6 ವರ್ಷದಿಂದ ಸೋಶಿಯಲ್‌ ಮೀಡಿಯಾ ಬಳಸದ ಮಗ ಮಗನಿಗೆ 1.36 ಲಕ್ಷ ರೂ. ನೀಡಿದ ಅಮ್ಮ 12 ವರ್ಷದವನಿದ್ದಾಗ ಸವಾಲು ಹಾಕಿದ್ದ ಅಮ್ಮ 18 ತುಂಬುತ್ತಿದ್ದಂತೆ ಚೆಕ್‌ ಕೊಟ್ಟ ಅಮ್ಮ  

6 ವರ್ಷಗಳ ಸೋಶಿಯಲ್‌ ಮೀಡಿಯಾ ಬಳಸದ ಮಗನಿಗೆ ಅಮ್ಮ 1.36 ಲಕ್ಷ ರೂ. ಹಣ ನೀಡಿದ ಘಟನೆ ಅಮೆರಿಕಾದ ಮಿನ್ನೆಸ್ಟೋದಲ್ಲಿ (Minnesota) ನಡೆದಿದೆ. ಎಳೆಯ ಹಾಗೂ ಹದಿಹರೆಯದ ಮಕ್ಕಳನ್ನು ಫೋನ್‌ ಹಾಗೂ ಸಾಮಾಜಿಕ ಜಾಲತಾಣದಿಂದ ದೂರವಿರಿಸುವುದು ಬಲು ಕಷ್ಟದ ಕೆಲಸ. ಒಮ್ಮೆ ಸಾಮಾಜಿಕ ಜಾಲತಾಣ ಅಥವಾ ಸ್ಮಾರ್ಟ್‌ಫೋನ್‌ಗಳ ಚಟಕ್ಕೆ ಒಳಗಾದರೆ ಅದನ್ನು ತೊರೆಯುವುದು ಬಲು ಕಷ್ಟದ ಕೆಲಸ ಈ ಹಿನ್ನೆಲೆಯಲ್ಲಿ ಅಮ್ಮ ಒಬ್ಬರು ಹೊಸ ಉಪಾಯ ಮಾಡಿದ್ದು, ಅದು ಯಶಸ್ವಿಯಾಗಿದೆ. 

ತಾಯಿ ಲೊರ್ನಾ ಗೋಲ್ಡ್‌ಸ್ಟ್ರಾಂಡ್ ಕ್ಲೆಫ್ಸಾಸ್ (Lorna Goldstrand Klefsaas) ತಮ್ಮ ಪುತ್ರ ಸಿವರ್ಟ್ ಕ್ಲೆಫ್ಸಾಸ್‌ಗೆ (Sivert Klefsaas) ಸೋಶಿಯಲ್‌ ಮೀಡಿಯಾ ಬಳಸದಿದ್ದರೆ ಹಣ ನೀಡುವುದಾಗಿ ಷರತ್ತು ವಿಧಿಸಿದ್ದರು. 6 ವರ್ಷಗಳ ಹಿಂದೆ ಅಂದರೆ ಸಿವರ್ಟ್ ಕ್ಲೆಫ್ಸಾಸ್‌ಗೆ 12 ವರ್ಷವಿದ್ದಾಗ 2016ರಲ್ಲಿ ಈ ಸವಾಲು ಆರಂಭವಾಗಿತ್ತು. ಈ ಷರತ್ತಿನಂತೆ ತರುಣ ಸಿವರ್ಟ್ ಕ್ಲೆಫ್ಸಾಸ್‌ ಯಾವುದೇ ಸೋಶಿಯಲ್‌ ಮೀಡಿಯಾ ಬಳಸದೇ 6 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಆತನ 18ನೇ ವರ್ಷದ ಹುಟ್ಟಿದ ಹಬ್ಬದಂದು ತಾಯಿ ಆತನಿಗೆ ನೀಡಿದ ಭರವಸೆಯಂತೆ 1,800 ಡಾಲರ್‌ ಅಂದರೆ 1.36 ಲಕ್ಷ ರೂಪಾಯಿಯ ಚೆಕ್‌ನ್ನು ನೀಡಿದ್ದಾರೆ.

ಇದಕ್ಕೂ ಮೊದಲು ಇವರ ದೊಡ್ಡ ಪುತ್ರಿ ಸಾಮಾಜಿಕ ಜಾಲತಾಣದ ಅಡಿಕ್ಟ್‌(ಚಟ)ಗೆ ಒಳಗಾಗಿ ತನ್ನ ತಾರುಣ್ಯದಲ್ಲಿ ಭಾರಿ ಕಷ್ಟಪಟ್ಟಿದ್ದಳು. ಇದನ್ನು ಗಮನಿಸಿಕೊಂಡಿದ್ದ ತಾಯಿ ಲೊರ್ನಾ ಗೋಲ್ಡ್‌ಸ್ಟ್ರಾಂಡ್ ಕ್ಲೆಫ್ಸಾಸ್ ಅವರು ತಮ್ಮ ಪುತ್ರ ಸಿವರ್ಟ್ ಕ್ಲೆಫ್ಸಾಸ್‌ಗೂ ಆ ರೀತಿ ಆಗುವುದು ಬೇಡ ಎಂದು ಈ ಐಡಿಯಾ ಮಾಡಿದ್ದಾರೆ. ಈ ಮೂಲಕ ಸಿವರ್ಟ್ ಕ್ಲೆಫ್ಸಾಸ್‌ ತನ್ನ 18ನೇ ವರ್ಷಕ್ಕೆ ಲಕ್ಷಾಧಿಪತಿಯಾಗಿದ್ದಾನೆ. 

Childs Personality: ಹಠ ಮಾಡುವ ಮಕ್ಕಳನ್ನು ಸರಿ ಮಾಡುವುದು ಹೇಗೆ ?

ನೀವು ನಂಬುತ್ತಿರೊ ಇಲ್ಲವೋ ಈ ಷರತ್ತು ಆರಂಭವಾದಾಗಿನಿಂದಲೂ ಸಿವರ್ಟ್ ಕ್ಲೆಫ್ಸಾಸ್‌ ಸೋಶಿಯಲ್‌ ಮೀಡಿಯಾ ಬಳಸಿಯೇ ಇಲ್ಲ. ಮಗನಿಗೆ 18 ವರ್ಷ ತುಂಬುತ್ತಿದ್ದಂತೆ ತಾಯಿ ಲೊರ್ನಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮ್ಮ ಪುತ್ರ ಈಗ ಹಲವು ಸೋಶಿಯಲ್‌ ಸೈಟ್‌ಗಳಲ್ಲಿ ತನ್ನ ಖಾತೆ ತೆರೆಯಬಹುದು ಎಂದು ಬರೆದುಕೊಂಡಿದ್ದರು. 

6 ವರ್ಷಗಳ ಹಿಂದೆ ನಾನು ನನ್ನ 12 ವರ್ಷದ ಮಗನಿಗೆ 18 ತುಂಬುವವರೆಗೆ ಸೋಶಿಯಲ್‌ ಮೀಡಿಯಾ ಬಳಸದಿದ್ದರೆ 1800 ಡಾಲರ್‌ ನೀಡುವ ಭರವಸೆ ನೀಡಿದೆ. ನಮ್ಮ ಈ ಒಪ್ಪಂದಕ್ಕೆ ಆತ ಒಪ್ಪಿಕೊಂಡ ಇಂದು ಆತನಿಗೆ 18 ವರ್ಷ ತುಂಬಿದ್ದು ಆತ ತನ್ನ ಪರ್ಸ್‌ನಲ್ಲಿ 1800 ಡಾಲರ್‌ ಹಣವನ್ನು ಹೊಂದಲಿದ್ದಾನೆ. ಹಾಗೆಯೇ ಇನ್ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್‌ ಹಾಗೂ ಟ್ವಿಟ್ಟರ್‌ನಲ್ಲಿ ಖಾತೆಯನ್ನು ತೆರೆಯಲಿದ್ದಾನೆ ಎಂದು ಅವರು ಹೇಳಿದರು.

Parenting Tips: ಮಕ್ಕಳಿಗೆ ಚಿಕ್ಕಂದಿನಲ್ಲೇ ಕಲಿಸಿಕೊಡಬೇಕಾದ ವಿಚಾರಗಳಿವು


ಅವನು ಈ ಒಪ್ಪಂದವನ್ನು ಮುರಿಯುವುದಿಲ್ಲ ಎಂದಿದ್ದನು. ಆತನ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ಕೆಲವು ಸಮಯಗಳಲ್ಲಿ ಇದು ತುಂಬಾ ಕಷ್ಟದ ಕೆಲಸ ಎಂದು ಬಹುತೇಕರು ಹೇಳುತ್ತಾರೆ ಎಂದು ತಾಯಿ ಲೊರ್ನಾ ಹೇಳಿದ್ದಾರೆ. ಇದಕ್ಕೂ ಮೊದಲು ಇವರ ದೊಡ್ಡ ಪುತ್ರಿ ಸಾಮಾಜಿಕ ಜಾಲತಾಣಕ್ಕೆ ಎಡಿಕ್ಟ್ ಆಗಿ ಅದನ್ನು ನಿರ್ವಹಿಸಲಾಗದೆ ತನ್ನ ತಾರುಣ್ಯದ ದಿನಗಳಲ್ಲಿ ಭಾರಿ ಕಷ್ಟ ಪಟ್ಟಿದ್ದಳು. ಅವಳ ಸ್ನ್ಯಾಪ್‌ಚಾಟ್ ಗೀಳು ಅವಳ ಮನಸ್ಥಿತಿಯ ಮೇಲೆ ಅವಳ ಸ್ನೇಹದ ಮೇಲೆ ಭಾರಿ ಪರಿಣಾಮ ಬೀರಿತ್ತು. ಅವಳು ತುಂಬಾ ನಿರಾಸೆಗೊಳಗಾಗಿದ್ದಳು. ಆದರೆ ಮೂರು ವಾರಗಳ ನಂತರ ಆಕೆ ಸುಧಾರಿಸಿಕೊಂಡಿದ್ದಳು. ಅಲ್ಲದೇ ಫೋನ್‌ ಇಲ್ಲದೆಯೂ ತಾನು ಖುಷಿಯಾಗಿರಬಲ್ಲೇ ಎಂದು ಆಕೆ ಹೇಳಿದ್ದಳು. 

ರೆಡಿಯೋದಲ್ಲಿ ಬಂದ ಇಂತಹದ್ದೇ ಸವಾಲಿನ ಆಟದಿಂದ ಪ್ರೇರಿತರಾಗಿ ತಾಯಿ ಲೊರ್ನಾ 18 for 18 ಚಾಲೆಂಜ್‌ ಎಂಬ ಈ ಯೋಜನೆಯನ್ನು ರೂಪಿಸಿದರು. ಅಂದುಕೊಂಡಂತೆ ಇವರ ಯೋಜನೆ ಯಶಸ್ವಿಯಾಗಿದ್ದು, ಇವರ ಪುತ್ರ ಸೀವರ್ಟ್‌ ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಂಡರು.