ಅಮೆರಿಕದ ಕೆಲ ಭಾಗಗಳು, ಅದರಲ್ಲೂ ವಿಶೇಷವಾಗಿ ಟೆಕ್ಸಾಸ್‌ನ ಡಲ್ಲಾಸ್‌ನ ಮಾಲ್‌ಗಳು ಪಾಕಿಸ್ತಾನದಂತೆ ಕಾಣುತ್ತಿವೆ ಎಂದು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ರಿಪಬ್ಲಿಕನ್‌ ಸಂಸದ ಬ್ರಾಂಡನ್ ಗಿಲ್ ಹೇಳಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಕೆಲ ಭಾಗಗಳು, ಅದರಲ್ಲೂ ವಿಶೇಷವಾಗಿ ಟೆಕ್ಸಾಸ್‌ನ ಡಲ್ಲಾಸ್‌ನ ಮಾಲ್‌ಗಳು ಪಾಕಿಸ್ತಾನದಂತೆ ಕಾಣುತ್ತಿವೆ ಎಂದು ರಿಪಬ್ಲಿಕನ್‌ ಸಂಸದ ಬ್ರಾಂಡನ್ ಗಿಲ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಗಿಲ್‌

ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಗಿಲ್‌, ‘ಅಮೆರಿಕದ ಹಲವು ಕಡೆ ಮಸೀದಿಗಳು ಒಂದರಮೇಲೊಂದರಂತೆ ತಲೆಯೆತ್ತುತ್ತಿವೆ. ಕೆಲವು ಕಡೆಗಳಲ್ಲಿ ಮಾಲ್‌ಗಳಿಗೆ ಹೋದರೆ ನೀವು ಡಲ್ಲಾಸ್‌ನಲ್ಲಿ ಇದ್ದೀರೋ ಅಥವಾ ಪಾಕಿಸ್ತಾನದಲ್ಲಿದ್ದೀರೋ ಎಂದು ತಿಳಿಯುವುದಿಲ್ಲ.

ಸಾಮೂಹಿಕ ಇಸ್ಲಾಮಿಕ್ ವಲಸೆಯು ಕೊಲ್ಲುತ್ತಿದೆ

ನಾವು ತಿಳಿದಿರುವ ಮತ್ತು ಪ್ರೀತಿಸುವ ಅಮೆರಿಕವನ್ನು ಸಾಮೂಹಿಕ ಇಸ್ಲಾಮಿಕ್ ವಲಸೆಯು ಕೊಲ್ಲುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ತಲೆತಲೆ ಮಾರುಗಳಿಂದ ನಾವು ಮತ್ತು ನಮ್ಮ ಕುಟುಂಬ ವರ್ಗ ವಾಸಿಸುತ್ತಿದ್ದ ಜಾಗದಲ್ಲೆಲ್ಲಾ ಇದೀಗ ಭಾರೀ ಪ್ರಮಾಣದ ಮಸೀದಿಗಳು ತಲೆ ಎತ್ತಿವೆ ಎಂದು ನನ್ನ ಕ್ಷೇತ್ರದ ವ್ಯಾಪ್ತಿಯ ಜನರು ಮಾತನಾಡುತ್ತಿದ್ದಾರೆ.