ನಾನು ಏಲಿಯನ್, ಆದ್ರೆ ಇದನ್ನ ಜನರೇ ನಂಬುತ್ತಿಲ್ಲ ಎಂದ ಎಲಾನ್ ಮಸ್ಕ್!
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಕಂಪನಿಯ ಸಿಇಒ ಎಲಾನ್ ಮಸ್ಕ್ ತಾವು ಏಲಿಯನ್ ಆದರೆ, ಜನರೇ ಇದನ್ನು ನಂಬುತ್ತಿಲ್ಲ ಎಂದು ಹೇಳಿದ್ದಾರೆ.
ನವದೆಹಲಿ (ಮೇ.25): ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಪ್ಯಾರಿಸ್‌ನಲ್ಲಿ ನಡೆದ ವಿವಾ ಟೆಕ್ ಈವೆಂಟ್‌ನಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು. ಈ ವೇಳೆ ಅನ್ಯಲೋಕದ ಜೀವಿಗಳ ಬಗ್ಗೆ ಅವರು ಮಾಡಿರುವ ಕಾಮೆಂಟ್ ವೈರಲ್ ಆಗಿದೆ. ನೀವು ಭೂಮಿಯ ಹೊರಗಿನ ಜೀವಿ ಎನ್ನುವ ಬಗ್ಗೆ ಆಗ್ಗಾಗ್ಗೆ ಮಾತುಗಳು ಕೇಳಿ ಬರುತ್ತದೆಯಲ್ಲ ಎನ್ನುವ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಮಸ್ಕ್, ಹೌದು ನಾನು ಏಲಿಯನ್ ಎಂದು ಹೇಳಿದ್ದಾರೆ. ನಾನು ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದೇನೆ. ನಾನೊಬ್ಬ ಏಲಿಯನ್ ಆದರೆ, ಯಾರೊಬ್ಬರೂ ಕೂಡ ಇದನ್ನು ನಂಬುತ್ತಿಲ್ಲ ಎಂದು ಹೇಳಿದ್ದಾರೆ. ಹಾಗೇನಾದರೂ ಏಲಿಯನ್ ಲೈಫ್ ಬಗ್ಗ ಏನಾದರೂ ಪುರಾವೆ ಸಿಕ್ಕಿದಲ್ಲಿ ಅದನ್ನು ಖಂಡಿತವಾಗಿಯೂ ಎಕ್ಸ್‌ನಲ್ಲಿ ಹಂಚಿಕೊಳ್ಳಲಿದ್ದೇನೆ ಎಂದು ಬಿಲಿಯನೇರ್ ಉದ್ಯಮಿ ಹೇಳಿದ್ದಾರೆ. ಅನ್ಯಗ್ರಹ ಜೀವಿಗಳ ಉಪಸ್ಥಿತಿಯ ಬಗ್ಗೆ ಮಾತನಾಡಿದ ಅವರು, "ಬಹುಶಃ ನಾವು ಈ ನಕ್ಷತ್ರಪುಂಜದಲ್ಲಿ ಒಬ್ಬಂಟಿಯಾಗಿದ್ದೇವೆ, ಬಹುಶಃ ಅದು ನಾವೇ ಆಗಿರಬಹುದು ಮತ್ತು ನಮ್ಮ ಪ್ರಜ್ಞೆಯು ಅತ್ಯಂತ ದುರ್ಬಲವಾಗಿರುತ್ತದ' ಎಂದು ಹೇಳಿದ್ದಾರೆ.
ಎಲಾನ್ ಮಸ್ಕ್ ಮಂಗಳ ಗ್ರಹದ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. "ಮುಂದಿನ 10 ವರ್ಷಗಳಲ್ಲಿ ಬಹುಶಃ ಏಳರಿಂದ ಎಂಟು ವರ್ಷಗಳಲ್ಲಿಮಂಗಳಗ್ರಹದಲ್ಲಿ ಮೊದಲ ಮಾನವನನ್ನು ಕಾಣಬಹುದು ಎಂದು ಭಾವಿಸುತ್ತೇನೆ. ಸ್ಪೇಸ್ ಎಕ್ಸ್‌ನ ದೀರ್ಘಾವಧಿಯ ಗುರಿ ಕೂಡ ಇದೇ ಆಗಿದೆ. ಜೀವಿಗಳು ಬದುಕಲು ಸಾಧ್ಯವಾಗಿಸುವಂಥ ಹೆಚ್ಚಿನ ಗ್ರಹಗಳನ್ನು ನಿರ್ಮಿಸುವುದು, ಸುಸ್ಥಿರ ಬಹು-ಗ್ರಹ ನಾಗರಿಕತೆ ಇದು ಸಾಧ್ಯವಾದಾಗ ಭೂಮಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಆ ಸಾಮರ್ಥ್ಯವು ಅಲ್ಪಾವಧಿಗೆ ಮಾತ್ರ ತೆರೆದಿರುತ್ತದೆ' ಎಂದು ಹೇಳಿದ್ದಾರೆ.
ಎಲೆನ್ ಮಸ್ಕ್ ಕಂಪನಿಯಲ್ಲಿ ಕೆಲಸ ಕಳ್ಕೊಂಡ ಪಾಕ್ ಮಹಿಳೆಯ ಭಾವನಾತ್ಮಕ ಲೆಟರ್ ವೈರಲ್!
OpenAI ಮತ್ತು Google ನ ಜೆಮಿನಿಯನ್ನು ಟೀಕಿಸಿದ ಅವರು, "ಎಐ ಅನ್ನು ಸತ್ಯವಂಥರಾಗಿರುವಂತೆ ತರಬೇತಿ ನೀಡಬೇಕು. ರಾಜಕೀಯವಾಗಿ ಸರಿಯಾಗಿರುವಂಥೆ ಅದನ್ನು ನಿರ್ಮಿಸಬಾರದು ಎಂದು ಹೇಳಿದ್ದಾರೆ. ರಾಜಕೀಯವಾಗಿ ಸರಿಯಾಗಿರುವುದು ಎಂದರೆ, ಅದು ನಿಜ ಎಂದು ಅರ್ಥವಲ್ಲ. ಇದರರ್ಥ ನೀವು ಎಐಗೆ ಸುಳ್ಳು ಹೇಳಲು ತರಬೇತಿ ನೀಡುತ್ತಿದ್ದೀರಿ ಎಂದರ್ಥ. ಭವಿಷ್ಯದ ದಿನಗಳಲ್ಲಿ ಇಂದು ಖಂಡಿತವಾಗಿಯೂ ನಮಗೆ ತಿರುಗುಬಾಣವಾಗುತ್ತದೆ. ಪ್ರಾಮಾಣಿಕತೆಯೇ ಉತ್ತಮ ನೀತಿ' ಎಂದು ಹೇಳಿದ್ದಾರೆ. ಎಐ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆಯೇ ಎಂಬುದರ ಕುರಿತು ಮಾತನಾಡಿದ ಬಿಲಿಯನೇರ್ ಅವರು ಜನರು ಕೆಲಸ ಮಾಡದ ಭವಿಷ್ಯವನ್ನು ಕಲ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಭಾರತ ಭೇಟಿ ಮುಂದೂಡಿದ ಬೆನ್ನಲ್ಲೇ ಎಲಾನ್ ಮಸ್ಕ್ ದಿಢೀರ್ ಚೀನಾಕ್ಕೆ ಭೇಟಿ