ನಕಲಿ ರಕ್ತ, ಪ್ರೆಗ್ನೆನ್ಸಿ ಟೆಸ್ಟ್‌ ರಿಪೋರ್ಟ್‌...ಕ್ಯಾಬ್‌ನಲ್ಲಿ ಇವೆಲ್ಲಾ ಬಿಟ್ಟು ಹೋಗ್ತಾರಂತೆ ಪ್ರಯಾಣಿಕರು!

ನೀವು ಎಂದಾದರೂ ಕ್ಯಾಬ್‌ನಲ್ಲಿ ಏನನ್ನಾದರೂ ಬಿಟ್ಟು ಹೋಗಿದ್ದೀರಾ? ಹಾಗೇನಾದರೂ ಬಿಟ್ಟುಹೋಗಿದ್ದಲ್ಲಿ ಅದನ್ನು ಮರಳಿ ಪಡೆಯಲು ನೀವು ಯಶಸ್ವಿಯಾಗಿದ್ದೀರಾ?
 

The 2023 Lost and Found Index  Strange items passengers forget in Uber cabs san

ನವದೆಹಲಿ (ಏ.29): ಬಹುತೇಕ ಹೆಚ್ಚಿನ ಜನರು ಅದರಲ್ಲೂ ನಗರ ಪ್ರದೇಶಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಾಗವಾಗಿ ಪ್ರಯಾಣ ಮಾಡಲು ಕ್ಯಾಬ್‌ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣ ಈ ಕ್ಯಾಬ್‌ಗಳು ನೀಡುವ ಅನುಕೂಲ ಹಾಗೂ ಸೌಕರ್ಯ. ಮನೆ ಬಾಗಿಲ ಬಳಿಯಲ್ಲೇ ಈ ಕ್ಯಾಬ್‌ಗಳು ನಿಲ್ಲೋದು ಪ್ರಮುಖ ಕಾರಣ. ಅದೆಷ್ಟೇ ಸಲೀಸು ಪ್ರಯಾಣವಾಗಿದ್ದರೂ, ವಾಹನದಿಂದ ಇಳಿಯುವ ಧಾವಂತದಲ್ಲಿ ಪ್ರಯಾಣಿಕರು ತಮ್ಮ ಕೆಲವು ವಸ್ತುಗಳನ್ನು ಮರೆತುಬಿಡುತ್ತಾರೆ. ಫೋನ್‌ಗಳು ಹಾಗೂ ಮೊಬೈಲ್‌ಗಳನ್ನು ಬಹುತೇಕ ಪ್ರಯಾಣಿಕರು ಕಳೆದುಕೊಳ್ಳುವ ಸಾಮಾನ್ಯ ವಸ್ತುಗಳಾಗಿವೆ. ಆದರೆ, ನಿಮಗೆ ಅಚ್ಚರಿ ಎನ್ನುವಂತೆ ಕೆಲವು ಪ್ರಯಾಣಿಕರು ನಕಲಿ ರಕ್ತ ಮತ್ತು ಗರ್ಭಧಾರಣೆಯ ಪರೀಕ್ಷಾ ಕಿಟ್‌ ಸೇರಿದಂತೆ ಇನ್ನೂ ಕೆಲವು ವಿಲಕ್ಷಣ ವಸ್ತುಗಳನ್ನು ಕ್ಯಾಬ್‌ನಲ್ಲಿ ಬಿಟ್ಟುಹೋಗಿದ್ಸಾರಂತೆ.  ಇತ್ತೀಚೆಗೆ, ಉಬರ್ ತಮ್ಮ ಏಳನೇ ಆವೃತ್ತಿಯ 'ದಿ 2023 ಲಾಸ್ಟ್ ಅಂಡ್ ಫೌಂಡ್ ಇಂಡೆಕ್ಸ್' ಅನ್ನು ಬಿಡುಗಡೆ ಮಾಡಿದೆ. ಜನರು ಉಬರ್‌ ಕ್ಯಾಬ್‌ಗಳಲ್ಲಿ ಯಾವೆಲ್ಲಾ ವಸ್ತುಗಳನ್ನು ಸಾಮಾನ್ಯವಾಗಿ ಮರೆತು ಬಿಟ್ಟುಹೋಗುತ್ತಾರೆ ಎನ್ನುವುದನ್ನು ಲಿಸ್ಟ್‌ ಮಾಡಿ ಬಿಡುಗಡೆ ಮಾಡಿದೆ. 
ತನ್ನ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಉಬರ್‌, ಫಾಗ್‌ ಮಷೀನ್‌, ತೂಕ ಇಳಿಸಿಕೊಳ್ಳುವ ಗೈಡ್‌, ಗರ್ಭಧಾರಣೆ ಪರೀಕ್ಷೆಯ ಕಿಟ್‌ ಮತ್ತು ಸ್ನೇಹಿತರ ನಕಲಿ ಹಲ್ಲುಗಳನ್ನು ಪ್ರಯಾಣಿಕರು ಬಿಟ್ಟು ಹೋಗಿದ್ದರಂತೆ. ಇದು ಅತ್ಯಂತ ವಿಶಿಷ್ಟ ಐಟಂಗಳ ಪಟ್ಟಿಯಲ್ಲಿ ಸೇರಿವೆ ಎಂದು ಉಬರ್‌ ಹೇಳಿದೆ. ಇನ್ನು ಡ್ಯಾನಿ ಡೆವಿಟೊ ಕ್ರಿಸ್ಮಸ್ ಆಭರಣವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜನರು ಕ್ಯಾಬ್‌ಗಳಲ್ಲಿ ಮರೆಯುವ ಸಾಮಾನ್ಯ ವಿಷಯಗಳನ್ನು ಸಹ ಕಂಪನಿ ಹಂಚಿಕೊಂಡಿದೆ. ಉಡುಪುಗಳು ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಳ್ಳುತ್ತವೆ, ಶಾಲುಗಳು ಅತ್ಯಂತ ಸಾಮಾನ್ಯವಾದ ವಸ್ತುವಾಗಿದೆ.

"ಬಟ್ಟೆ, ಫೋನ್‌ಗಳು, ಕೀಗಳು ಮತ್ತು ಪರ್ಸ್‌ಗಳು ಸಾಮಾನ್ಯವಾಗಿ ಮರೆತುಹೋದ ವಸ್ತುಗಳ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನದಲ್ಲಿವೆ, ಆದರೆ ಯಾವಾಗಲೂ, ಸವಾರರು ತಮ್ಮ ವಿಶಿಷ್ಟವಾದ (ಮತ್ತು ಕೆಲವೊಮ್ಮೆ ಅಸಾಮಾನ್ಯ!) ವಸ್ತುಗಳನ್ನು ಸಹ ಮರೆತು ಹೋಗುತ್ತಿದ್ದಾರೆ. ಈ ವರ್ಷ, ಸುಮ್ಮನೇ ಹೇಳುವುದಾದರೆ, ನಮ್ಮ ಕ್ಯಾಬ್‌ನಲ್ಲಿ ಪ್ರಯಾಣಿಕರು ಡ್ಯಾನಿ ಡೆವಿಟೊ ಕ್ರಿಸ್ಮಸ್ ಆಭರಣದಿಂದ ಹಿಡಿದು ಫಾಗ್‌ ಮಷೀನ್‌ ಹಾಗೂ ಆರು ಚೀಸ್ ಕೇಕ್‌ಗಳವರೆಗೆ ಎಲ್ಲವನ್ನೂ ಮರೆತು ಬಿಟ್ಟುಹೋಗಿದ್ದಾರೆ' ಎಂದು ಬರೆದುಕೊಂಡಿದೆ.

ಉಬರ್‌ ಕಂಪನಿಯು  'ಅತ್ಯಂತ ಮರೆಗುಳಿ ನಗರಗಳ' ಪಟ್ಟಿಯನ್ನು ಸಹ ಹಂಚಿಕೊಂಡಿದೆ. ಫ್ಲೋರಿಡಾದ ಜಾಕ್ಸನ್‌ವಿಲ್ಲೆ ಇದರಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊ ಮತ್ತು ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಇವುಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಅಚ್ಚರಿ ಎನ್ನುವಂತೆ, ರೈಡ್-ಹೈಲಿಂಗ್‌ ಅಪ್ಲಿಕೇಶನ್, ಪ್ರಯಾಣಿಕರು ತಮ್ಮ ವಸ್ತುಗಳನ್ನು ಮರೆತುಬಿಡುವ ಸಾಮಾನ್ಯ ದಿನವೆಂದರೆ 2022ರ ಏಪ್ರಿಲ್ 5. ಅಂದು ಸುಮಾರು 1,000 ಮಂದಿ ಕಳೆದಹೋದ ವಸ್ತುಗಳ ಬಗ್ಗೆ ದೂರು ನೀಡಿದ್ದರು.

Trending News : ಗರ್ಭಿಣಿ ಜೀವ ಉಳಿಸಿ ಪಾಠ ಕಲಿತ ಉಬರ್ ಚಾಲಕ

ಉಬರ್‌ ನೀಡಿರುವ ಮಾಹಿತಿ ಪ್ರಕಾರ, ಸೋಮವಾರದಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ಚಾರ್ಜರ್‌ಗಳನ್ನು ಕ್ಯಾಬ್‌ಗಳಲ್ಲಿ ಬಿಟ್ಟುಹೋದರೆ, ಗುರುವಾರದಂದು ಹಣವನ್ನು ಬಿಟ್ಟು ಹೋಗುತ್ತಾರೆ. ಇನ್ನು ಮಂಗಳವಾರ ಹೆಚ್ಚಿನ ಪ್ರಯಾಣಿಕರು ಕೀಗಳನ್ನು ಬಿಟ್ಟು ಹೋಗುತ್ತಾರೆ. ಬುಧವಾರದಂದು ಪರ್ಸ್‌ಗಳು ಹೆಚ್ಚಾಗಿ ಬಿಟ್ಟು ಹೋದರೆ, ಶುಕ್ರವಾರದಂದು ವಾಚ್‌ಗಳು ಹಾಗೂ ಆಭರಣಗಳನ್ನು ಬಿಟ್ಟಿಹೋಗುತ್ತಾರೆ. ಇನ್ನು ವೀಕೆಂಟ್‌ಗಳಲ್ಲಿ ಪಾಸ್‌ಪೋರ್ಟ್‌ಗಳು ಹಾಗೂ ಇತರ ದಿನಸಿ ಐಟಂಗಳನ್ನು ಪ್ರಯಾಣಿಕರು ಬಿಟ್ಟು ಹೋಗುತ್ಥಾರಂತೆ.

ಬೆಂಗಳೂರಿನ ಅಟೋ ಡ್ರೈವರ್ ಯೂಟ್ಯೂಬ್ ಚಾನೆಲ್ ನೋಡಿದ್ದೀರಾ? ಇದರಲ್ಲಿವೆ ಆರ್ಥಿಕ ಸಲಹೆಯ100ಕ್ಕೂ ಹೆಚ್ಚು ವಿಡಿಯೋಗಳು

ಪ್ರತಿ ವರ್ಷ, ಉಬರ್‌ ತನ್ನ ಪ್ರಯಾಣೀಕರು ರೈಡ್‌ನಲ್ಲಿ ಏನನ್ನಾದರೂ ಬಿಟ್ಟರೆ ಲಭ್ಯವಿರುವ ಅಪ್ಲಿಕೇಶನ್‌ನಲ್ಲಿನ ಆಯ್ಕೆಗಳ ಕುರಿತು ತಿಳಿಸಲು ಈ ಪಟ್ಟಿಯನ್ನು ಹಂಚಿಕೊಳ್ಳುತ್ತದೆ. ನೀವು ಎಂದಾದರೂ ಕ್ಯಾಬ್‌ಗಳಲ್ಲಿ ಪ್ರಯಾಣ ಮಾಡಿ ಏನನ್ನಾದರೂ ಬಿಟ್ಟು ಬಂದಿದ್ದೀರಾ? ಹಾಗೇನಾದರೂ ಹೌದು ಎಂದಾಗಿದ್ದರೆ ಅದು ಯಾವ ವಸ್ತು?

Latest Videos
Follow Us:
Download App:
  • android
  • ios