ಬೀಜಿಂಗ್[ಮಾ.14]: ಚೀನಾ​ದ ಮೂಲದ ಕೊರೋ​ನಾ ವೈರ​ಸ್‌ಗೆ ಇಡೀ ಜಗತ್ತೇ ತಲ್ಲ​ಣಿ​ಸು​ತ್ತಿದೆ. ಮಾರ​ಣಾಂತಿಕ ಕೊರೋನಾ ವೈರಸ್‌ ವಿರುದ್ಧ ಹೋರಾ​ಡುವ ಲಸಿ​ಕೆ ಲಭ್ಯ​ವಾ​ಗ​ಬೇ​ಕೆಂದ​ರೆ ಇನ್ನೂ ಕನಿಷ್ಠ 2 ವರ್ಷ ಬೇಕಾ​ಗ​ಬ​ಹುದು ಎನ್ನ​ಲಾ​ಗು​ತ್ತಿದೆ. ಈ ನಡುವೆ ಯಾವುದೇ ಲಸಿಕೆ, ಔಷ​ಧ​ಗಳು ಇಲ್ಲ​ದಿ​ದ್ದರೂ ಚೀನಾ​ದಲ್ಲಿ ಸೋಂಕಿ​ತರ ಸಂಖ್ಯೆ ಬಹುತೇಕ ನಗಣ್ಯ ಪ್ರಮಾಣಕ್ಕೆ ಇಳಿಕೆಯಾಗಿದೆ. ಕೊರೋನಾವೈರಸ್‌ನ ಕೇಂದ್ರವಾಗಿದ್ದ ವುಹಾನ್‌ ಪ್ರಾಂತವು ತಾನೀಗ ಈ ವೈರಸ್‌ ಸೋಂಕನ್ನು ಗೆದ್ದಿರುವುದಾಗಿ ಘೋಷಿಸಿಕೊಂಡಿದೆ. ಹಿಂದೆ ದಿನವೊಂದಕ್ಕೆ ಸಾವಿ​ರಾರು ಜನರು ಸೋಂಕಿ​ತ​ರಾ​ಗು​ತ್ತಿ​ದ್ದರೆ, ಇದೀಗ ಈ ಸಂಖ್ಯೆ 10ಕ್ಕಿಂತ ಕಡಿಮೆಗೆ ಇಳಿದಿದೆ.

ಚೀನಾದಲ್ಲಿ ಒಂದಂಕಿಗೆ ಇಳಿದ ಸೋಂಕಿ​ತರ ಸಂಖ್ಯೆ

ಮಾರ​ಣಾಂತಿಕ ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಇಡೀ ಜಗತ್ತು ಟೊಂಕ ಕಟ್ಟಿನಿಂತಿದೆ. ಅತ್ತ ಕೊರೋ​ನಾ​ದಿಂದ ಅತಿ ಹೆಚ್ಚು ಹಾನಿಗೆ ಒಳ​ಗಾದ ಚೀನಾ ವೈರಸ್‌ ಬಗ್ಗು​ಬ​ಡಿ​ಯು​ವಲ್ಲಿ ಯಶಸ್ಸು ಕಾಣು​ತ್ತಿದೆ. ಚೀನಾದಲ್ಲಿ ವೈರಸ್‌ಗೆ ಬಲಿಯಾಗುತ್ತಿರುವ ಮತ್ತು ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖದತ್ತ ಸಾಗಿದೆ. ಸೋಂಕಿತರ ಸಂಖ್ಯೆ ಮೊದಲ ಬಾರಿಗೆ ಒಂದಂಕಿಗೆ ಕುಸಿದಿದೆ. ವುಹಾನ್‌ನಲ್ಲಿ ಕೇವಲ 8 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇದೇ ವೇಳೆ ಮೃತರ ಸಂಖ್ಯೆ 11ಕ್ಕೆ ಕುಸಿದಿದೆ. ಹುಬೇ ಪ್ರಾಂತ್ಯದ 16 ನಗರಗಳಲ್ಲಿ ಕಳೆದ 7 ದಿನಗಳಿಂದಲೂ ಹೊಸದಾಗಿ ಕೊರೋನಾಕ್ಕೆ ಸಿಲುಕಿದ ಬಗ್ಗೆ ವರದಿಗಳಿಲ್ಲ. ಇಡೀ ದೇಶ​ದಲ್ಲಿ ಮಾಚ್‌ರ್‍ 12ರಂದು ಬರೀ 15 ಹೊಸ ಪ್ರಕ​ರ​ಣ​ಗಳು ಮಾತ್ರ ಪತ್ತೆ​ಯಾ​ಗಿ​ವೆ. ಆರಂಭ​ದಲ್ಲಿ ಕೊರೋನಾವೈರಸ್‌ ಒಬ್ಬ ಸೋಂಕಿತನಿಂದ ಸರಾಸರಿ 3.8 ಜನರಿಗೆ ಹರಡುತ್ತಿತ್ತು. ಈಗ ಅದು ಒಬ್ಬ ಸೋಂಕಿತನಿಂದ 0.32 ಜನರಿಗೆ ಮಾತ್ರ ಹರಡುತ್ತಿದೆ. ಈ ದರ 1ಕ್ಕಿಂತ ಇಳಿ​ಕೆ​ಯಾ​ದಾ​ಗಲೇ ಮಾರ​ಣಾಂತಿಕ ಸೋಂಕು ಕಡಿ​ಮೆ​ಯಾ​ಗಿದೆ ಎಂದು ಪರಿ​ಗ​ಣಿ​ಸ​ಲಾ​ಗಿದೆ.

ಕರ್ನಾಟಕದಷ್ಟು ಜನಸಂಖ್ಯೆಯ ಇಟಲಿಯಲ್ಲೇಕೆ ಇಷ್ಟು ಸಾವು?

ಚೀನಾ ಮಾಡಿ​ದ್ದೇ​ನು?

ವ್ಯಾಪ​ಕ​ವಾಗಿ ಹರಡಿ ಸಾವಿ​ರಾರು ಜೀವ​ಗ​ಳನ್ನು ಬಲಿ ಪಡೆ​ಯು​ತ್ತಿದ್ದ ಕೊರೋನಾ ವೈರಸ್‌ ನಿಯಂತ್ರ​ಣಕ್ಕೆ ಪಣ ತೊಟ್ಟಚೀನಾ ಕ್ರಮ​ವನ್ನು ‘ಸಾ​ಮಾ​ಜಿಕ ಪರ​ಮಾಣು ಶಸ್ತ್ರಾ​ಸ್ತ್ರ’ ಎಂದೇ ಬಣ್ಣಿ​ಸ​ಲಾ​ಗು​ತ್ತಿದೆ. ವೈರಸ್‌ ವ್ಯಾಪ​ಕ​ವಾ​ಗು​ತ್ತಿ​ದ್ದಂತೆಯೇ ಅಲ್ಲಿನ ಸರ್ಕಾರ ತುರ್ತು ಕ್ರಮ ಜರು​ಗಿ​ಸಿ​ತ್ತು. ಅದ​ರಲ್ಲೂ ಮುಖ್ಯ​ವಾಗಿ ಇಡೀ ಚೀನಾ ಒಗ್ಗ​ಟ್ಟಿ​ನಿ​ಂದ ಮುಂಜಾ​ಗ್ರತಾ ಕ್ರಮ ಕೈಗೊಂಡಿದ್ದೇ ವೈರಸ್‌ ನಿಯಂತ್ರ​ಣಕ್ಕೆ ಬರಲು ಪ್ರಮುಖ ಕಾರಣ ಎನ್ನ​ಲಾ​ಗು​ತ್ತಿದೆ. ವೈರಸ್‌ ವಿರುದ್ಧ ಚೀನಾ ಕೈಗೊಂಡ ಪ್ರಮುಖ ಮಾರ್ಗೋ​ಪಾ​ಯ​ಗ​ಳೆಂದ​ರೆ..

- ಜನ​ವರಿ 23ರಿಂದ 93 ಕೋಟಿ ಜನರ ಚಲ​ನ​ವ​ಲನ​ಗಳ ಮೇಲೆ ನಿರ್ಬಂಧ ವಿಧಿ​ಸಿ​ತ್ತು.

- ವಸತಿ ಪ್ರದೇಶ ಮತ್ತು ಕಚೇ​ರಿ​ಗಳ ಆವ​ರ​ಣ​ದಲ್ಲಿ ಅಥವಾ ಪ್ರವೇ​ಶ​ದ್ವಾ​ರ​ಗಳಲ್ಲಿ ದೇಹದ ಉಷ್ಣಾಂಶ ಮತ್ತು ಪ್ರವಾ​ಸದ ಇತಿ​ಹಾ​ಸ​ವನ್ನು ಪರಿ​ಶೀ​ಲನೆ ನಡೆ​ಸ​ಲಾ​ಗು​ತ್ತಿ​ತ್ತು.

- ಒಂದು ಮನೆಗೆ ಒಬ್ಬ ವ್ಯಕ್ತಿ ಮಾತ್ರ ಹೊರ​ಬ​ರಲು ಅವ​ಕಾಶ ನೀಡ​ಲಾ​ಗಿ​ತ್ತು.

- ಪ್ರತಿ ಮನೆ ಮನೆ​ಗ​ಳಿಗೆ ಆಹಾರ, ಆಸ್ಪ​ತ್ರೆ​ಗ​ಳಿಗೆ ಔಷ​ಧ​ಗ​ಳನ್ನು ಒದ​ಗಿ​ಸಲು ಚಾಲ​ಕ​ರನ್ನು ನಿಯೋ​ಜಿ​ಸ​ಲಾ​ಗಿ​ತ್ತು.

- ಎಲ್ಲಾ ಶಾಲೆಗಳನ್ನು ಮುಚ್ಚಿ ಆನ್‌ಲೈನ್‌ ಮೂಲಕ ಪಾಠ​ ಮಾ​ಡ​ಲಾ​ಗು​ತ್ತಿ​ತ್ತು.

ಕೊರೋನಾ ತಗುಲಿಸಿಕೊಂಡರೆ, ಈ ಕಂಪನಿ ಕೊಡುತ್ತೆ ದೊಡ್ಡ ಮೊತ್ತ!

ಮೊಬೈಲ್‌ ಬಳಸಿ ಜನರ ಮೇಲೆ ನಿಗಾ

ಸೀನು, ಕೆಮ್ಮಿನ ಮೂಲ​ಕವೂ ಮನು​ಷ್ಯರ ದೇಹ​ದೊ​ಳಗೆ ಸೇರಿ ವ್ಯಾಪ​ಕ​ವಾಗಿ ಹಬ್ಬು​ತ್ತಿದ್ದ ಕೊರೋನಾ ವೈರಸ್‌ ನಿಯಂತ್ರ​ಣಕ್ಕೆ ಗುಂಪು​ ಗೂ​ಡ​ದಿ​ರು​ವುದು ಮತ್ತು ಶುಚಿ​ಯಾ​ಗಿ​ರು​ವು​ದೇ ಮೂಲ ಮಂತ್ರ. ಈ ಹಿನ್ನೆ​ಲೆ​ಯಲ್ಲಿ ಜನರ ಚಲ​ನ​ವ​ಲ​ನ​ಗಳ ವೀಕ್ಷ​ಣೆಗೆ ಮತ್ತು ನಿರ್ಬಂಧಕ್ಕೆ ಚೀನಾಗೆ ಸಹಾ​ಯ​ಕ​ವಾ​ಗಿದ್ದು ಟೆಲಿಕಾಂ ಕಂಪನಿಗಳು. ಜನರ ಪ್ರವಾ​ಸದ ಇತಿ​ಹಾಸ, ಕೊರೋನಾ ಸೋಂಕಿತ ಪ್ರದೇ​ಶ​ಗ​ಳಲ್ಲಿ ಎಷ್ಟುಸಮಯ ಕಳೆ​ದಿದ್ದಾರೆ, ವೈರಸ್‌ ಹರ​ಡುವ ಸಂಭವ ಎಷ್ಟಿದೆ ಇತ್ಯಾ​ದಿ​ಗ​ಳನ್ನು ಆಧ​ರಿಸಿ ಮೊಬೈಲ್‌ ಮೂಲಕ ವ್ಯಕ್ತಿ​ಗ​ಳನ್ನು ಪತ್ತೆ ಹಚ್ಚಿ ಪರೀ​ಕ್ಷೆಗೆ ಒಳ​ಪ​ಡಿ​ಸ​ಲಾ​ಗಿತ್ತು. ಈ ಅಂಶ​ಗಳ ಆಧಾ​ರದ ಮೇಲೆ ಅವರ ಆರೋಗ್ಯ ಸ್ಥಿತಿ​ಯನ್ನು ಪರಿ​ಶೀ​ಲಿ​ಸಿ ಹಸಿರು, ಹಳದಿ ಮತ್ತು ಕೆಂಪು ಪಟ್ಟಿಯನ್ನು ನೀಡ​ಲಾ​ಗು​ತ್ತಿತ್ತು. ಹಲ​ವಾರು ಚೀನಾ ಕಂಪ​ನಿಗಳು ಮಾಸ್ಕ್‌ ಧರಿ​ಸದ ಜನ​ರಿಗೆ ಜ್ವರ ಇರುವು​ದನ್ನು ಪತ್ತೆ ಹಚ್ಚಲು ಅಥವಾ ರೋಗ ಲಕ್ಷ​ಣ​ಗ​ಳನ್ನು ಪತ್ತೆ ಹಚ್ಚಲು ಫೇಶಿ​ಯಲ್‌ ರೆಕ​ಗ್ನಿ​ಷನ್‌ ತಂತ್ರ​ಜ್ಞಾ​ನ​ವನ್ನು ಬಳಕೆ ಮಾಡಿ​ದ್ದ​ವು.

ಡ್ರೋನ್‌ ಮತ್ತು ಡೇಟಾ ಮೂಲಕ ಜನರಿಗೆ ಎಚ್ಚರಿಕೆ

ಒಂದು ವಾರ​ದಿಂದೀ​ಚೆಗೆ ಚೀನಾ​ದಲ್ಲಿ ಸೋಂಕಿ​ತರ ಪ್ರಮಾಣ ಗಣ​ನೀ​ಯ​ವಾಗಿ ಇಳಿ​ಕೆ​ಯಾ​ಗು​ತ್ತಿ​ದೆ. ಈ ಇಳಿ​ಕೆಗೆ ಮೂಲ ಕಾರಣ ಚೀನಾ ಸರ್ಕಾರ ಕೈಗೊಂಡ ಕಟ್ಟ​ನಿ​ಟ್ಟಿನ ಕ್ರಮ. ಅದ​ರಲ್ಲೂ ಪ್ರತಿ ಬೀದಿ ಬೀದಿ​ಯಲ್ಲಿ ಡ್ರೋನ್‌ ಕಾರಾರ‍ಯ​ಚ​ರಣೆ ಮೂಲಕ, ಯಾರು ಮಾಸ್ಕ್‌ ಧರಿ​ಸಿ​ದ್ದಾರೆ, ಯಾರು ನಿಯ​ಮ ಉಲ್ಲಂಘಿ​ಸು​ತ್ತಿ​ದ್ದಾರೆ, ಯಾರು ಗುಂಪು​ಗೂ​ಡಿ​ದ್ದಾರೆ ಎಂಬ ಬಗ್ಗೆ ಕಣ್ಗಾ​ವ​ಲಿಟ್ಟು ಕ್ಷಣ ಕ್ಷಣದ ಮಾಹಿ​ತಿ​ಯನ್ನು ಕಲೆ ಹಾಕ​ಲಾ​ಗು​ತ್ತಿತ್ತು.

10 ದಿನ​ದಲ್ಲಿ ಆಸ್ಪ​ತ್ರೆ ನಿರ್ಮಾಣ!

ಕೊರೋನಾ ವೈರಸ್‌ ಸಾರ್ಸ್‌ನ ಇನ್ನೊಂದು ರೂಪ ಎನ್ನು​ವುದು ಖಚಿ​ತ​ವಾ​ಗು​ತ್ತಿ​ದ್ದಂತೆ ಮತ್ತು ಸೋಂಕಿ​ತರ ಪ್ರಮಾಣ ದಿನ​ದಿಂದ ದಿನಕ್ಕೆ ಸಾವಿ​ರಾರು ಸಂಖ್ಯೆ​ಯಲ್ಲಿ ಹೆಚ್ಚು​ತ್ತಿ​ದ್ದಂತೆಯೇ ಚೀನಾ ಕೊರೋನಾ ಚಿಕಿ​ತ್ಸೆ​ಗಾ​ಗಿಯೇ ಬರೀ 10 ದಿನ​ದಲ್ಲಿ ವುಹಾ​ನ್‌​ನಲ್ಲಿ 1000 ಹಾಸಿಗೆ ಸಾಮ​ರ್ಥ್ಯದ, 25,000 ಚ.ಮೀ ವಿಸ್ತೀ​ರ್ಣ​ದ ಆಸ್ಪ​ತ್ರೆ​ಯನ್ನೇ ನಿರ್ಮಿ​ಸಿತು. ಬರೀ 10 ದಿನ​ದಲ್ಲಿ ಆಸ್ಪತ್ರೆ ನಿರ್ಮಾಣ ಎಂದರೆ ಅದು ಸುಲ​ಭದ ಮಾತಲ್ಲ. 7000ಕ್ಕೂ ಹೆಚ್ಚು ಕಾರ್ಮಿ​ಕರು ದಿನದ ಮೂರು ಪಾಳಿ​ಯಲ್ಲಿ ಕೆಲಸ ಮಾಡಿ ಆಸ್ಪತ್ರೆ ನಿರ್ಮಿ​ಸಿ​ದ್ದರು. ಅದರ ಜೊತೆಗೆ ಉದ್ಘಾ​ಟ​ನೆ​ಯಾದ ಬಳಿ​ಕವೇ ಇಲ್ಲಿಗೆ 1400ಕ್ಕೂ ಹೆಚ್ಚು ವೈದ್ಯರು, ದಾದಿ​ಯರು ಮತ್ತು ಇತರ ಸಿಬ್ಬಂದಿ​ಗ​ಳನ್ನೂ ನಿಯೋ​ಜಿ​ಸಿತ್ತು. ಜೊತೆಗೆ ಎಲ್ಲಾ ರೀತಿಯ ಅತ್ಯಾ​ಧು​ನಿಕ ಸೌಲ​ಭ್ಯ​ಗ​ಳನ್ನು ಒದ​ಗಿ​ಸ​ಲಾ​ಗಿತ್ತು.

10 ದಿನದಲ್ಲಿ ತಲೆ ಎತ್ತಿದ ಅತ್ಯಾಧುನಿಕ ಚೀನಾ ಆಸ್ಪತ್ರೆ, ರೋಗಿಗಳು ದಾಖಲು!

ನಿಯಮ ಉಲ್ಲಂಘಿ​ಸಿದವ​ರಿಗೆ ಶಿಕ್ಷೆ

ಕೊರೋನಾ ಸೋಂಕು ತಡೆ​ಗ​ಟ್ಟಲು ಸರ್ಕಾರ ಸೂಚಿ​ಸಿ​ರುವ ಮುಂಜಾ​ಗ್ರತಾ ಕ್ರಮ​ಗ​ಳನ್ನು ಪಾಲಿ​ಸ​ದಿ​ದ್ದರೆ ಅಂಥ​ವ​ರಿಗೆ 3-7 ವರ್ಷ ಕಾರಾ​ಗೃಹ ಶಿಕ್ಷೆ ಎಂದೂ ಚೀನಾ ಸರ್ಕಾರ ಪ್ರಕ​ಟಿ​ಸಿ​ತ್ತು. ಸಾಮಾ​ಜಿಕ ಜಾಲ​ತಾ​ಣ​ಗಳ ಬಳಕೆಗೆ ಅನು​ಮತಿ ನೀಡಿ, ಸೋಂಕಿ​ತರ ಬಗ್ಗೆ ಮಾಹಿ​ತಿ ನೀಡಲು ಅಥವಾ ನಿಯ​ಮ​ಗ​ಳನ್ನು ಪಾಲಿ​ಸ​ದಿ​ದ್ದ​ವರ ಬಗ್ಗೆ ಮಾಹಿತಿ ನೀಡಲು ಸೂಚಿ​ಸ​ಲಾ​ಗಿತ್ತು. ಕೆಲ ನಗ​ರ​ಗ​ಳಲ್ಲಿ ಈ ಬಗ್ಗೆ ಮಾಹಿತಿ ನೀಡಿ​ದ​ವ​ರಿಗೆ ಬಹು​ಮಾನ ಎಂದೂ ಘೋಷಿ​ಸ​ಲಾ​ಗಿ​ತ್ತು.

ಜಗ​ತ್ತಿ​ಗೆ ವೈರಸ್‌ ಹರಡಲು ಚೀನಾ ವೈಫ​ಲ್ಯವೇ ಕಾರ​ಣ?

ಕೊರೋನಾ ವೈರಸ್‌ ನಿಯಂತ್ರ​ಣ​ಕ್ಕೆ ಚೀನಾ ಕೈಗೊಂಡ ತುರ್ತು ಕ್ರಮ​ವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿ​ಸಿದೆ. ಆದರೆ ವೈರಸ್‌ ಆರಂಭಿಕ ಹಂತ​ದಲ್ಲಿದ್ದಾಗ ಚೀನಾದ ನಿರ್ಲಕ್ಷ್ಯ, ಕೆಟ್ಟನಿರ್ವ​ಹ​ಣೆಯೇ ಇಷ್ಟೊಂದು ಸಂಖ್ಯೆ​ಯಲ್ಲಿ ಜನರು ಬಲಿ​ಯಾ​ಗಲು ಕಾರಣ ಎನ್ನ​ಲಾ​ಗು​ತ್ತಿದೆ. ಏಕೆಂದರೆ ಕಳೆದ ವರ್ಷ ಡಿಸೆಂಬರ್‌ 8ರಂದೇ ಚೀನಾದ ವುಹಾ​ನ್‌​ನಲ್ಲಿ ಮೊದಲ ಪ್ರಕ​ರಣ ಪತ್ತೆ​ಯಾ​ಗಿತ್ತು. ಆದರೆ ಕೊರೋನಾ ನಿಯಂತ್ರ​ಣಕ್ಕೆ ಕ್ರಮ ಕೈಗೊಂಡಿದ್ದು ಜನ​ವರಿ 14ರಿಂದ. ಚೀನಾ ಎಡ​ವಿದ್ದೇ ಇಲ್ಲಿ. ವುಹಾ​ನ್‌ನ ನೇತ್ರ​ತ​ಜ್ಞ​ ಡಾ.ಲೀ ವೆನ್‌​ಲಿ​ಯಂಗ್‌ ಎಂಬ​ವ​ರು ಇದು ಸಾರ್ಸ್‌ ರೀತಿಯ ವೈರಸ್‌ ಎಂದು ಎಚ್ಚ​ರಿ​ಸಿ​ದ್ದರೂ, ವದಂತಿ ಹರ​ಡು​ವ​ವರ ವಿರುದ್ಧ ಕ್ರಮ ಕೈಗೊ​ಳ್ಳ​ಬೇ​ಕಾ​ಗು​ತ್ತದೆ ಎಂದು ಚೀನಾ ಸರ್ಕಾರ ಆದೇ​ಶಿ​ಸಿತ್ತು. ಕೊನೆಗೆ ಲೀ ಸೋಂಕಿ​ತ​ರಿಗೆ ಚಿಕಿತ್ಸೆ ಮಾಡು​ತ್ತಲೇ ಮೃತ​ಪ​ಟ್ಟ​ರು.

ಮುಚ್ಚಿ​ಟ್ಟಿದ್ದೇ ಮಾರಕ​ವಾ​ಯ್ತು!

ವೈರಸ್‌ನ ತೀವ್ರತೆಯನ್ನು ಕಡಿಮೆ ಮಾಡಲು ಸರ್ಕಾರ ಸೆನ್ಸಾರ್‌ಶಿಪ್‌ ಮತ್ತು ಪ್ರಚಾರವನ್ನು ಬಳಸಿತು. ಆದ​ರೆ ಮುಂಚಿನ ಎಚ್ಚರಿಕೆಗಳು ನಿಜವೆಂದು ಸಾಬೀತಾದಾಗ ಸಾರ್ವಜನಿಕರ ಕೋಪಕ್ಕೆ ತುತ್ತಾ​ಯಿ​ತು. ಅಲ್ಲದೆ ಮೊದ​ಮೊದಲು ಅಧಿ​ಕಾ​ರಿ​ಗಳು ಆನ್‌​ಲೈನ್‌ ಅಥವಾ ಆಫ್‌​ಲೈನ್‌ ಮೂಲ​ಕ​ ಕೂಡ​ ವೈ​ರಸ್‌ ಬಗ್ಗೆ ಯಾವುದೇ ರೀತಿಯ ಚರ್ಚೆ ಮಾಡ​ಲಿ​ಲ್ಲ. ಜನ​ವ​ರಿ​ಯಲ್ಲಿ ಹೊಸ ವೈರಸ್‌ ಸಾರ್ಸ್‌ ರೂಪದ್ದು ಎಂದಿದ್ದ 8 ಜನರ ಮೇಲೆ ವದಂತಿ ಹಬ್ಬಿ​ಸಿದ ಆರೋ​ಪದ ಮೇಲೆ ಬಂಧಿ​ಸ​ಲಾ​ಗಿತ್ತು. ಆದರೆ ತಜ್ಞರು ಅನಂತರ ಕೊರೋನಾ ಅಥವಾ ಕೋವಿ​ಡ್‌-19, ಸಾರ್ಸ್‌ನ ಇನ್ನೊಂದು ರೂಪ ಎನ್ನು​ವು​ದನ್ನು ಸಾಬೀ​ತು​ಪ​ಡಿ​ಸಿ​ದ​ರು.

ಚೀನಾ ಮಾಡಿದಂತೆ ಭಾರತ ಮಾಡಬಹುದೇ?

ಕೊರೋನಾ ಮಹಾ​ಮಾರಿ ನಿಯಂತ್ರ​ಣಕ್ಕೆ ಚೀನಾ ಕೈಗೊಂಡ ತುರ್ತು ಕ್ರಮ​ವನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಶ್ಲಾಘಿ​ಸಿದೆ. ಆದರೆ ವೈರಸ್‌ ತಡೆ​ಗ​ಟ್ಟಲು ಸರ್ಕಾರ ಕೈಗೊಂಡ ತೀವ್ರ​ತ​ರಹದ ಕ್ರಮ​ಗಳು ಚೀನಾ ಜನರ ಜೀವನೋಪಾಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಿರು​ವು​ದ​ರಿಂದ ಬೇರೆ ದೇಶ​ಗಳು ಈ ರೀತಿಯ ಕ್ರಮ​ಗ​ಳ​ನ್ನು ಅನು​ಸ​ರಿಸುವುದು ಸುಲಭವಿಲ್ಲ.

'ಕೊರೋನಾ ವೈರಸ್‌ ಮೂಲ ಚೀನಾ ಅಲ್ಲ, ಅಮೆರಿಕಾ!'

ದ.ಕೊ​ರಿಯಾ, ಸಿಂಗಾ​ಪು​ರ, ತೈವಾನ್‌, ಹಾಂಕಾಂಗ್‌ ಮಾದ​ರಿ

ಚೀನಾ​ಗಿಂತಲೂ ವೈರಸ್‌ ಬಗ್ಗು​ಬ​ಡಿ​ಯಲು ದಕ್ಷಿಣ ಕೊರಿಯಾ, ಸಿಂಗಾ​ಪುರ ತೈವಾನ್‌ ಮತ್ತು ಹಾಂಕಾಂಗ್‌ ಕೈಗೊಂಡ ವ್ಯವ​ಸ್ಥಿ​ತ ಕ್ರಮ​ಗಳು ಇತರ ದೇಶ​ಗ​ಳಿಗೆ ಮಾದರಿ ಎನ್ನಲಾ​ಗು​ತ್ತಿದೆ. ಏಕೆಂದ​ರೆ ಯುರೋಪ್‌, ಮಧ್ಯ​ಪ್ರಾಚ್ಯ, ಅಮೆ​ರಿ​ಕ​ದಲ್ಲಿ ವೈರಸ್‌ ವ್ಯಾಪಿ​ಸು​ತ್ತಿ​ದ್ದಂತೆಯೇ ಸಿಂಗಾ​ಪುರದಲ್ಲಿ ಮುಂಜಾ​ಗ್ರತಾ ಕ್ರಮ​ಗ​ಳನ್ನು ಕೈಗೊ​ಳ್ಳ​ಲಾ​ಗಿತ್ತು. ಪರಿ​ಣಾಮ ಅಲ್ಲಿನ 116 ಜನ​ರಲ್ಲಿ ಸೋಂಕು ಕಾಣಿ​ಸಿ​ಕೊಂಡರೂ ಇದು​ವ​ರೆಗೆ ಯಾರೂ ಮೃತ​ಪ​ಟ್ಟಿಲ್ಲ. ಈಗಾ​ಗಲೇ 93 ಜನರು ಸೋಂಕಿ​ನಿಂದ ಗುಣ​ಮು​ಖ​ರಾಗಿ ಡಿಸ್ಚಾಜ್‌ರ್‍ ಆಗಿ​ದ್ದಾರೆ. ಅಲ್ಲಿನ ಆರೋಗ್ಯ ವ್ಯವಸ್ಥೆ, ನೈರ್ಮಲ್ಯ, ಟ್ರೇಸಿಂಗ್‌, ಕಡಮೆ ಜನ​ಸಂಖ್ಯೆ ಇದಕ್ಕೆ ಮೂಲ ಕಾರಣ. ಹಾಗೆಯೇ ಹಾಂಕಾಂಗ್‌, ತೈವಾ​ನ್‌ ಕೂಡ ವ್ಯವ​ಸ್ಥಿತ ಕ್ರಮ ರೂಪಿ​ಸಿವೆ. ಮೂರೂ ದೇಶ​ಗಳು ಜನ​ವ​ರಿ​ಯಿಂದಲೇ ಚೀನಾದೊಂದಿಗಿನ ಸಂಪ​ರ್ಕ​ವನ್ನು ಕಡಿತ ಮಾಡಿವೆ. ಗುಂಪು​ಗೂ​ಡು​ವು​ದನ್ನು ನಿಷೇ​ಧಿ​ಸಿವೆ, ಸ್ಕ್ರೀನಿಂಗ್‌ ವ್ಯವ​ಸ್ಥೆ​ಯನ್ನು ಬಲ ಪಡಿ​ಸಿವೆ. ಎಲ್ಲ​ದ​ಕ್ಕಿಂತ ಮುಖ್ಯ​ವಾಗಿ ಜನರು ಭಯ​ಭೀ​ತ​ರಾ​ಗ​ದಂತೆ ಕ್ಷಣ​ಕ್ಷ​ಣದ ಮಾಹಿ​ತಿ​ಯನ್ನು ಒದ​ಗಿ​ಸ​ಲಾ​ಗು​ತ್ತಿದೆ. ಸಿಂಗಾ​ಪುರ ಪ್ರಧಾನಿ ಜನ​ರನ್ನು ಉದ್ದೇ​ಶಿಸಿ 4 ಅಧಿ​ಕೃತ ಭಾಷೆ​ಗ​ಳಲ್ಲಿ ಮಾತ​ನಾ​ಡಿ, ಜನ​ರಿಗೆ ಅಭಯ ನೀಡಿ​ದ್ದಾ​ರೆ. ದಕ್ಷಿಣ ಕೊರಿಯಾ ಟೆಲಿ​ಫೋನ್‌ ಸಮಾ​ಲೋ​ಚನೆ, ಸಂಚಾರಿ ಪರೀಕ್ಷಾ ಕೇಂದ್ರ ಮತ್ತು ಸೋಂಕು ಪತ್ತೆಗೆ ಥರ್ಮಲ್‌ ಕ್ಯಾಮ​ರಾ​ಗ​ಳನ್ನು ಬಳ​ಸು​ತ್ತಿ​ದೆ. ಈ ಮೂಲಕ ಒಂದು ದಿನ​ದಲ್ಲಿ 20,000 ಜನ​ರನ್ನು ಪರೀ​ಕ್ಷೆಗೆ ಒಳ​ಪ​ಡಿ​ಸು​ತ್ತಿದೆ. ಹಾಗೆಯೇ ಕೊರೋನಾ ಸೋಂಕಿ​ತ​ರಿಗೆ ಉಚಿ​ತ​ವಾ​ಗಿ ​ಚಿ​ಕಿತ್ಸೆ ನೀಡ​ಲಾ​ಗು​ತ್ತಿದೆ