ಕೊರೋನಾ ಕಾರಣದಿಂದ ಶಾಲಾ ತರಗತಿಗಳು ಆನ್‌ಲೈನ್ ಮೂಲಕವೇ ನಡೆಯುತ್ತಿತ್ತು. ಈ ವೇಳೆ ಶಿಕ್ಷಕಿ ಮನೆಯ ಬೆಕ್ಕು ಪದೇ ಪದೇ ಅಡ್ಡ ಬಂದಿದೆ. ಇದರಿಂದ ಕೆರಳಿದ ಶಾಲಾ ಆಡಳಿತ ಮಂಡಳಿ ಶಿಕ್ಷಿಕಿಯನ್ನು ಅಮಾನತ್ತು ಮಾಡಿತ್ತು. ಆದರೆ ಕೋರ್ಟ್ ಮೊರೆ ಹೋದ ಶಿಕ್ಷಕಿಗೆ ಇದೀಗ 4.7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಶಾಲೆಗೆ ಕೋರ್ಟ್ ಸೂಚಿಸಿದೆ.
ಗೌಂಜೌ(ಆ.21): ಕೊರೋನಾ ಸಮಯದಲ್ಲಿ ಎಲ್ಲಾ ಕ್ಷೇತ್ರಗಳು ಆನ್‌ಲೈನ್ ಮೂಲಕವೇ ನಡೆಯುತ್ತಿತ್ತು. ಶಾಲಾ ತರಗತಿಗಳು ಇದಕ್ಕೆ ಹೊರತಾಗಿರಲಿಲ್ಲ. ಹೀಗೆ ಕಳೆದ ವರ್ಷ ಕೊರೋನಾ ಅಬ್ಬರ ಹೆಚ್ಚಿದ್ದ ಸಂದರ್ಭದಲ್ಲಿ ಮಕ್ಕಳಿಗೆ ಆನ್‌ಲೈನ್ ಮೂಲಕ ಪಾಠ ಹೇಳಿಕೊಡಲಾಗುತ್ತಿತ್ತು. ಕಲಾ ಶಿಕ್ಷಕಿ ಮಕ್ಕಳಿಗೆ ಪಾಠ ಮಾಡುವ ವೇಳೆ ಪದೇ ಪದೇ ಬೆಕ್ಕು ಅಡ್ಡಬಂದಿದೆ. ಶಿಕ್ಷಕಿ ಬೆಕ್ಕು ಓಡಿಸಿದರೂ ಮತ್ತೆ ತರಗತಿಗೆ ಅಡ್ಡಪಡಿಸಿದೆ. ಇದರಿಂದ ಕೆರಳಿದ ಶಾಲಾ ಆಡಳಿತ ಮಂಡಳಿ ಕಲಾ ಶಿಕ್ಷಕಿಯನ್ನು ಅಮಾನತು ಮಾಡಿತ್ತು. ಮೊದಲೇ ಕೊರೋನಾ ಹಾವಳಿ, ಇತ್ತ ಕೆಲಸವೂ ಇಲ್ಲದ ಶಿಕ್ಷಕಿ ಕಂಗಲಾಗಿದ್ದಾರೆ. ತನ್ನದ್ದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವುದು ಯಾಕೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಒಂದು ವರ್ಷದಿಂದ ವಿಚಾರಣೆ ನಡೆಯುತ್ತಿತ್ತು. ಇದೀಗ ತೀರ್ಪು ಬಂದಿದೆ. ಶಾಲಾ ಅಡಳಿತ ಮಂಡಳಿ ಶಿಕ್ಷಕಿಯನ್ನು ಅಮಾನತು ಮಾಡಿದ್ದು ತಪ್ಪು ಎಂದಿದೆ. ಇಷ್ಟೇ ಅಲ್ಲ 4.7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ಕೋರ್ಟ್ ಸೂಚಿಸಿದೆ. ಅಂದ ಹಾಗೆ ಈ ಘಟನೆ ನಡೆದಿರಿವುದು ಚೀನಾದಲ್ಲಿ.
2021ರ ಜೂನ್‌ನಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿತ್ತು. ಎರಡನೇ ಅಲೆಯಿಂದ ಭಾರತವೂ ಕಂಗಲಾಗಿತ್ತು. ಚೀನಾ ಬಹುತೇಕ ಬಂದ್ ಆಗಿತ್ತು. ಈ ವೇಳೆ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಮೂಲಕ ಮಕ್ಕಳಿಗೆ ತರಗತಿ ನಡೆಸಿತ್ತು. ಹೀಗೆ ಚೀನಾದ ಖ್ಯಾತ ಶಿಕ್ಷಣ ಸಂಸ್ಥೆ ಆನ್‌ಲೈನ್ ಕ್ಲಾಸ್ ಮೊರೆ ಹೋಗಿತ್ತು. ಕಲಾ ಶಿಕ್ಷಕಿ ಲ್ಯೂ ಆನ್‌ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಂಡಿದ್ದಾರೆ. ಆದರೆ ತರಗತಿ ತೆಗೆದುಕೊಳ್ಳುವ ವೇಳೆ ಲ್ಯೂ ಮನೆಯ ಬೆಕ್ಕು ಪದೆ ಪದೇ ಕ್ಯಾಮರಾ ಮುಂದೆ ಬಂದಿದೆ. ಬೆಕ್ಕು ನೋಡಿದ ಮಕ್ಕಳು ನಕ್ಕಿದ್ದಾರೆ.
ಆನ್‌ಲೈನ್ ಕ್ಲಾಸ್‌ನಲ್ಲಿ ಭಾಗಿಯಾದ ಮಕ್ಕಳಲ್ಲಿ ತೀವ್ರ ತಲೆನೋವಿನ ಸಮಸ್ಯೆ; ಅಧ್ಯಯನದಿಂದ ಶಾಕಿಂಗ್ ಮಾಹಿತಿ
ಬೆಕ್ಕು ಅಡ್ಡಬಂದಾಗ ಶಿಕ್ಷಕಿ ಓಡಿಸಿದ್ದಾರೆ. ಇದರಿಂದ ಕೆಲ ಸೆಕೆಂಡ್‌ಗಳ ಕಾಲ ತರಗತಿಗೆ ಅಡ್ಡಿಯಾಗಿದೆ. ಆದರೆ ಇದನ್ನು ಗಮನಿಸುತ್ತಿದ್ದ ಶಾಲಾ ಆಡಳಿತ ಮಂಡಳಿ ಗರಂ ಆಗಿದೆ. ಬೆಕ್ಕು ಅಡ್ಡ ಬಂದ ಕಾರಣ ಶಾಲೆಯ ಇಮೇಜ್‌ಗೆ ಧಕ್ಕೆ ಬಂದಿದೆ. ಶಿಕ್ಷಕರ ವೃತ್ತಿಪರತೆಗೆ ಧಕ್ಕೆಯಾಗಿದೆ. ಶಾಲಾ ತರಗತಿಗಳು ನಗೆಪಾಟಲೀಗೀಡಾಗಿದೆ. ತರಗತಿಗಳು ಸ್ಥಗಿತಗೊಂಡಿದೆ ಅನ್ನೋ ಹಲವು ಕಾರಣಗಳನ್ನು ನೀಡಿ ಶಿಕ್ಷಕಿ ಲ್ಯೂ ಅಮಾನತು ಮಾಡಲಾಗಿತ್ತು. ಕೋರ್ಟ್ ವಾದದ ವೇಳೆ ಶಿಕ್ಷಕಿ ಹಲವು ಬಾರಿ ವಿಳಂಬವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ಶಾಲಾ ಆಡಳಿತ ಮಂಡಳಿಯ ನಿರ್ಧಾರ ಎಂದು ವಾದ ಮಾಡಿತ್ತು. ಬೆಕ್ಕು ಅಡ್ಡಬಂದಿರುವುದು ನಮ್ಮ ಶಾಲಾ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆಡಳಿತ ಮಂಡಳಿ ಹೇಳಿತ್ತು.
ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಕೆಲಸ ಮಾಡುತ್ತಿರುವಾಗ ಶಾಲಾ ಆಡಳಿತ ಮಂಡಳಿ ಕೆಲ ವಿಚಾರಗಳನ್ನು ಒಪ್ಪಿಕೊಳ್ಳಬೇಕು. ಪ್ರತಿ ದಿನ ಶಾಲಾ ತರಗತಿಗೆ ಬೆಕ್ಕು ಅಡ್ಡಬಂದಿಲ್ಲ. ಇಷ್ಟೇ ಅಲ್ಲ ಬೆಕ್ಕು ಅಡ್ಡಬಂದಿದೆ ಅನ್ನೋ ಕಾರಣಕ್ಕೆ ತರಗತಿ ಸ್ಥಗಿತಗೊಳಿಸಿಲ್ಲ. ಇದು ಅಚಾನಕಕ್ಕಾಗಿ ನಡೆದ ಘಟನೆಯಾಗಿದೆ. ಬೆಕ್ಕು ಅಡ್ಡಬಂದಿದೆ ಅನ್ನೋ ಕಾರಣಕ್ಕೆ ಶಿಕ್ಷಕಿಯನ್ನು ಅಮಾನತು ಮಾಡಿರುವುದು ತಪ್ಪು ಎಂದು ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಶಿಕ್ಷಕಿಯ ಇದುವರೆಗೆ ವೇತನ ಲೆಕ್ಕ ಹಾಕಿ 4.7 ಲಕ್ಷ ರೂಪಾಯಿ ಪರಿಹಾರ ನೀಡಲು ಶಾಲಾ ಆಡಳಿತ ಮಂಡಳಿಗೆ ಕೋರ್ಟ್ ಸೂಚಿಸಿದೆ.
ಮಕ್ಕಳ 'ಬ್ಯಾಕ್ ಟು ಸ್ಕೂಲ್ ಆತಂಕ'ವನ್ನು ಪೋಷಕರು ಕಡಿಮೆ ಮಾಡುವುದು ಹೇಗೆ ?
