ಅಂಜಲಿ ಹತ್ಯೆ ಆರೋಪಿ ಬಂಧನ ಆಗಿದೆ, ಮುಲಾಜು ಇಲ್ಲದೆ ಕಾನೂನು ಕ್ರಮ: ಪರಮೇಶ್ವರ
ಅಂಜಲಿ ಹತ್ಯೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಬೆಂಗಳೂರು (ಮೇ.17): ಅಂಜಲಿ ಹತ್ಯೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಅಂಜಲಿ ಹತ್ಯೆ ಪ್ರಕರಣದ ಆರೋಪಿಯನ್ನ ದಾವಣಗೆರೆ ಪೊಲೀಸರು ಬಂಧಿಸಿರುವ ವಿಚಾರ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವುದರಲ್ಲಿ ಯಾವುದೇ ಮುಲಾಜು ಇಲ್ಲ. ಪೊಲೀಸರ ಲೋಪವೂ ಇದೆ, ಅದಕ್ಕೆ ಸಸ್ಪೆಂಡ್ ಆಗಿದೆ. ಮೊದಲೇ ದೂರು ಕೊಟ್ಟಿಲ್ಲ, ತಿಳಿಸಿದ್ದರು. ಅವರ ಪೋಷಕರು ಮೊದಲೇ ಹೇಳಿದ್ದೆವು ಅಂದಿದ್ದಾರೆ. ಪೊಲೀಸರ ಲೋಪ ಕಂಡುಬಂದ ಹಿನ್ಲೆಲೆ ಕಾರಣರಾದವರ ಸಸ್ಪೆಂಡ್ ಆಗಿದೆ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಿಮಿಂಗಿಲ ಯಾರೆಂದು ಎಚ್‌ಡಿಕೆಯೇ ಹೇಳಲಿ: ಪರಮೇಶ್ವರ
ಇನ್ನು ಎಸ್‌ಐಟಿ ರಿಪೋರ್ಟ್ ಮಂಡ್ಯ ಶಾಸಕರಿಗೆ ಸಿಗುತ್ತೆ ಎಂಬ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಅನೇಕ ವಿಚಾರವನ್ನ ಸಾರ್ವಜನಿಕಗೊಳಿಸುವಂತಿಲ್ಲ. ಆ ಪ್ರಕರಣ ತನಿಖೆ ನಡೆಯುತ್ತಿದೆ. ಮಂಡ್ಯ ಶಾಸಕರಿಗೆ ಯಾರು ಬ್ರೀಫ್ ಮಾಡ್ತಾರೆ? ಆರೋಪ ಮಾಡೋದು ಸುಲಭ, ಯಾರ ಮುಲಾಜು ಇಲ್ಲದೆ ಎಸ್‌ಐಟಿ ಸರಿಯಾಗಿ ಕೆಲಸ ಮಾಡ್ತಿದೆ. ನಮಗೆ, ಸಿಎಂಗೆ ಯಾವುದನ್ನ ಬ್ರೀಫ್ ಮಾಡಬೇಕೋ ಅದನ್ನು ಮಾಡ್ತಾರೆ ಎಂದರು.
ಪ್ರಜ್ವಲ್‌ನನ್ನು ವಿದೇಶದಿಂದ ಕರೆ ತರುವ ವಿಚಾರದಲ್ಲಿ ಪ್ರೊಸಿಜರ್ ನಡೆಯುತ್ತಿದೆ. ಅದು ನಿಲ್ಲೊಲ್ಲ. ಅವರನ್ನ ಕರೆದುಕೊಂಡು ಬಂದು ಕಾನೂನು ಕ್ರಮ ಕೈಗೊಳ್ಳುವವರೆಗೂ ಕ್ರಮ ತೆಗೆದುಕೊಳ್ತೇವೆ. ಬಿಜೆಪಿ ಏನೋ ಹೇಳ್ತಾರೆ ಅವರು ಅದೇ ಹೇಳಬೇಕು. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತೆ ಅವರು ಹೇಳೋಕೆ ಆಗುತ್ತಾ? ಹೇಳಲ್ಲ ಎಂಬುದು ಗೊತ್ತಿದೆ ಎಂದರು.
ಇಂದು ಸಿಎಂ ಸಭೆ ಕರೆದಿದ್ದಾರೆ ಯಾವ ವಿಚಾರಕ್ಕೋ ಗೊತ್ತಿಲ್ಲ. ನಮಗಿನ್ನೂ ಅಜೆಂಡಾ ಸಿಕ್ಕಿಲ್ಲ. ಮಳೆ ಪ್ರಾರಂಭವಾಗಿದೆ. ಆದರೆ ಬರಗಾಲದ ಪರಿಣಾಮ ಇನ್ನೂ ಕಡಿಮೆ ಆಗಿಲ್ಲ. ಹೀಗಾಗಿ ಸಭೆ ಕರೆದು ಈ ವಿಚಾರ ಸಿಎಂ ಚರ್ಚೆ ಮಾಡ್ತಾರೆ ಅದುಕೊಂಡಿದ್ದೇನೆ ಎಂದರು. ಪ್ರಜ್ವಲ್ ಕೇಸ್ ಮಾಹಿತಿ ಮಂಡ್ಯದ ಒಬ್ಬ ಶಾಸಕರಿಗೆ ಹೋಗ್ತಿದೆ, ಗೃಹ ಇಲಾಖೆ ಲ್ಯಾಪ್ಸ್ ಆಗಿದೆ ಎಂಬ ಕುಮಾರಸ್ವಾಮಿ ಆರೋಪ ವಿಚಾರ
ಪ್ರಜ್ವಲ್ ಗೆ ಸರ್ಕಾರ ಸಹಾಯ ಮಾಡ್ತಿದೆ ಎಂಬ ಬಿಜೆಪಿ ಆರೋಪ ವಿಚಾರ ತಳ್ಳಿಹಾಕಿದ ಗೃಹ ಸಚಿವರು, ಅವರು ಏನೋ ಹೇಳ್ತಾರೆ ಹೇಳಲಿ, ಬಿಜೆಪಿ-ದಳದವರು ಹೇಳ್ತಾರೆ. ಆದರೆ ಜವಾಬ್ದಾರಿ ಇದೆ. ನಾವು ಇಂತಹದ್ದನ್ನ ಹಗುರವಾಗಿ ತೆಗೆದುಕೊಳ್ಳಲ್ಲ. ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಅಂತಾ ಅವರು ಹೇಳಲು ಸಾಧ್ಯವಾ? ಹಾಗೆ ಹೇಳೋಕೆ ಆಗೊಲ್ಲ. ಹೀಗಾಗಿ ಸರ್ಕಾರದ ಮೇಲೆ ಟೀಕೆ ಮಾಡ್ತಿರ್ತಾರೆ ಎಂದರು.
ಆಪರೇಷನ್ ಕಮಲ ಚರ್ಚೆಯ ಮಧ್ಯೆ ಪರಂ, ಜಾರಕಿಹೊಳಿ ಗೌಪ್ಯ ಚರ್ಚೆ: ಕುತೂಹಲ ಮೂಡಿಸಿದ ಉಭಯ ನಾಯಕರ ಭೇಟಿ..!
ಇನ್ನು ಕೊರಟಗೆರೆಯಲ್ಲಿ ಗೃಹಸಚಿರ ಲೆಟರ್ ಹೆಡ್ ದುರುಪಯೋಗ ಮಾಡಿಕೊಂಡಿರುವ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅವರು ನನ್ನ ಕ್ಷೇತ್ರದ ಕಾರ್ಯಕರ್ತರು. ನನ್ನ ಜೊತೆ ಪೋಟೋ ತೊಗೊಂಡಿದ್ದಾನೆ. ಕ್ಷೇತ್ರದ ಕಾರ್ಯಕರ್ತರು ಫೋಟೊ ತಗೋಳೋದು ಕಾಮನ್ ಆಗಿದೆ. ಆದರೆ ಫೋಟೊ ದುರುಪಯೋಗಪಡಿಸಿಕೊಳ್ಳೋದು ತಪ್ಪು. ಫೋಟೊ ದುರುಪಯೋಗ ಮಾಡಿಕೊಂಡು ಮೋಸ ಮಾಡಿ, ಹಣ ತಗೊಂಡಿದ್ದಾನೆ ಅನ್ನೋ ಮಾಹಿತಿ ಇದೆ. ಈಗಾಗಲೇ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಅವನ ಮೇಲೆ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಹೇಳಿದ್ದೇನೆ. ಯಾರೇ ತಪ್ಪು ಮಾಡಲಿ ಕಾನೂನು ಕ್ರಮ ಆಗುತ್ತೆ ಎಂದರು.