ್ವಯಂ ಘೋಷಿತ ದೇವಮಾನ ಬಿಡದಿ ನಿತ್ಯಾನಂದ ಇದೀಗ ಮತ್ತೆ ಬಾರಿ ಸಂಚಲನ ಸೃಷ್ಟಿಸಿದ್ದಾರೆ. ಹಲವು ಆರೋಪಗಳನ್ನು ಹೊತ್ತು ಭಾರತದಿಂದ ಪರಾರಿಯಾಗಿ ದ್ವೀಪ ರಾಷ್ಟ್ರ ಖರೀದಿಸಿ ಕೈಲಾಸ ಎಂದು ಹೆಸರಿಟ್ಟು ಆಡಳಿತ ನಡೆಸುತ್ತಿರುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಸೃಷ್ಟಿಯಾದ ಕೈಲಾಸ ದೇಶ ಇದೀಗ ವಿಶ್ವಸಂಸ್ಥೆಯ ಮಹತ್ವದ ಸಮ್ಮೇಳನದಲ್ಲಿ ಭಾಗಿಯಾಗಿದೆ. ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಗಳು ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ.