ಐತಿಹಾಸಿಕ ಟೈಟಾನಿಕ್ ಹಡಗಿನಲ್ಲಿದ್ದ ಆಹಾರದ ಮೆನು ಭಾರಿ ಮೊತ್ತಕ್ಕೆ ಹರಾಜು
ಐತಿಹಾಸಿಕ ಟೈಟಾನಿಕ್ ಹಡಗು ಮುಳುಗಡೆಯಾಗುವ ಮೊದಲು ತನ್ನ ಪ್ರಥಮ ದರ್ಜೆ ಪ್ರಯಾಣಿಕರಿಗೆ ವಿತರಿಸಿದ್ದ ರಾತ್ರಿ ಭೋಜನದ ಮೆನು ಕಾರ್ಡ್ ಹರಾಜಿನಲ್ಲಿ 84.5 ಲಕ್ಷ ರು.ಗೆ ಮಾರಾಟವಾಗಿದೆ.

ಲಂಡನ್: ಐತಿಹಾಸಿಕ ಟೈಟಾನಿಕ್ ಹಡಗು ಮುಳುಗಡೆಯಾಗುವ ಮೊದಲು ತನ್ನ ಪ್ರಥಮ ದರ್ಜೆ ಪ್ರಯಾಣಿಕರಿಗೆ ವಿತರಿಸಿದ್ದ ರಾತ್ರಿ ಭೋಜನದ ಮೆನು ಕಾರ್ಡ್ ಹರಾಜಿನಲ್ಲಿ 84.5 ಲಕ್ಷ ರು.ಗೆ ಮಾರಾಟವಾಗಿದೆ.
ಟೈಟಾನಿಕ್ ಹಡಗಿನ ಪಳೆಯುಳಿಕೆಗಳನ್ನು (Titanic's remains) ಹೆನ್ರಿ ಆಲ್ಡ್ರಿಡ್ಜ್ ವಿಲ್ಟ್‌ಶೈರ್ (Henry Aldridge Wiltshire) ಎಂಬ ಸಂಸ್ಥೆಯ ಮೂಲಕ ಹರಾಜಿಗೆ ಹಾಕಿದ್ದು, ಮೆನು ಕಾರ್ಡ್ ಸೇರಿದಂತೆ ಅನೇಕ ವಸ್ತುಗಳು ಮಾರಾಟವಾಗಿವೆ. ಈ ಸಂಸ್ಥೆಗೆ ಸ್ಟೀಫೆನ್ಸನ್ ಡೋಮಿನಿಯನ್ (Stephenson Dominion) ಎಂಬ ಇತಿಹಾಸತಜ್ಞನ ಬಳಿ 1960ರ ದಶಕದ ಚಿತ್ರಗಳ ಆಲ್ಬಂನಲ್ಲಿದ್ದ ಈ ಮೆನು ಕಾರ್ಡ್ ಸಿಕ್ಕಿತ್ತು. ಅದು ನೀರಿನಿಂದ ತೊಯ್ದ ಸ್ಥಿತಿಯಲ್ಲಿತ್ತು ಹಾಗೂ ಶ್ವೇತ ನಕ್ಷತ್ರದ ಚಿಹ್ನೆಯನ್ನು ಹೊಂದಿತ್ತು ಎಂದು ಗಾರ್ಡಿಯನ್ (Guardian) ಪತ್ರಿಕೆ ವರದಿ ಮಾಡಿದೆ.
ಇದರಲ್ಲಿ ಏ.12 ರಂದು ಸರ್ವ್ ಮಾಡಲಾದ ಆಹಾರಗಳ ಪಟ್ಟಿಯಿದ್ದು, ಮೊಟ್ಟೆ, ಜಾಮ್, ಚಿಕನ್, ದನದ ಮಾಂಸ, ಅನ್ನ ಮುಂತಾದ ಆಹಾರಗಳ ಹೆಸರು ದಾಖಲಾಗಿದೆ. ಆರ್‌ಎಂಎಸ್ ಟೈಟಾನಿಕ್ ಹಡಗು ಏ.14, 1912ರಂದು ತನ್ನ ಮೊದಲ ಸಮುದ್ರಯಾನದಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಡೆಯಾಗಿತ್ತು. ಆಗ ತೊಯ್ದ ಸ್ಥಿತಿಯಲ್ಲೇ ಈ ಮೆನು ಕಾರ್ಡ್ ಲಭಿಸಿತ್ತು.
ಟೈಟಾನಿಕ್ ಅವಶೇಷ ನೋಡಲು ಹೋಗಿ ಶೇಷರಾದವರ ಕತೆ: ಸಾವಿನ ಆ 48 ಸೆಕೆಂಡ್‌ಗಳು...!
ಕೊಲಂಬಿಯಾದಲ್ಲಿ ಜಂಕ್‌ಫುಡ್‌ಗೆ ಭಾರಿ ತೆರಿಗೆ
ಬೊಗೊಟ: ಪ್ರಪಂಚದಲ್ಲೇ ಮೊದಲ ಬಾರಿಗೆ ಕೊಲಂಬಿಯಾ ದೇಶವು ‘ಕುರುಕಲು ತಿಂಡಿ ಕಾನೂನು’ (Junk Food Law) ಜಾರಿಗೆ ತಂದಿದೆ. ಇದರ ಅನ್ವಯ, ಅಧಿಕ ಕೊಬ್ಬಿನಾಂಶ ಹೊಂದಿರುವ ಆಹಾರಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದ್ದು, ಕ್ರಮೇಣ 2025ರ ವೇಳೆಗೆ ಹೆಚ್ಚುವರಿ ತೆರಿಗೆಯನ್ನು ಶೇ.25ಕ್ಕೆ ಏರಿಸಲಾಗುತ್ತದೆ ಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.
ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗಿ ನಾಪತ್ತೆಯಾದ ಐವರು ಯಾರು?
ಕೊಲಂಬಿಯಾ ನಾಗರಿಕರು (Colombian citizens) ದಿನಕ್ಕೆ ಸರಾಸರಿ 12 ಗ್ರಾಂ ಉಪ್ಪಿನಾಂಶ ಸೇವಿಸುತ್ತಿದ್ದು, ಪ್ರಸ್ತುತ ಲ್ಯಾಟಿನ್ ಅಮೆರಿಕ ಭಾಗದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಉಪ್ಪಿನಾಂಶ ಸೇವಿಸುತ್ತಿರುವವರು ಕೊಲಂಬಿಯಾ ಜನತೆಯಾಗಿದ್ದಾರೆ. ಭಾರೀ ಪ್ರಮಾಣದ ಉಪ್ಪಿನಾಂಶ ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದ ಖಾಯಿಲೆ ಉಲ್ಬಣಿಸುತ್ತಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕಾನೂನನ್ನು ಜಾರಿಗೆ ತರಲಾಗಿದೆ.
ಟೈಟಾನಿಕ್ ಅವಶೇಷಗಳ ವೀಕ್ಷಣೆಗೆ ಪ್ರವಾಸಿಗರ ಕರೆದೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆ
ಕೊಲಂಬಿಯಾದ ಸಂಶೋಧನಾ ವರದಿಯೊಂದು ಉಲ್ಲೇಖಿಸಿರುವಂತೆ ಅಧಿಕ ಪ್ರಮಾಣದ ಕೊಬ್ಬಿನಾಂಶ ಮತ್ತು ಇತರ ಹಾನಿಕಾರಕ ಅಂಶಗಳನ್ನು ಸೇವಿಸುವುದರಿಂದ ಮಗುವಿನ ಹೆರಿಗೆಯಲ್ಲಿ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ ಎಂದೂ ತಿಳಿಸಿದೆ. ಇದರ ಜೊತೆಗೆ ಕೊಲಂಬಿಯಾ ಸರ್ಕಾರವು ಅಧಿಕ ಪ್ರಮಾಣದ ಸಕ್ಕರೆ ಇರುವ ಅನಾರೋಗ್ಯಕಾರಕ ಆಹಾರಗಳ ಮೇಲೂ ಹೆಚ್ಚುವರಿ ತೆರಿಗೆ ವಿಧಿಸಲು ಚಿಂತಿಸುತ್ತಿದೆ. ಈ ಮೂಲಕ ಇತರ ದೇಶಗಳಿಗೆ ಆರೋಗ್ಯ ಸಂಬಂಧಿ ಕಾನೂನು ಜಾರಿ ಮಾಡಲು ಮಾದರಿಯಾಗಿದೆ.