ಮನೆಗೆ ಬಂದ ಕಳ್ಳರು ಐಷಾರಾಮಿ ವಸ್ತುಗಳೊಂದಿಗೆ ಮನೆಯಲ್ಲಿದ್ದ 5 ವಾರದ ನಾಯಿಮರಿಯನ್ನೂ ಹೊತ್ತೊಯ್ದಿರುವ ವಿಚಿತ್ರ ಘಟನೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದಿದೆ.
ಅಮೆರಿಕಾ: ಮನೆಗೆ ಬಂದ ಕಳ್ಳರು ಐಷಾರಾಮಿ ವಸ್ತುಗಳೊಂದಿಗೆ ಮನೆಯಲ್ಲಿದ್ದ 5 ವಾರದ ನಾಯಿಮರಿಯನ್ನೂ ಹೊತ್ತೊಯ್ದಿರುವ ವಿಚಿತ್ರ ಘಟನೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದಿದೆ. ಗುರುವಾರ ಸಂಜೆ ಮನೆಗೆ ಬಂದ ಮೂವರು ಕಳ್ಳರು ಮಾಲೀಕನಿಗೆ ಹೊಡೆದು ಮನೆಯಲ್ಲಿದ್ದ ಎರಡು ಐಫೋನ್‌ಗಳು, ವಜ್ರದ ಕಿವಿಯೋಲೆ, ಡಜನ್‌ಗಟ್ಟಲೆ ಶೂ, ಬಟ್ಟೆ, ಚಿನ್ನವನ್ನು ಮಾತ್ರವಲ್ಲದೇ ಡೀಮೋ ಎಂಬ ಹೆಸರಿನ ಅಮೇರಿಕನ್ ಬುಲ್‌ಡಾಗ್ ಜಾತಿಯ ಪುಟ್ಟನಾಯಿ ಮರಿಯನ್ನೂ ಕದ್ದು ಒಯ್ದಿದ್ದಾರೆ. ಇದು ನಾಯಿ ಸಾಕಿದವರನ್ನು ಚಿಂತೆಗೆ ದೂಡಿದೆ.
ಮನೆಗೆ ಬಂದ ಕಳ್ಳರು ಅಮೂಲ್ಯವಾದ ಆಭರಣ ವಸ್ತುಗಳನ್ನು ದೋಚುವುದು ಮಾಮೂಲಿ ಆದರೆ ಅಮೆರಿಕಾದಲ್ಲಿ(America) ಕಳ್ಳರು, ಮನೆಯಲ್ಲಿದ್ದ ನಾಯಿಮರಿಯನ್ನು (Puppy) ಕೂಡ ಹೊತ್ತೊಯ್ದಿದ್ದಾರೆ. ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಈ ಘಟನೆ ನಡೆದಿದೆ. ಮನೆ ದರೋಡೆಗೆ (Burglary) ಬಂದ ಶಸ್ತ್ರಾಸ್ತ್ರಧಾರಿ ಕಳ್ಳರು ಮನೆಯಲ್ಲಿದ್ದ ಐದು ವಾರಗಳ ಪ್ರಾಯದ ಅಮೆರಿಕನ್ ಬುಲ್‌ಡಾಗ್ ನಾಯಿಮರಿಯನ್ನು ಕದ್ದೊಯ್ದಿದ್ದಾರೆ ಎಂದು ಮೆಟ್ರೋ ಪಾಲಿಟನ್ ಪೊಲೀಸ್ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಮುದ್ದಿನ ನಾಯಿಮರಿ ಸಾವು; ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದ ಮೈಸೂರಿನ ಇಂಜಿನೀಯರ್!
ಕಳೆದ ಗುರುವಾರ (ಡಿಸೆಂಬರ್ 15) ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯ ಎದುರಿನ ಬಾಗಿಲಿನಿಂದ ಒಳಗೆ ನುಗ್ಗಿದ ಮೂವರು ಕಳ್ಳರು ಮನೆಯನ್ನು ದೋಚಿದ್ದಲ್ಲದೇ ಡೀಮೊ ಹೆಸರಿನ ಶ್ವಾನವನ್ನು ಕದ್ದೊಯ್ದಿದ್ದಾರೆ. ಅಮೆರಿಕಾ ಸೌತ್‌ವೆಸ್ಟ್ ಡಿಸಿಯಲ್ಲಿ (Southwest DC) ಈ ಘಟನೆ ನಡೆದಿದೆ. ಮನೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಶ್ವಾನದ ಮಾಲೀಕನ ತಲೆಗೆ ಪಿಸ್ತೂಲ್ ಹಿಡಿದು ನಿಂತು ಮನೆ ದರೋಡೆ ಮಾಡಿದ್ದಾರೆ. ಅಲ್ಲದೇ ಮಾಲೀನ ಮೇಲೆ ಗನ್‌ನಿಂದ ಹಲ್ಲೆ ಮಾಡಿ, ಮನೆಯಲ್ಲಿದ್ದ ಅಮೂಲ್ಯ ವಸ್ತು ಹಾಗೂ ಪುಟ್ಟ ಶ್ವಾನವೊಂದಿಗೆ ಪರಾರಿಯಾಗಿದ್ದಾರೆ.
ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ಥ್ಯಾಂಕ್ಸ್ ಹೇಳಿದ ತಾಯಿ ಶ್ವಾನ
ಮೈ ಮೇಲೆ ಕಂದು ಬಣ್ಣದ ಪ್ಯಾಚ್ ಹೊಂದಿದ್ದ ಈ ಶ್ವಾನದ ಜೊತೆ ಕಳ್ಳರು ಸಾವಿರ ಡಾಲರ್ ಬೆಲೆ ಬಾಳುವ ವಸ್ತುಗಳು, ಎರಡು ಐಫೋನ್‌ಗಳು, ಎರಡು ಗೇಮ್ ಪ್ಲೇಯರ್‌ಗಳು (Playstations), ಒಂದು ಜೊತೆ ಕನ್ನಡಕ, ವಜ್ರದ ಕಿವಿಯೋಲೆ ಹಾಗೂ ಚಿನ್ನದ ಉಂಗುರವನ್ನು ಎಗರಿಸಿದ್ದಾರೆ. ಇದರ ಜೊತೆಗೆ ಹ್ಯಾಟ್ (hats), ಜಾಕೆಟ್ (jackets), ಕೋಟ್, ಪ್ಯಾಂಟ್ ಹಾಗೂ ಡಜನ್‌ನಷ್ಟು ಜೊತೆ ಶೂಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಮನೆ ಮಾಲೀಕನ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದರಿಂದ ಸಣ್ಣ ಪುಟ್ಟ ಗಾಯಗಳಾಗಿವೆ. ದರೋಡೆಕೋರರ ಚಲನವಲನಗಳು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಎಲ್ಲಾ ದರೋಡೆಕೋರರು ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದರು. ಟೋಪಿ ಇರುವ ಟೀಶರ್ಟ್ ಹಾಗೂ ನೈಕಿ ಶೂ ಧರಿಸಿದ್ದರು ಎಂದು ತಿಳಿಸಿದ್ದಾರೆ.