ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ: ಮತ್ತೆ ಮೂರು ಸನ್ಯಾಸಿಗಳ ಸೆರೆ
ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಮತ್ತೋರ್ವ ಇಸ್ಕಾನ್ ಅರ್ಚಕರನ್ನು ಬಂಧಿಸಿರುವುದಕ್ಕೆ ಭಾರತದಲ್ಲಿನ ಇಸ್ಕಾನ್ ತೀವ್ರವಾಗಿ ಆಕ್ರೋಶ ಹೊರಹಾಕಿದೆ. ಬಾಂಗ್ಲಾ ಸರ್ಕಾರ ಹಿಂದೂಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದೆ. ಜೊತೆಗೆ ರಾಜದಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದ ಹಲವು ನಗರಗಳಲ್ಲಿ ಹಿಂದೂಗಳು ಪ್ರತಿಭಟನೆ ನಡೆಸಿ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಢಾಕಾ(ಡಿ.01): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದ್ದು, ಇದೀಗ ಇಸ್ಕಾನ್‌ನ ಮತ್ತೂ ಮೂವರು ಸನ್ಯಾಸಿಗಳನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಇನ್ನೋರ್ವ ಸನ್ಯಾಸಿ ನಾಪತ್ತೆಯಾಗಿದ್ದು, ಅವರ ಕುರಿತು ಕಳವಳ ವ್ಯಕ್ತವಾಗಿದೆ.
ಇತ್ತೀಚೆಗೆ ದೇಶದ್ರೋಹ, ಭಯೋತ್ಪಾ ದನೆಯ ಸುಳ್ಳು ಆರೋಪ ಹೊರಿಸಿ ಬಂಧಿಸಿದ ಸನ್ಯಾಸಿ ಚಿನ್ಮಯ ಕೃಷ್ಣದಾಸ ಅವರ ಭೇಟಿಗೆ ತೆರಳಿದ್ದ ವೇಳೆ ಆದಿನಾಥ ಪ್ರಭು, ರಂಗನಾಥ ದಾಸ್ ಮತ್ತು ಶ್ಯಾಮ್ ಪ್ರಭು ಎಂಬುವವರನ್ನು ಬಂಧಿಸಲಾಗಿದೆ. ಜೊತೆಗೆ ಬಂಧಿತ ಕೃಷ್ಣದಾಸ ಅವರ ಆಪ್ತ ಕಾವ್ಯದರ್ಶಿನಾಪತ್ತೆಯಾಗಿದ್ದಾರೆ ಎಂದು ಇಸ್ಕಾನ್ ಕೋಲ್ಕತಾದ ವಕ್ತಾರ ರಾಧಾರಾಮ್ ದಾಸ್ ಹೇಳಿದ್ದಾರೆ. ಜೊತೆಗೆ ಬಂಧಿತರೇನು ಉಗ್ರರೇ ಎಂದು ರಾಧಾರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂವರಿಗೂ ವಾರೆಂಟ್ ಸಹ ನೀಡದೆ ಏಕಾಏಕಿ ಬಂಧಿಸಿ ಕರೆದೊಯ್ಯಲಾಗಿದೆ ಎಂದು ಆರೋಪಿಸಲಾಗಿದೆ.
ಬಂಧಿಸಲ್ಪಟ್ಟ ಚಿನ್ಮೊಯ್ ಕೃಷ್ಣದಾಸ್ ಅವರನ್ನೇ ಉಚ್ಚಾಟಿಸಿದ ಬಾಂಗ್ಲಾದೇಶದ ಇಸ್ಕಾನ್
ಬಂಧನಕ್ಕೆ ತೀವ್ರ ಆಕ್ರೋಶ:
ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಮತ್ತೋರ್ವ ಇಸ್ಕಾನ್ ಅರ್ಚಕರನ್ನು ಬಂಧಿಸಿರುವುದಕ್ಕೆ ಭಾರತದಲ್ಲಿನ ಇಸ್ಕಾನ್ ತೀವ್ರವಾಗಿ ಆಕ್ರೋಶ ಹೊರಹಾಕಿದೆ. ಬಾಂಗ್ಲಾ ಸರ್ಕಾರ ಹಿಂದೂಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದೆ. ಜೊತೆಗೆ ರಾಜದಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದ ಹಲವು ನಗರಗಳಲ್ಲಿ ಹಿಂದೂಗಳು ಪ್ರತಿಭಟನೆ ನಡೆಸಿ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾನ್ನರಿಗೆ ಆಸ್ಪತ್ರೆ ಪ್ರವೇಶ ಇಲ್ಲ
ಕೋಲ್ಕತಾ/ ಅಗರ್ತಲಾ: ಬಾಂಗ್ಲಾದೇಶದಲ್ಲಿ ಹಿಂದೂಗಳಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಭಾರತದ ರಾಷ್ಟ್ರಧ್ವಜಕ್ಕೆ ಅವಮಾನದ ಘಟನೆಯನ್ನು ಖಂಡಿಸಿ, ಯಾವುದೇ ಬಾಂಗ್ಲಾದೇಶದ ನಾಗರಿಕರಿಗೆ ಚಿಕಿತ್ಸೆ ನೀಡದೇ ಇರಲು ಕೋಲ್ಕತಾ ಮತ್ತು ತ್ರಿಪುರಾ ರಾಜಧಾನಿ ಅಗರ್ತಲಾದ 2 ಖಾಸಗಿ ಆಸ್ಪತ್ರೆಗಳು ನಿರ್ಧರಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಕೋಲ್ಕತಾ ಜೆ.ಎನ್.ರೇ ಆಸ್ಪತ್ರೆಯ ಅಧಿಕಾರಿ ಯೊಬ್ಬರು, 'ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ, ಲೂಟಿಯಂಥ ಪ್ರಕರಣಗಳು ಹೆಚ್ಚುತ್ತಿವೆ. ಜೊತೆಗೆ ಭಾರತದ ರಾಷ್ಟ್ರಧ್ವಜ ಅವಮಾನಿಸುವಂಥ ಘಟನೆಗಳೂ ನಡೆಯುತ್ತಲೇ ಇವೆ. ಇದನ್ನು ಖಂಡಿಸಿ ಭಾನುವಾರದಿಂದಲೇ ಯಾವುದೇ ಬಾಂಗ್ಲಾ ಪ್ರಜೆಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ. ಜೊತೆಗೆ ನಗರದ ಉಳಿದ ಆಸ್ಪತ್ರೆಗಳು ಇದೇ ನೀತಿ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.
ಮತ್ತೊಂದೆಡೆ ಅರ್ಗತಲಾದ ಐಎಲ್‌ಎಸ್ ಆಸ್ಪತ್ರೆ ಕೂಡಾ ಇದೇ ನಿರ್ಧಾರ ಕೈಗೊಂಡಿದೆ. ಈ ಎರಡೂ ಆಸ್ಪತ್ರೆಗಳು ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವ ಕಾರಣ ಮತ್ತು ಅಗ್ಗದ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರನ್ನು ಸೆಳೆಯುತ್ತಿವೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಲಿ: ಅರ್‌ಎಸ್‌ಎಸ್
ನವದೆಹಲಿ: 'ಬಾಂಗ್ಲಾದೇಶದ ಮಧ್ಯಂತರ ಸರ್ಕಾರ, ತನ್ನ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು. ಅಲ್ಲಿ ಬಂಧನಕ್ಕೆ ಒಳಗಾಗಿರುವ ಇಸ್ಕಾನ್ ಸನ್ಯಾಸಿ ಚಿನ್ಮಯ್ ಕೃಷ್ಣದಾಸ್ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು' ಎಂದು ಆರ್ ಎಎಸ್ ಆಗ್ರಹಿಸಿದೆ.
ಬಾಂಗ್ಲಾದೇಶದಲ್ಲಿ ಇಸ್ಕಾನ್‌ಗೆ ನಿಷೇಧವಿಲ್ಲ: ಹೈಕೋರ್ಟ್
ಈ ಕುರಿತು ಮಾತನಾಡಿರುವ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ 'ಭಾರತ ಸರ್ಕಾ ರವು ಬಾಂಗ್ಲಾದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ವನ್ನು ತಡೆಯಲು ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಿದೆ. ಸಾಧ್ಯವಾದಷ್ಟು ಬೇಗ ಈ ಬಗ್ಗೆ ಜಾಗತಿಕ ಅಭಿಪ್ರಾಯಗಳನ್ನು ರೂಪಿಸಲು ಮುಂದಾಗಿದೆ.
ಬಾಂಗ್ಲಾದಲ್ಲಿ ಹಿಂದೂಗಳು, ಮಹಿಳೆಯರು ಮತ್ತು ಎಲ್ಲ ಅಲ್ಪಸಂಖ್ಯಾತರ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿಗಳು, ಕೊಲೆಗಳು, ಲೂಟಿಗಳು, ಬೆಂಕಿ ಹಚ್ಚುವಿಕೆ ಮತ್ತು ಅಮಾನವೀಯ ದೌರ್ಜ ನ್ಯಗಳು ಕಳವಳಕಾರಿಯಾಗಿದೆ. ಅತ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದನ್ನು ಖಂಡಿಸುತ್ತದೆ. ಇದನ್ನು ತಡೆಯುವ ಬದಲು ಈಗಿನ ಬಾಂಗ್ಲಾ ಸರ್ಕಾರ ಮತ್ತು ಇತರ ಸಂಸ್ಥೆಗಳು ಮೂಕ ಪ್ರೇಕ್ಷಕರಾಗಿವೆ ' ಎಂದು ಹೊಸಬಾಳೆ ಟೀಕಿಸಿದ್ದಾರೆ.