Pickup Truck Crashes Into Monks: 34 ಬೌದ್ಧ ಬಿಕ್ಕುಗಳು ಸರತಿ ಸಾಲಿನಲ್ಲಿ ಹೋಗುತ್ತಿದ್ದರು. ಅಲ್ಲಿಗೆ ಒಮ್ಮೆಲೆ ಬಂದ ಪಿಕಪ್‌ ಟ್ರಕ್‌ ಆ ಬಿಕ್ಕುಗಳ ಮೇಲೆ ಹರಿದಿದೆ. ಹೌದು ಈಶಾನ್ಯ ಥೈಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ.

34 ಬೌದ್ಧ ಬಿಕ್ಕುಗಳು ಸರತಿ ಸಾಲಿನಲ್ಲಿ ರಸ್ತೆಯಲ್ಲಿ ತುದಿಯಲ್ಲಿ ನಡೆದುಕೊಂಡು ಹೋಗುವಾಗ ಪಿಕಪ್‌ ವ್ಯಾನ್‌ ಬಂದು ಹರಿದಿದ್ದು, ಮಾರಣ ಹೋಮ ( Pickup Truck Crashes Into Monks ) ನಡೆದಿದೆ. 11 ವರ್ಷದ ಬಾಲಕನೊಬ್ಬ ಪಿಕಪ್ ಟ್ರಕ್ ಚಲಾಯಿಸಿಕೊಂಡು ಬಂದಿದ್ದಾನೆ. ಆಗ ಅವನು ಕಂಟ್ರೋಲ್‌ ತಪ್ಪಿ ಬೌದ್ಧ ಬಿಕ್ಕುಗಳ ಮೇಲೆ ಗಾಡಿ ಓಡಿಸಿದ್ದಾನೆ. ಇದರಿಂದ ಕೆಲವರು ಸತ್ತರೆ, ಇನ್ನೂ ಕೆಲವರು ಗಾಯಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಥಳದಲ್ಲೇ ಐದು ಸಾವು!

ಮುಕ್ದಾಹನ್ ಪ್ರಾಂತ್ಯದ ರಸ್ತೆಯೊಂದರಲ್ಲಿ 35 ಸನ್ಯಾಸಿಗಳು, ಐದು ಮಂದಿ ಅನುಯಾಯಿಗಳ ನಡೆದುಕೊಂಡು ಹೋಗುತ್ತಿದ್ದರು. ಕೇಸರಿ ವಸ್ತ್ರಗಳನ್ನು ಧರಿಸಿ ಅವರೆಲ್ಲ ಹೋಗುತ್ತಿದ್ದರು, ಈಗ ಇಹಲೋಕ ತ್ಯಜಿಸಿದ್ದಾರೆ. ಪೊಲೀಸರು ಹೇಳುವಂತೆ, ಐದು ಮಂದಿ ಸನ್ಯಾಸಿಗಳು ಸ್ಥಳದಲ್ಲೇ ಅಸು ನೀಗಿದ್ದಾರೆ. ಇನ್ನು ನಾಲ್ವರು ಆಮೇಲೆ ಸಾವನ್ನಪ್ಪಿದ್ದಾರೆ.

ಯಾರ ಅನುಮತಿ ಪಡೆಯದೆ ಆ ಹುಡುಗ ಪಿಕಪ್ ಟ್ರಕ್ ತೆಗೆದುಕೊಂಡು ಹೋಗಿದ್ದಾನೆ. ಆಮೇಲೆ ಕಂಟ್ರೋಲ್‌ ತಪ್ಪಿ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸ್ ಮೇಜರ್ ಜನರಲ್ ಪೈರೋಜ್ ಥೈಫುತ್ಸಾ ಅವರು ಈ ಬಗ್ಗೆ ಮಾತನಾಡಿದ್ದು, “ಬಾಲಕನಿಗೆ ಕಾನೂನು ಪ್ರಕಾರ ಏನು ಮಾಡಲಾಗುವುದು ಎಂದು ಯೋಚಿಸಲಾಗುವುದು” ಎಂದಿದ್ದಾರೆ.

ಬಾಲಕನಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಹುಡುಗ ವಿಶೇಷ ಚೇತನವುಳ್ಳ ಮಗು ಎಂದು ಕೂಡ ಹೇಳಲಾಗಿದೆ. ಉಳಿದ ಸನ್ಯಾಸಿಗಳಿಗೆ ಕೂಡ ಚಿಕಿತ್ಸೆ ನೀಡಲಾಗುತ್ತಿದೆಯಂತೆ.

ಅಲ್ಲಿದ್ದ ಸನ್ಯಾಸಿ ಫ್ರಾ ಸೋಂಪಾಂಗ್, “ಅಪಘಾತ ಆಗುವ ಮುನ್ನ ಬುದ್ಧೋ, ಬುದ್ಧೋ" ಎಂದು ಜಪ ಮಾಡುತ್ತಿದ್ದೆವು. ಬಾಲಕ ಡ್ರೈವ್‌ ಮಾಡುತ್ತಿರೋದು ಗೊತ್ತಾಯಿತು, ಫಾಸ್ಟ್‌ ಆಗಿ ಬಂದ ಟ್ರಕ್‌ ನಮಗೆ ಡಿಕ್ಕಿ ಹೊಡೆದಿದೆ" ಎಂದು ಹೇಳಿದ್ದಾರೆ.

ಥೈಲ್ಯಾಂಡ್‌ನಲ್ಲಿ ಮಾತ್ರ ಬೌದ್ಧ ಸನ್ಯಾಸಿಗಳಿಗೆ ಸಿಕ್ಕಾಪಟ್ಟೆ ಗೌರವವಿದೆ. ಅವರು ಬುದ್ಧನ ಬೋಧನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅಲ್ಲಿ ಅವರು ಮೆರವಣಿಗೆ ಹೋಗುವಾಗ ಜನರು ಆಹಾರ ಕೊಡೋದುಂಟು