ಅದಾನಿ ವಿರುದ್ಧದ ಹಿಂಡನ್‌ಬರ್ಗ್‌ ವರದಿಗೆ ಆಸೀಸ್‌ ಮಾಜಿ ಪ್ರಧಾನಿ ಕಿಡಿಕಿಡಿ

ಒಬ್ಬರ ಮೇಲೆ ಆರೋಪಗಳನ್ನು ಮಾಡುವುದು ಸುಲಭ. ಆದರೆ ಅದನ್ನು ಸಾಬೀತು ಮಾಡುವುದು ಕಷ್ಟಎಂದು ಆಸ್ಪ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬೋಟ್‌ ಹೇಳಿದ್ದಾರೆ.

The former Australia prime minister denied the allegations against Businessmen gowtham Adani akb

ನವದೆಹಲಿ: ಒಬ್ಬರ ಮೇಲೆ ಆರೋಪಗಳನ್ನು ಮಾಡುವುದು ಸುಲಭ. ಆದರೆ ಅದನ್ನು ಸಾಬೀತು ಮಾಡುವುದು ಕಷ್ಟಎಂದು ಆಸ್ಪ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬೋಟ್‌ ಹೇಳಿದ್ದಾರೆ. ಈ ಮೂಲಕ ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಗ್ರೂಪ್‌ ಮೇಲೆ ಅಮೆರಿಕ ಮೂಲದ ಹಿಂಡನ್‌ಬಗ್‌ರ್‍ ಸಂಸ್ಥೆ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಎನ್‌ಡಿಟಿವಿ (NDTV) ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಯಾರ ಮೇಲೆ ಬೇಕಾದರೂ ಆರೋಪಗಳನ್ನು ಮಾಡಬಹುದು. ಆದರೆ ನನಗೆ ತಿಳಿದಿರುವ ಕಾನೂನಿನ ಪ್ರಕಾರ ಅಪರಾಧ ಸಾಬೀತಾಗುವವರೆಗೂ ಅವರು ನಿರಪರಾಧಿಯೇ ಆಗಿರುತ್ತಾರೆ ಎಂದು ಹೇಳಿದ್ದಾರೆ. ಅದಾನಿ ಗ್ರೂಪ್‌ ಯಾವುದಾದರೂ ಅಕ್ರಮ ಮಾಡಿದ್ದರೆ, ಆ ಕುರಿತಾಗಿ ಸಂಸ್ಥೆಗಳು ತನಿಖೆ ನಡೆಸಲಿವೆ. ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳಲಿದ್ದಾರೆ. ಆದರೆ ಆಸ್ಪ್ರೇಲಿಯಾದಲ್ಲಿ ಅದಾನಿ ಗ್ರೂಪ್‌ (Adani Group) ತೋರಿದ ನಂಬಿಕೆಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಷೇರುಪೇಟೆಯಲ್ಲಿ (Share Market) ಅಕ್ರಮ ಎಸಗುವ ಮೂಲಕ ಅದಾನಿ ಸಮೂಹ ಕಂಪನಿಗಳು ಭಾರಿ ಭ್ರಷ್ಟಾಚಾರ (corruption) ಎಸಗಿವೆ ಎಂದು ಅಮೆರಿಕ ಮೂಲದ ಹಿಂಡನ್‌ಬರ್ಗ್ (The Hindenburg)ಸಂಸ್ಥೆ ಆರೋಪ ಮಾಡಿತ್ತು. ಇದಾದ ಬಳಿಕ ಕಂಪನಿಯ ಷೇರುಗಳು ಭಾರಿ ಕುಸಿತ ಕಂಡಿದ್ದವು.

ಅದಾನಿ ಗ್ರೂಪ್ ಷೇರುಗಳು ಮರಳಿ ಹಳಿಗೆ; ಶೇ.14ರಷ್ಟು ಏರಿಕೆ ಕಂಡ ಅದಾನಿ ಎಂಟರ್ ಪ್ರೈಸರ್ಸ್ ಷೇರು

ಅದಾನಿ ಸಮೂಹದ ಕಂಪನಿಗಳು ಭಾರೀ ಅವ್ಯವಹಾರ ನಡೆಸಿವೆ ಎಂಬ ಅಮೆರಿಕದ ಹಿಂಡನ್‌ಬರ್ಗ್ ಎಂಬ ಹೂಡಿಕೆ ಸಂಸ್ಥೆಯ ಆರೋಪಗಳ ಬೆನ್ನಲ್ಲೇ ಈ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರೆ (M.M Sapre) ನೇತೃತ್ವದ 6 ಸದಸ್ಯರ ಸಮಿತಿಯೊಂದನ್ನು ಸುಪ್ರೀಂಕೋರ್ಟ್‌  ಇತ್ತೀಚೆಗೆ ರಚಿಸಿತ್ತು. ಅದಾನಿ ಸಮೂಹವು ನಿಯಮಗಳನ್ನು ಉಲ್ಲಂಘಿಸಿದೆಯೇ? ಷೇರು ಮಾರುಕಟ್ಟೆಯಲ್ಲಿ ಅಕ್ರಮಗಳನ್ನು ಎಸಗಿದೆಯೇ? ಶಾರ್ಚ್‌ ಸೆಲ್ಲಿಂಗ್‌ ನಿಯಮಗಳನ್ನು ಗಾಳಿಗೆ ತೂರಿದೆಯೇ? ಹಾಗೂ ಷೇರುಗಳ ಬೆಲೆ ತಿರುಚಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ 2 ತಿಂಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ಕೋರ್ಟ್ ಸೂಚಿಸಿದೆ.

ಜೊತೆಗೆ ಇದೇ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿರುವ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆಯಾದ ‘ಸೆಬಿ’ ಕೂಡಾ ಈ ಬಗ್ಗೆ 2 ತಿಂಗಳೊಳಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ. ಅದಾನಿ ಸಮೂಹದ ಮೇಲಿನ ಆರೋಪ ಮತ್ತು ಅದಾನಿ ಸಮೂಹದ ಷೇರುಗಳ ದಿಢೀರ್‌ ಪತನದ ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಬೇಕೆಂದು ಕೆಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ತನಿಖೆಗೆ ತಜ್ಞರ ಸಮಿತಿ ರಚಿಸಿ ಆದೇಶ ನೀಡಿದೆ.

ಸಮಿತಿ ರಚನೆ:

ಅದಾನಿ ಕಂಪನಿ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ತನಿಖೆ ನಡೆಸಲು ನ್ಯಾಯಾಲಯ 6 ಜನರ ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ. ಈ ಸಮಿತಿಗೆ, ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ (Share Market) ಕುಸಿತಕ್ಕೆ ಕಾರಣ, ಅದಾನಿ ಸಮೂಹದ ಕಂಪನಿಗಳು ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಡಿದೆ ಎನ್ನಲಾದ ಕಾನೂನು ಉಲ್ಲಂಘನೆ, ಈ ವಿಷಯದಲ್ಲಿ ನಿಗಾ ವಹಿಸಲು ಸೆಬಿ (sebi) ವಿಫಲವಾಗಿದೆಯೇ, ಹೂಡಿಕೆದಾರರ ಜಾಗೃತಿ ಬಲಪಡಿಸಲು ಏನೇನು ಕ್ರಮ ಕೈಗೊಳ್ಳಬಹುದು, ಈಗಾಗಲೇ ಹೂಡಿಕೆದಾರರ ರಕ್ಷಣೆಗೆ ಇರುವ ನಿಯಮಗಳನ್ನು ಇನ್ನಷ್ಟುಸುರಕ್ಷಿತವಾಗಿ ಹೇಗೆ ಪಾಲನೆ ಮಾಡಬಹುದು ಎಂಬುದರ ಬಗ್ಗೆ ತನಿಖೆ ನಡೆಸಿ 2 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರದ ಎಲ್ಲಾ ತನಿಖಾ ಸಂಸ್ಥೆಗಳು ಹಾಗೂ ಸಂಬಂಧಪಟ್ಟಇಲಾಖೆಗಳು ಈ ಸಮಿತಿಗೆ ಸಹಕಾರ ನೀಡಬೇಕು. ಸಮಿತಿಯು ಅಗತ್ಯಬಿದ್ದರೆ ಬಾಹ್ಯ ತಜ್ಞರ ನೆರವು ಪಡೆಯಬಹುದು ಎಂದು ನ್ಯಾಯಪೀಠ ಹೇಳಿದೆ.

Adani vs Hindenburg: ಸುಪ್ರೀಂ ಕೋರ್ಟ್‌ನಿಂದ ತಜ್ಞರ ಸಮಿತಿ ನೇಮಕ, ತನಿಖೆ ನಡೆಸುವಂತೆ ಸೆಬಿಗೆ ಆದೇಶ!

ಸೆಬಿಗೆ ಸೂಚನೆ:

ಇದೇ ವೇಳೆ ಅದಾನಿ ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿರುವ ಸೆಬಿ, ತನ್ನ ತನಿಖೆಯ ಭಾಗವಾಗಿ ಕನಿಷ್ಠ ಷೇರುದಾರರ ನಿರ್ವಹಣೆಗೆ ಸಂಬಂಧಿಸಿದಂತೆ ಷೇರು ನಿಯಂತ್ರಣ ನಿಯಮಾವಳಿ 19 ಎಯ ಉಲ್ಲಂಘನೆಯಾಗಿದೆಯೇ? ವಹಿವಾಟು ಮಾಹಿತಿ ಬಹಿರಂಗಕ್ಕೆ ಕಂಪನಿ ವಿಫಲವಾಗಿದೆಯೇ? ಷೇರುಬೆಲೆಗಳನ್ನು (share value) ತಿರುಚಲಾಗಿದೆಯೇ? ಎಂಬುದರ ಬಗ್ಗೆ ತನಿಖೆ ನಡೆಸಿ 2 ತಿಂಗಳಲ್ಲಿ ತನಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದೂ ನ್ಯಾಯಪೀಠ ಸೂಚಿಸಿತು.

Latest Videos
Follow Us:
Download App:
  • android
  • ios