ನಮ್ಮ ಮೇಲೆ ದಾಳಿ ನಡೆಸಲು ಮುಂದಾದರೆ, 1971ರ ಯುದ್ಧದ ವೇಳೆ ಭಾರತದಿಂದ ಎದುರಿಸಿದ ರೀತಿಯ ಅವಮಾನ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್‌ ಉಗ್ರ ನಾಯಕನೊಬ್ಬ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾನೆ.

ಕಾಬೂಲ್‌: ನಮ್ಮ ಮೇಲೆ ದಾಳಿ ನಡೆಸಲು ಮುಂದಾದರೆ, 1971ರ ಯುದ್ಧದ ವೇಳೆ ಭಾರತದಿಂದ ಎದುರಿಸಿದ ರೀತಿಯ ಅವಮಾನ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್‌ ಉಗ್ರ ನಾಯಕನೊಬ್ಬ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾನೆ. ತಾಲಿಬಾನಿ ಅಡಗುತಾಣಗಳ ಮೇಲೆ ಸೇನಾ ದಾಳಿ ನಡೆಸುವುದಾಗಿ ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಟ್ವೀಟರ್‌ನಲ್ಲಿ ತಿರುಗೇಟು ನೀಡಿರುವ ತಾಲಿಬಾನ್‌ ವಕ್ತಾರ ಝೈದುಲ್ಲಾ ಮುಜಾಹಿದ್‌, ತಾಲಿಬಾನ್‌ ಮೇಲೆ ದಾಳಿ ಪರಿಸ್ಥಿತಿ ಎದುರಾಗಲು ನಾವು ಬಿಡಲ್ಲ. ಒಂದು ವೇಳೆ ದಾಳಿ ನಡೆಸಿದರೆ 1971ರ ಘಟನೆಯಲ್ಲಿ ಎದುರಿಸಬೇಕಾದ ಅವಮಾನ ಎದುರಿಸಲು ಸಿದ್ಧರಾಗಿ ಎಂದು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ (Bangladesh liberation war) ಸೋತ ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಶರಣಾಗತಿಗೆ ಸಹಿ ಹಾಕುತ್ತಿರುವ ಹಳೆಯ ಫೋಟೋವನ್ನು ಉದಾಹರಣೆಯಾಗಿ ಲಗತ್ತಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟು: ಮಾರುಕಟ್ಟೆ ಬೇಗ ಮುಚ್ಚಲು ಸೂಚನೆ

ಇಸ್ಲಾಮಾಬಾದ್‌: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ, ಇಂಧನ ಉಳಿಸಲು, ತೈಲ ಆಮದು ಹೊರೆ ಕಡಿಮೆ ಮಾಡಲು ಮಾರುಕಟ್ಟೆ ಹಾಗೂ ಮದುವೆ ಸಮಾರಂಭಗಳನ್ನು ಬೇಗನೆ ಮುಗಿಸುವಂತೆ ಪಾಕಿಸ್ತಾನ ಸರ್ಕಾರ ಸೂಚಿಸಿದೆ. ಮಾರುಕಟ್ಟೆಗಳು ರಾತ್ರಿ 8.30ಕ್ಕೆ ಹಾಗೂ ಮದುವೆ ಸಮರಾಂಭಗಳು 10ಕ್ಕೆ ಮುಕ್ತಾಯಗೊಳ್ಳಬೇಕು. ಫೆ.1ರಿಂದ ಪ್ರಕಾಶಮಾನ ಬಲ್ಬಗಳ ಉತ್ಪಾದನೆ ಬಂದ್‌ ಮಾಡಲಾಗುವುದು. ತೈಲ ಆಮದನ್ನು ತಗ್ಗಿಸಲು ವರ್ಷದ ಕೊನೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು. ಕ್ಯಾಬಿನೇಟ್‌ ಸಭೆಗಳನ್ನು ಬೆಳಗಿನ ಹೊತ್ತಿನಲ್ಲಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ವಿದ್ಯಾರ್ಥಿನಿಯರ ಓದಿಗೆ ಕೊಳ್ಳಿ: ಇರಾನಿನಲ್ಲಿ ಹಿಜಾಬ್ ವಾರ್

ಅಫ್ಘಾನಿಸ್ತಾನ ಮಹಿಳೆಯರಿಗೆ ಶಾಲೆ, ಕಾಲೇಜು ಶಿಕ್ಷಣ ನಿಷೇಧಿಸಿದ ತಾಲಿಬಾನ್

Scroll to load tweet…