3 ನಿಮಿಷದಲ್ಲಿ 15,000 ಅಡಿ ಕೆಳಕ್ಕಿಳಿದ ವಿಮಾನ: ಭಯಭೀತರಾದ ಪ್ರಯಾಣಿಕರು!

ಅಮೆರಿಕದ ಉತ್ತರ ಕೆರೊಲಿನಾದ ಚಾರ್ಲೊಟ್ಟೆಯಿಂದ ಫ್ಲೋರಿಡಾದ ಗೈನೆಸ್‌ವಿಲ್ಲೆಗೆ ಅಮೇರಿಕನ್ ಏರ್‌ಲೈನ್ಸ್ ಫ್ಲೈಟ್ 5916 ಹೊರಟಿತ್ತು. ನಂತರ ವಿಮಾನವು "ಸಂಭವನೀಯ ಒತ್ತಡದ ಸಮಸ್ಯೆ" ವರದಿ ಮಾಡಿದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. 

terrifying experience for passengers as us plane drops 15 000 feet in 3 minutes ash

ವಾಷಿಂಗ್ಟನ್‌ ಡಿಸಿ (ಆಗಸ್ಟ್‌ 13, 2023):  ಅಮೆರಿಕ ಏರ್‌ಲೈನ್ಸ್‌ನ ಫ್ಲೋರಿಡಾಕ್ಕೆ ಹೋಗುವ ವಿಮಾನವು ಮೂರು ನಿಮಿಷಗಳಲ್ಲಿ 15 ಸಾವಿರ ಅಡಿ ಕೆಳಕ್ಕೆ ಇಳಿದಿರುವ ಆಘಾತಕಾರಿ ಘಟನೆ ನಡೆದಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮ ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ. ಈ ಘಟನೆಯು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ್ದು, ಹಲವರಿಗೆ ಭಯಾನಕ ಅನುಭವಗಳಾಗಿದೆ ಎಂದು ತಿಳಿದುಬಂದಿದೆ. 

ಅಮೆರಿಕದ ಉತ್ತರ ಕೆರೊಲಿನಾದ ಚಾರ್ಲೊಟ್ಟೆಯಿಂದ ಫ್ಲೋರಿಡಾದ ಗೈನೆಸ್‌ವಿಲ್ಲೆಗೆ ಅಮೇರಿಕನ್ ಏರ್‌ಲೈನ್ಸ್ ಫ್ಲೈಟ್ 5916 ಹೊರಟಿತ್ತು. ನಂತರ ವಿಮಾನವು "ಸಂಭವನೀಯ ಒತ್ತಡದ ಸಮಸ್ಯೆ" ವರದಿ ಮಾಡಿದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. 

ಇದನ್ನು ಓದಿ: ಆಲಿಕಲ್ಲಿಗೆ ವಿಮಾನದ ಮೂಗು, ರೆಕ್ಕೆ, ಎಂಜಿನ್‌ಗಳಿಗೆ ತೀವ್ರ ಹಾನಿ: ರೋಲರ್‌ ಕೋಸ್ಟರ್‌ನಂತೆ ಅಲುಗಾಡುತ್ತಿದ್ದ ಫ್ಲೈಟ್‌!

ಈ ಸಂಬಂಧ ವಿಮಾನದಲ್ಲಿದ್ದ ಪ್ರಯಾಣಿಕ ಮತ್ತು ಫ್ಲೋರಿಡಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹ್ಯಾರಿಸನ್ ಹೋವ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಷ್ಟವನ್ನು ವಿವರಿಸಿದ್ದಾರೆ. ಘಟನೆಯು "ಭಯಾನಕ" ಎಂದು ಅವರು ಹೇಳಿದ್ದು, ಮತ್ತು ‘’ಫೋಟೋಗಳು ಸುಡುವ ವಾಸನೆ, ಜೋರಾದ ಬ್ಯಾಂಗ್‌ ಶಬ್ದ ಅಥವಾ ಇಯರ್‌ ಪಾಪ್ಸ್‌ಗಳನ್ನು  ಸೆರೆಹಿಡಿಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು. ಈ ಸಂಬಂಧ ಎಕ್ಸ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಆಕ್ಸಿಜನ್ ಮಾಸ್ಕ್‌ಗಳು ವಿಮಾನದಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು, ಅವರೂ ಸೇರಿದಂತೆ ಅನೇಕ ಪ್ರಯಾಣಿಕರು ಅದರ ಸಹಾಯದಿಂದ ಉಸಿರಾಡಲು ಪ್ರಯತ್ನಿಸುತ್ತಿದ್ದಾರೆ’’ ಎಂದು ತಿಳಿದುಬಂದಿದೆ.

 ಇನ್ನು, "ನಾನು ಸಾಕಷ್ಟು ಹಾರಾಡಿದ್ದೇನೆ. ಇದು ಭಯಾನಕವಾಗಿತ್ತು. @AmericanAir 5916 ರಲ್ಲಿನ ನಮ್ಮ ಅದ್ಭುತ ಫ್ಲೈಟ್ ಸಿಬ್ಬಂದಿ- ಕ್ಯಾಬಿನ್ ಸಿಬ್ಬಂದಿ ಮತ್ತು ಪೈಲಟ್‌ಗಳಿಗೆ ಅಭಿನಂದನೆಗಳು. ಫೋಟೋಗಳು ಸುಡುವ ವಾಸನೆ, ಜೋರಾದ ಬ್ಯಾಂಗ್‌ ಶಬ್ದ ಅಥವಾ ಇಯರ್‌ ಪಾಪ್ಸ್‌ಗಳನ್ನು  ಸೆರೆಹಿಡಿಯಲು ಸಾಧ್ಯವಿಲ್ಲ. ನೆಲದ ಮೇಲೆ ಲ್ಯಾಂಡ್‌ ಆಗಿರುವುದು ಒಳ್ಳೆಯದು" ಎಂದೂ ಅವರು ಹೇಳಿದ್ದಾರೆ. 

ಇದನ್ನೂ ಓದಿ: ಕೆಲಸದ ಸಮಯ ಮುಗಿಯಿತೆಂದು ದಿಲ್ಲಿ ತಲುಪಬೇಕಿದ್ದ 300 ಜನರ ಜೈಪುರದಲ್ಲೇ ಇಳಿಸಿ ಹೋದ ಏರ್‌ ಇಂಡಿಯಾ ಪೈಲಟ್‌!

ಫ್ಲೈಟ್‌ಅವೇರ್ ಹಂಚಿಕೊಂಡ ಮಾಹಿತಿಯ ಪ್ರಕಾರ, ವಿಮಾನವು 11 ನಿಮಿಷಗಳಲ್ಲಿ ಸುಮಾರು 20,000 ಅಡಿಗಳಷ್ಟು ಕೆಳಕ್ಕೆ ಇಳಿದಿದೆ. 43 ನಿಮಿಷಗಳ ಪ್ರಯಾಣದ ನಂತರ ಆರು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ವಿಮಾನವು 18,600 ಅಡಿಗಳಷ್ಟು ಕೆಳಗಿಳಿಯಿತು ಎಂದು ತಿಳಿದುಬಂದಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಹ್ಯಾರಿಸನ್ ಹೋವ್ ಅವರು, "ವಿಮಾನ ಹಾರಾಟ ನಡೆಸುತ್ತಿದ್ದಾಗ ಏನೋ ವಿಫಲವಾಗಿದೆ ಮತ್ತು ಕ್ಯಾಬಿನ್ ಅನ್ನು ಡೀಪ್ರೆಶರೈಸ್‌ ಮಾಡಿದೆ. ಸುಡುವ ವಾಸನೆಯು ಆಮ್ಲಜನಕದ ಕ್ಯಾನಿಸ್ಟರ್‌ಗಳನ್ನು ಬಳಸುವುದಕ್ಕೆ ಸ್ಪಷ್ಟವಾಗಿ ಕಾರಣವಾಗಿದೆ’’ "ರೆಕ್ಕೆಯ ಫ್ಲಾಪ್‌ಗಳು ನಮ್ಮ ಎತ್ತರವನ್ನು ತಕ್ಷಣವೇ ಕಡಿಮೆ ಮಾಡಲು ಹೊರಬಂದವು. ಅದರಿಂದ ಹೆಚ್ಚಿನ ಆಮ್ಲಜನಕ ಸಿಗುತ್ತದೆ’’’’ಇದು ಭಯಾನಕವಾಗಿತ್ತು, ಆದರೂ ಅವಘಡ ಸಂಭವಿಸಲಿಲ್ಲ’’  ಎಂದೂ ಅವರು ಹೇಳಿದ್ದಾರೆ. 

ಇದನ್ನೂ ಓದಿ: Snake Smuggling: ಬ್ರಾನಲ್ಲಿ 5 ಜೀವಂತ ಹಾವುಗಳನ್ನು ಸಾಗಿಸಿದ ಮಹಿಳೆ

ಇನ್ನು, ಈ ಘಟನೆ ಬಗ್ಗೆ ಅಮೆರಿಕನ್ ಏರ್‌ಲೈನ್ಸ್ ಪ್ರತಿಕ್ರಿಯೆ ನೀಡಿದ್ದು, "ಒತ್ತಡದ ಸಮಸ್ಯೆಯಿಂದಾಗಿ ಕಡಿಮೆ ಎತ್ತರದಲ್ಲಿ ಸುರಕ್ಷಿತವಾಗಿ ಇಳಿಯಲು ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್‌ಗೆ ಹೇಳಿಕೆಯಲ್ಲಿ ತಿಳಿಸಿದೆ. "ಪೀಡ್ಮಾಂಟ್ ಏರ್ಲೈನ್ಸ್ ನಿರ್ವಹಿಸುತ್ತಿರುವ ಅಮೆರಿಕನ್ ಈಗಲ್ ಫ್ಲೈಟ್ 5916, ಚಾರ್ಲೆಟ್ (CLT) ನಿಂದ ಫ್ಲೋರಿಡಾದ ಗೇನೆಸ್ವಿಲ್ಲೆಗೆ (GNV) ಗುರುವಾರ, ಆಗಸ್ಟ್ 10 ರಂದು GNV ನಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ವಿಮಾನದಲ್ಲಿದ್ದಾಗ, ಸಿಬ್ಬಂದಿ ಸಂಭವನೀಯ ಒತ್ತಡದ ಸಮಸ್ಯೆಯ ಸೂಚನೆಯನ್ನು ಪಡೆದರು ಮತ್ತು ತಕ್ಷಣವೇ ಸುರಕ್ಷಿತವಾಗಿ ಕಡಿಮೆ ಎತ್ತರಕ್ಕೆ ಇಳಿದರು. ಯಾವುದೇ ಅನಾನುಕೂಲತೆಗಾಗಿ ನಾವು ನಮ್ಮ ಗ್ರಾಹಕರಿಗೆ ಕ್ಷಮೆಯಾಚಿಸುತ್ತೇವೆ ಮತ್ತು ಅವರ ವೃತ್ತಿಪರತೆಗಾಗಿ ನಮ್ಮ ತಂಡಕ್ಕೆ ಧನ್ಯವಾದ ಹೇಳುತ್ತೇವೆ" ಎಂದು ಅಮೆರಿಕನ್‌ ಏರ್‌ಲೈನ್ಸ್‌ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಚೀನಾ ಭೇಟಿ ವೇಳೆ ಒಂದಲ್ಲ.. ಎರಡು ವಿಮಾನ ಕೊಂಡೊಯ್ದ ನ್ಯೂಜಿಲೆಂಡ್‌ ಪ್ರಧಾನಿ: ಕಾರಣ ಇಲ್ಲಿದೆ..

Latest Videos
Follow Us:
Download App:
  • android
  • ios