ಮಕ್ಕಳು ಸರಿಯಾಗಿ ಹೋಮ್‌ವರ್ಕ್ ಮಾಡುತ್ತಿಲ್ಲಾ ಎಂದು ಗದರಿಸುತ್ತೀರಾ? ಕೋಲು ಹಿಡಿದು ಹೋಮ್ ವರ್ಕ್ ಮಾಡಿಸುತ್ತೀರಾ? ಹೀಗೆ ಮಾಡುತ್ತಿದ್ದರೆ ನೀವು ಈ ಘಟನೆ ಒದಬೇಕು. ಕಾರಣ 10 ವರ್ಷದ ಬಾಲಕ, ಹೋಮ್‌ವರ್ಕ್ ಮಾಡಲು ಗದರಿಸಿದ ತಂದೆಯನ್ನೇ ಜೈಲು ಸೇರಿಸಿದ ಘಟನೆ ನಡೆದಿದೆ.
ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿವುದು, ಸಂಜೆ ಹೋಮ್ ವರ್ಕ್ ಮಾಡಿಸುವುದು ಪೋಷಕರಿಗೆ ಅತೀ ದೊಡ್ಡ ತಲೆನೋವು. ಇಷ್ಟು ಮಾಡುವಾಗ ಪೋಷಕರು ತಾಳ್ಮೆ ಕಳೆದುಕೊಳ್ಳುತ್ತಾರೆ, ಹೈರಣಾಗುತ್ತಾರೆ, ಸಾಕಪ್ಪ ಸಾಕು ಅಂತಾರೆ. ಹಲವು ಬಾರಿ ಮಕ್ಕಳು ಹೋಮ್ ವರ್ಕ್ ಮಾಡಲು ಬೆದರಿಸಬೇಕಾಗುತ್ತದೆ, ಗದರಿಕೆ, ಕೂಗಾಟ, ರೇಗಾಟ ಇದ್ದಿದ್ದೇ. ಕೋಲು ಹಿಡಿದು ಮಕ್ಕಳ ಹೋಮ್ ವರ್ಕ್ ಮಾಡಿಸುವ ಪೋಷಕರು ಹಲವರಿದ್ದಾರೆ. ಹೀಗೆ 10 ವರ್ಷದ ಮಗ ಎಷ್ಟು ಹೇಳಿದರೂ ಹೋಮ್ ವರ್ಕ್ ಮಾಡದ ಕಾರಣ ತಂದೆ ಗದರಿಸಿದ್ದಾನೆ. ಆದರೆ ಕೋಪಗೊಂಡ ಬಾಲಕ, ಒಂದೇ ಒಂದು ಫೋನ್ ಕರೆ ಮಾಡಿ ಅಪ್ಪನ ಜೈಲಿಗೆ ಕಳುಹಿಸಿದ ಘಟನೆ ಚೀನಾದ ಯಾಂಗಿಂಗ್ ಕೌಂಟಿಯಲ್ಲಿ ನಡೆದಿದೆ.
ಶಾಲೆ ಮುಗಿಸಿ ಮನಗೆ ಮರಳಿದ ಬಾಲಕನಿಗೆ ಹೋಮ್ ವರ್ಕ್ ಬೇಗನೆ ಮುಗಿಸಲು ತಂದೆ ಸೂಚಿಸಿದ್ದಾನೆ. ಬಳಿಕ ತಂದೆ ತನ್ನ ಕಾರ್ಯದಲ್ಲಿ ತೊಡಗಿದ್ದಾನೆ. ಆದರೆ ಮಗನ ಆಟ ಮುಗಿದಿಲ್ಲ. ಹೋಮ್ ವರ್ಕ್ ಹಾಗೇ ಉಳಿದುಕೊಂಡಿದೆ. ಮತ್ತೆ ಹೋಮ್ ವರ್ಕ್ ಮಾಡುವಂತೆ ಸೂಚಿಸಿದ ತಂದೆ ತನ್ನ ಕೆಲಸ ಮುಂದುವರಿಸಿದ್ದಾನೆ. ಆದರೆ ಅದೆಷ್ಟೇ ಹೇಳಿದರೂ ಬಾಲಕನ ಹೋಮ್ ವರ್ಕ್ ಮಾತ್ರ ಆಗಲೇ ಇಲ್ಲ.
ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿದ ಕಾರು ಕಳ್ಳತನ, ಹಿಂಬದಿ ಸೀಟಿನಲ್ಲಿದ್ದ ಕಂದನ ನೋಡಿ ಕಳ್ಳ ಮಾಡಿದ್ದೇನು?
ಮಧ್ಯಾಹ್ನಾದ ಹೊತ್ತಿಗೆ ಮನೆಗೆ ಮರಳಿದ ಬಾಲಕ, ಆಟ, ಟಿವಿ ಹೀಗೆ ಸಂಜೆವರೆಗೂ ಕಾಲ ಕಳೆದಿದ್ದಾನೆ. ಇದು ಅಪ್ಪನ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕೋಲು ತಂದ ತಂದೆ, ಗದರಿಸಿದ್ದಾನೆ. 10 ನಿಮಿಷದಲ್ಲಿ ಹೋಮ್ ವರ್ಕ್ ಅಚ್ಚುಕಟ್ಟಾಗಿ ಮುಗಿಸಬೇಕು ಎಂದು ಗದರಿಸಿದ್ದಾನೆ. ಬಳಿಕ ಕೋಲು ಹಿಡಿದು ಕುಳಿತಿದ್ದಾನೆ. ಒಂದೆರಡು ಏಟು ಕೂಡ ಬಿದ್ದಿದೆ. ಇದು ಬಾಲಕನಲ್ಲಿ ಆಕ್ರೋಶ ಹೆಚ್ಚಿಸಿದೆ. ಪ್ರಯಾಸದಿಂದ ಹೋಮ್ ವರ್ಕ್ ಮುಗಿಸಿದ ಬಾಲಕನಿಗೆ, ಇದು ಮೊದಲೇ ಮಾಡಿದ್ದರೆ ಸಮಸ್ಯೆ ಇತ್ತಾ ಎಂದು ಮತ್ತೆ ಅಪ್ಪ ಗದರಿಸಿದ್ದಾನೆ.
ಮಗನ ಹೋಮ್ ವರ್ಕ್ ಮುಗಿಸಿದ ತಂದೆ ತನ್ನ ಕೆಲಸದಲ್ಲಿ ತೊಡಗಿಸಿದ್ದಾನೆ. ಇತ್ತ ಆಟವಾಡಲು ಹೋಗುತ್ತೇನೆ ಎಂದು ಹೋದ ಬಾಲಕ ಪಕ್ಕದ ಸ್ಟೋರ್‌ಗೆ ತೆರಳಿ ಫೋನ್ ಪಡೆದು ಪೊಲೀಸರಿಗೆ ಕರೆ ಮಾಡಿದ್ದಾನೆ. ಮನೆ ವಿಳಾಸ ತಿಳಿಸಿದ ಬಾಲಕ, ತನ್ನ ತಂದೆ ಮನೆಯಲ್ಲಿ ಡ್ರಗ್ಸ್ ಬಳಸುತ್ತಾರೆ. ಮಾದಕ ವಸ್ತು ಬಳಸಿ ನನಗೆ ಗದರಿಸುತ್ತಾರೆ ಎಂದು ತಿಳಿಸಿದ್ದಾನೆ. ಇತ್ತ ಬಾಲಕ ಮೈದಾನದಲ್ಲಿ ಆಟವಾಡಲು ತೆರಳಿದ್ದಾನೆ.
ಕತ್ತಲಾಗುತ್ತಿದ್ದಂತೆ ಬಾಲಕ ಮನೆಗೆ ಮರಳಿದ್ದಾನೆ. ಕೆಲ ಹೊತ್ತಲ್ಲೇ ಮನೆಗೆ ಪೊಲೀಸರು ಆಗಮಿಸಿದ್ದಾರೆ. ಮಾದಕ ವಸ್ತುಗಳ ಶೇಕರಿಸಿರುವ ಕುರಿತು ಮಾಹಿತಿ ಸಿಕ್ಕಿದೆ, ಮನೆ ಪರಿಶೋಧಿಸಬೇಕು, ಸಹಕರಿಸಿ ಎಂದು ಪೊಲೀಸರು ವಾರ್ನಿಂಗ್ ನೋಟಿಸ್ ನೀಡಿದ್ದಾರೆ. ಬಳಿಕ ಮನೆ ಪರಿಶೋಧಿಸಿದಾಗ ಹಳೆಯ ಸಣ್ಣ ಪ್ಯಾಕೆಟ್ ಒಂದು ಸಿಕ್ಕಿದೆ. ಇದು ನಿಜಕ್ಕೂ ಮಾದಕ ವಸ್ತುವೇ ಆಗಿತ್ತು. ಚೀನಾದಲ್ಲ ಆಫೀಮು ಸೇರಿದಂತೆ ಮಾದಕ ವಸ್ತುಗಳ ಬಳಕೆ,ಮಾರಾಟ, ಅಪರಾಧವಾಗಿದೆ. ತಕ್ಷಣವೇ ಪೊಲೀಸರು ತಂದೆಯನ್ನು ಅರೆಸ್ಟ್ ಮಾಡಿದ್ದಾರೆ. ಔಷಧಿ ಕಾರಣಕ್ಕಾಗಿ ಈ ಆಫೀಮು ತರಿಸಿದ್ದೇನೆ. ಆದರೆ ಇದನ್ನು ಯಾವತ್ತೂ ಬಳಸಿಲ್ಲ. ಹಲವು ವರ್ಷಗಳ ಹಿಂದೆ ತರಿಸಿದ್ದೇನೆ. ಬಳಿಕ ಈ ವಿಚಾರ ಮರತು ಹೋಗಿದೆ ಎಂದು ಎಷ್ಟು ಹೇಳಿದರೂ ಪೊಲೀಸರು ಕೇಳಲಿಲ್ಲ. ಜೈಲು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ. ಇದೀಗ ಇಡೀ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಪತ್ನಿ ಹಾಗೂ ಕುಟುಂಬಸ್ಥರು ಪತಿಗೆ ಜಾಮೀನು ಕೊಡಿಸಲು ಓಡಾಟ ಆರಂಭಿಸಿದ್ದಾರೆ. ದುಬಾರಿ ಮೊತ್ತ ದಂಡದ ರೂಪದಲ್ಲಿ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ.
ಓ ದೇವ್ರೇ ಇಂಥ ಮಕ್ಕಳನ್ನು ಯಾರಿಗೂ ಕೊಡಬೇಡ; ಕುಂಭಮೇಳದಲ್ಲಿ ವೃದ್ಧ ಪೋಷಕರನ್ನು ಬಿಟ್ಟು ಹೋದ ಪಾಪಿ ಮಕ್ಕಳು
