Asianet Suvarna News Asianet Suvarna News

ಒಮಿಕ್ರೋನ್‌ ಮಾಯ, ಮತ್ತೆ ಡೆಲ್ಟಾ ಉಗಮ: 2 ತಿಂಗಳಲ್ಲಿ 4ನೇ ಅಲೆ: ಇಸ್ರೇಲಿ ತಜ್ಞರು!

* ಒಮಿಕ್ರೋನ್‌ ಮಾಯ, ಮತ್ತೆ ಡೆಲ್ಟಾ ಉಗಮ

* 2 ತಿಂಗಳಲ್ಲಿ 4ನೇ ಅಲೆ: ಇಸ್ರೇಲಿ ತಜ್ಞರು

* ಹೊಸ ತಳಿಯ ಉಗಮವೂ ಆಗಬಹುದು: ಅಧ್ಯಯನ

There Could Be Another Outbreak Of Delta Variant This Summer Warn Israeli Scientists pod
Author
Bangalore, First Published May 5, 2022, 8:26 AM IST

ಜೆರುಸಲೇಂ(ಮೇ.05): ಕೊರೋನಾ ವೈರಸ್‌ನ ಉಪತಳಿಯಾದ ಒಮಿಕ್ರೋನ್‌ ಇನ್ನೆರಡು ತಿಂಗಳಲ್ಲಿ ಮರೆಯಾಗಬಹುದು ಹಾಗೂ ಬಳಿಕ ಡೆಲ್ಟಾಅಥವಾ ಇನ್ನೊಂದು ಉಪತಳಿಯ ಅಬ್ಬರ ಆರಂಭವಾಗಬಹುದು. ಇದು ಕೊರೋನಾ 4ನೇ ಅಲೆಗೆ ನಾಂದಿ ಹಾಡಬಹುದು ಎಂದು ಇಸ್ರೇಲ್‌ನಲ್ಲಿ ನಡೆದ ಅಧ್ಯಯನವೊಂದು ಹೇಳಿದೆ.

ಸಾಮಾನ್ಯವಾಗಿ ಮೂಲತಳಿಯ ಉಪತಳಿ ಹುಟ್ಟಿಕೊಂಡ ಬಳಿಕ ಮೂಲ ತಳಿ ಅಳಿದು ಹೋಗುತ್ತದೆ. ಆ ಲೆಕ್ಕಾಚಾರದಲ್ಲಿ ಈ ವೇಳೆಗಾಗಲೇ ಡೆಲ್ಟಾತಳಿ ಅಳಿದು, ಕೇವಲ ಒಮಿಕ್ರೋನ್‌ ಮಾತ್ರ ಉಳಿಯಬೇಕಿತ್ತು. ಆದರೆ ಅಧ್ಯಯನ ವರದಿಗಳ ಅನ್ವಯ ಒಮಿಕ್ರೋನ್‌ ಹಂತಹಂತವಾಗಿ ನಿರ್ಜೀವವಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಸಂಪೂರ್ಣವಾಗಿ ನಿರ್ನಾಮವಾಗಬಹುದು. ಆದರೆ ಇದೇ ವೇಳೆ ಡೆಲ್ಟಾತಳಿ ಮಾತ್ರ ಇನ್ನೂ ಹಲವೆಡೆ ಉಳಿದುಕೊಂಡು ಪ್ರಸರಣವಾಗುತ್ತದೇ ಇದೆ. ಹೀಗಾಗಿ ಮುಂದಿನ 2 ತಿಂಗಳಲ್ಲಿ ಒಮಿಕ್ರೋನ್‌ ಅನ್ನು ಮೆಟ್ಟಿನಿಂತು ಮತ್ತೆ ಡೆಲ್ಟಾಅಬ್ಬರ ಆರಂಭವಾಗಬಹುದು ಎಂದು ಇಸ್ರೇಲ್‌ನ ಬೆನ್‌ ಗ್ಯೂರಿಯನ್‌ ವಿಶ್ವವಿದ್ಯಾಲಯದ ತಜ್ಞರು ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ.

‘ತಜ್ಞರು ಇಸ್ರೇಲ್‌ನ ಬೀರ್‌ ಶೇವಾ ಎಂಬ ನಗರದಲ್ಲಿನ ತ್ಯಾಜ್ಯದ ನೀರನ್ನು ಡಿ.2021ರಿಂದ ಜ.2022ರವರೆಗೆ ಪರೀಕ್ಷೆಗೆ ಒಳಪಡಿಸಿದ್ದರು. ತ್ಯಾಜ್ಯ ನೀರು ಕೊರೋನಾ ವೈರಸ್‌ ಇನ್ನೂ ಸಕ್ರಿಯವಾಗಿದೆ ಎಂಬ ಸುಳುಹು ನೀಡಿತ್ತು.

ಬೀಜಿಂಗ್‌ನಲ್ಲಿ ಸೆಮಿ ಲಾಕ್ಡೌನ್‌: ಶಾಲೆ, ಮೆಟ್ರೋ ಬಂದ್‌!

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಬುಧವಾರ 53 ಹೊಸ ಕೋವಿಡ್‌ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಬುಧವಾರ ಅರೆ ಲಾಕ್‌ಡೌನ್‌ ಘೋಷಿಸಲಾಗಿದೆ. ಶಾಲೆಗಳು, ಮೆಟ್ರೋ ನಿಲ್ದಾಣ, ರೆಸ್ಟೋರೆಂಟ್‌ಗಳು ಸೇರಿದಂತೆ ಎಲ್ಲ ಪ್ರಮುಖ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲಾಗಿದ್ದು, 2.1 ಕೋಟಿ ನಿವಾಸಿಗಳಿಗೆ ಪ್ರತಿ ದಿನ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಬೀಜಿಂಗ್‌ನಲ್ಲಿ ಒಮಿಕ್ರೋನ್‌ ಅಬ್ಬರ ಮುಂದುವರೆದಿದ್ದು, 500ಕ್ಕೂ ಹೆಚ್ಚು ಕೇಸುಗಳು ಈವರೆಗೆ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 40 ಸಬ್‌ವೇ ನಿಲ್ದಾಣ ಹಾಗೂ 158 ಬಸ್‌ ಮಾರ್ಗಗಳ ಮೇಲೆ ನಿರ್ಬಂಧ ಹೇರಲಾಗಿದೆ. ವಿಶೇಷವಾಗಿ ಚೀನಾ ಸರ್ಕಾರದ ಉನ್ನತ ಅಧಿಕಾರಿಗಳು ನೆಲೆಸಿದ ಚಾವೊಯಾಂಗ್‌ ಜಿಲ್ಲೆಯಲ್ಲಿ ಸೋಂಕು ಹರಡದಂತೇ ಕಟ್ಟುನಿಟ್ಟಿನ ಕ್ರಮ ಘೋಷಿಸಲಾಗಿದೆ. ಮೇ 11 ರವರೆಗೆ ಶಾಲೆಗಳನ್ನು ಮುಚ್ಚಲಾಗಿದೆ. ತುರ್ತು ಕಾರ್ಯಕ್ಕಾಗಿ ಬೀಜಿಂಗ್‌ ಬಿಟ್ಟು ತೆರಳಬೇಕಾದವರು 48 ಗಂಟೆ ಮುಂಚಿತವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾದ ನೆಗೆಟಿವ್‌ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

Follow Us:
Download App:
  • android
  • ios