* ಆ.31ರೊಳಗೆ ಜಾಗ ಖಾಲಿ ಮಾಡಿ ಇಲ್ಲವೇ ಪರಿಣಾಮ ಎದುರಿಸಿ* ಗಡುವು ವಿಸ್ತರಣೆ ಅಸಾಧ್ಯ: ಆಫ್ಘನ್‌ ತಾಲಿಬಾನ್‌ ವಕ್ತಾರ* ಈಗ ಅಮೆರಿಕ, ಬ್ರಿಟನ್‌ಗೇ ತಾಲಿಬಾನ್‌ ಧಮಕಿ!* ಪೂರ್ವ ನಿಗದಿಯಂತೆ ಏರ್‌ಲಿಫ್ಟ್‌ ಕಾರ್ಯಾಚರಣೆ ಮುಗಿಸಲು ಸೂಚನೆ* ಇನ್ನಷ್ಟು ಸಮಯ ಬೇಕೆಂದ ಅಮೆರಿಕ, ಮಿತ್ರರಾಷ್ಟ್ರಗಳು

ಕಾಬೂಲ್‌(ಆ.24): ಈಗಾಗಲೇ ನಿಗದಿಯಾಗಿರುವ ಗಡುವಾದ ಆಗಸ್ಟ್‌ 31ರಂದೇ ಅಮೆರಿಕ ಹಾಗೂ ಬ್ರಿಟನ್‌ ಪಡೆಗಳು ಅಷ್ಘಾನಿಸ್ತಾನವನ್ನು ತೊರೆಯಬೇಕು. ಒಂದು ವೇಳೆ ಈ ಗಡುವು ಮೀರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್‌ ನೇರ ಎಚ್ಚರಿಕೆ ನೀಡಿದೆ.

ಮಂಗಳವಾರ ಬ್ರಿಟನ್‌, ಅಮೆರಿಕ, ಫ್ರಾನ್ಸ್‌, ಕೆನಡಾ, ಜರ್ಮನಿ, ಇಟಲಿ ಹಾಗೂ ಜಪಾನ್‌ ಒಳಗೊಂಡ ‘ಜಿ-7’ ಗುಂಪಿನ ದೇಶಗಳು ಸಭೆ ನಡೆಸಲಿದ್ದು, ಆ.31ರ ನಂತರವೂ ಅಷ್ಘಾನಿಸ್ತಾನದಲ್ಲಿ ಅಮೆರಿಕ ಹಾಗೂ ಮಿತ್ರಪಡೆಗಳು ಇರಬೇಕು, ಪೂರ್ತಿ ಕರೆಸಿಕೊಳ್ಳಬಾರದು ಎಂದು ಒತ್ತಾಯಿಸುವ ಸಾಧ್ಯತೆ ಇದೆ. ಆಫ್ಘನ್‌ನಲ್ಲಿನ ವಿದೇಶಿಗರ ತೆರವು ಕಾರಾರ‍ಯಚರಣೆ ಇನ್ನೂ ಮುಗಿಯದ ಕಾರಣ ಪಡೆಗಳ ಇರುವಿಕೆ ಅಗತ್ಯ ಎಂದು ಹೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲಿಬಾನ್‌ ಸೋಮವಾರ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.

"

ಈ ಬಗ್ಗೆ ಸೋಮವಾರ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ತಾಲಿಬಾನ್‌ ವಕ್ತಾರ ಡಾ|ಸುಹೇಲ್‌ ಶಹೀನ್‌, ‘ಆ.31ರಂದು ತನ್ನ ಪೂರ್ತಿ ಪಡೆಗಳನ್ನು ಆಫ್ಘನ್‌ನಿಂದ ವಾಪಸ್‌ ಕರೆಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ಅದೇ ಅಂತಿಮ ನುಡಿಯಾಗಬೇಕು. ಅಮೆರಿಕ ಹಾಗೂ ಅದರ ಮಿತ್ರದೇಶವಾದ ಬ್ರಿಟನ್‌ ಸೇನೆಯ ವಾಪಸಾತಿಗೆ ಮತ್ತಷ್ಟುಸಮಯಾವಕಾಶ ನೀಡಲಾಗದು. ಈ ಗಡುವಿನೊಳಗೆ ಅಮೆರಿಕ ತನ್ನ ಸೇನೆಯನ್ನು ಪೂರ್ತಿ ಹಿಂಪಡೆಯದಿದ್ದರೆ ಅದರ ಪರಿಣಾಮ ಭೀಕರವಾಗಿರಲಿದೆ. ಅಲ್ಲದೆ ನಮ್ಮನ್ನು ಪ್ರಚೋದಿಸಿದಂತೆ ಆಗಲಿದೆ’ ಎಂದು ಹೇಳಿದ್ದಾನೆ.