ವುಹಾನ್‌(ಏ.08): ಕೊರೋನಾ ವೈರಸ್‌ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್‌ ನಗರದಲ್ಲಿ ಕಳೆದ 2 ತಿಂಗಳಿನಿಂದ ವಿಧಿಸಲಾಗಿದ್ದ ಸಂಚಾರ ನಿರ್ಬಂಧ ಮಂಗಳವಾರ ಮಧ್ಯರಾತ್ರಿಯಿಂದ ತೆರವಾಗಿದೆ.

2 ತಿಂಗಳಿನಿಂದ ಈ ನಗರದಲ್ಲಿ ಸಿಲುಕಿದ್ದ ಸಹಸ್ರಾರು ಜನರು ವಿವಿಧ ಭಾಗಕ್ಕೆ ತೆರಳಲು ರೈಲು ನಿಲ್ದಾಣಕ್ಕೆ ದಾಂಗುಡಿ ಇಟ್ಟಿದ್ದಾರೆ.

ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!

ವಿಶ್ವಾದ್ಯಂತ ಕೊರೋನಾ ವ್ಯಾಪಕವಾಗಿ ಹಬ್ಬಿರುವ ಸಂದರ್ಭದಲ್ಲೇ ಚೀನಾ ವುಹಾನ್‌ ನಗರವನ್ನು ಸಂಚಾರ ಮುಕ್ತಗೊಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಪ್ರಾಣಿ ಮಾರುಕಟ್ಟೆಯಲ್ಲೂ ವ್ಯಾಪಾರಕ್ಕೆ ಆ ದೇಶ ಅವಕಾಶ ಕಲ್ಪಿಸಿತ್ತು.

"