Asianet Suvarna News Asianet Suvarna News

ಮಹಿಳೆಯರಿಗೆ ತಾಲಿಬಾನ್‌ನಿಂದ ಹೊಸ ನಿರ್ಬಂಧ, ಮಾತನಾಡುವಂತಿಲ್ಲ, ಮುಖ ತೋರಿಸುವಂತಿಲ್ಲ!

ತಾಲಿಬಾನ್ ಆಡಳಿತಗಾರರು ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ಕಾನೂನನ್ನು ಜಾರಿಗೆ ತಂದಿದ್ದಾರೆ, ಇದು ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವುದನ್ನು ಮತ್ತು ಅವರ ಮುಖ ತೋರಿಸುವುದನ್ನು ನಿಷೇಧಿಸಿದೆ.

 Taliban new laws ban womens voices and faces at public in afghanistan gow
Author
First Published Aug 23, 2024, 12:59 PM IST | Last Updated Aug 23, 2024, 1:06 PM IST

ಅಫ್ಘಾನಿಸ್ತಾನ (ಆ.23): ತಾಲಿಬಾನ್ ಕಾನೂನಿನ ಕಠಿಣ ನಿಯಮಗಳ ಬಗ್ಗೆ ಜನರು ಹಲವಾರು ಬಾರಿ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.  ತಾಲಿಬಾನ್‌ನಲ್ಲಿ ಮಹಿಳೆಯರ ಪರಿಸ್ಥಿತಿಯ ಬಗ್ಗೆ ಹಲವಾರು ಬಾರಿ ಸಾರ್ವಜನಿಕ ಚರ್ಚೆಗಳು ನಡೆದಿವೆ. ಈಗ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಹೊಸ ಕಾನೂನನ್ನು ಜಾರಿಗೆ ತಂದಿದ್ದಾರೆ, ಇದರಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವುದನ್ನು ಮತ್ತು ಅವರ ಮುಖವನ್ನು ತೋರಿಸುವುದನ್ನು  ನಿಷೇಧಿಸಲಾಗಿದೆ. ಸಮಾಜದಲ್ಲಿ ಹರಡಿರುವ ಕೆಡುಕನ್ನು ಎದುರಿಸಲು ಮತ್ತು ಮಹಿಳೆಯರಲ್ಲಿ ನಮ್ರತೆಯನ್ನು ಉತ್ತೇಜಿಸಲು ಈ ಕ್ರಮವು ಸಹಾಯ ಮಾಡುತ್ತದೆ ಎಂದು ತಾಲಿಬಾನ್ ಆಡಳಿತಗಾರರು ನಂಬುತ್ತಾರೆ.

ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಈ ನಿಯಮವನ್ನು ಅನುಮೋದಿಸಿದ್ದು, ಬುಧವಾರ ಪ್ರಕಟಿಸಲಾಗಿದೆ. 2021 ರಲ್ಲಿ ತಾಲಿಬಾನ್ ಅಫ್ಘಾನ್‌ ವಶಪಡಿಸಿಕೊಂಡು ಅಧಿಕಾರ ವಹಿಸಿಕೊಂಡ ನಂತರ ಮಹಿಳೆಯರ ಮೇಲೆ ಹೇರಲಾದ ಕೆಲವು ಕಠಿಣ ಕ್ರಮಗಳಲ್ಲಿ ಇದೂ ಕೂಡ ಒಂದಾಗಿದೆ.

ಗಡ್ಡ ಬೆಳೆಸದ್ದಕ್ಕೆ 280 ಮಂದಿಯನ್ನು ಕೆಲಸದಿಂದ ವಜಾಗೊಳಿಸಿ ಮನೆಗೆ ಕಳುಹಿಸಿದ ತಾಲಿಬಾನ್

ತಾಲಿಬಾನ್ ಸಚಿವಾಲಯವು ಈ ಸಂಬಂಧ 114 ಪುಟಗಳ ದಾಖಲೆಯನ್ನು ಬಿಡುಗಡೆ ಮಾಡಿದ್ದು,  ಇಸ್ಲಾಮಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಇದನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ.

ಮುಖ್ಯ ನಿಯಮಗಳಲ್ಲಿ ಒಂದಾದ ಆರ್ಟಿಕಲ್ 13, ಕಾನೂನುಗಳು "ಪ್ರಲೋಭನೆ (ಆಸೆ)" ಎಂದು ಕರೆಯುವುದನ್ನು ತಡೆಯಲು ಮಹಿಳೆಯರು ತಮ್ಮ ಮುಖಗಳನ್ನು ಒಳಗೊಂಡಂತೆ ತಮ್ಮ ಸಂಪೂರ್ಣ ದೇಹವನ್ನು ಸಾರ್ವಜನಿಕವಾಗಿ ಹೋಗುವಾಗ ಮುಚ್ಚಿಕೊಳ್ಳಬೇಕು.

ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವುದನ್ನು ಅಥವಾ ಹಾಡುವುದನ್ನು ಸಹ ನಿಷೇಧಿಸಲಾಗಿದೆ. ಮಹಿಳೆಯ ಧ್ವನಿಯನ್ನು ಖಾಸಗಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇತರರಿಗೆ ಕೇಳಬಾರದು ಎಂದು ಕಾನೂನು ಹೇಳುತ್ತದೆ.

ಪವಿತ್ರಾ ಸಹವಾಸ ಬಿಟ್ಟರೆ ಮಾತ್ರ ಸಪೋರ್ಟ್ ಎಂದ ಫ್ರೆಂಡ್ಸ್, ಸಂಧಾನಕ್ಕೆ ದರ್ಶನ್ ಒಪ್ಪಿದ್ರಾ?

ಇನ್ನು ಮಹಿಳೆಯರು ತಮ್ಮ ಸಂಬಂಧಿಕರಲ್ಲದ ಪುರುಷರನ್ನು ನೋಡುವುದನ್ನು ಸಹ ನಿಷೇಧಿಸುತ್ತದೆ. ಕಾನೂನಿನ ಇತರ ನಿಯಮಗಳು ಜೀವಂತ ಜೀವಿಗಳ ಚಿತ್ರಗಳ ಪ್ರಕಟಣೆಯನ್ನು ಕೂಡ ನಿಷೇಧಿಸುತ್ತವೆ, ಇದು ಅಫ್ಘಾನಿಸ್ತಾನದ ಹೋರಾಟಕ್ಕೆ ಹಾನಿಯಾಗಬಹುದು ಎಂದು ಕೂಡ ಹೇಳಿದೆ.

ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಜೊತೆಗೆ ಸಂಗೀತವನ್ನು ಕೂಡ  ಬ್ಯಾನ್‌ ಮಾಡಲಾಗಿದೆ.   ಪುರುಷರು ಮತ್ತು ಮಹಿಳೆಯರು ಸಂಬಂಧವಿಲ್ಲದಿದ್ದರೆ ಸಾರ್ವಜನಿಕವಾಗಿ   ಸಾರ್ವಜನಿಕವಾಗಿ ಬೆರೆಯುವುದನ್ನು ಕೂಡ ನಿಷೇಧಿಸಲಾಗಿದೆ. ನಿಯಮಗಳ ಪ್ರಕಾರ ಪ್ರಯಾಣಿಕರು ಮತ್ತು ಚಾಲಕರು ನಿಗದಿತ ಸಮಯದಲ್ಲಿ ಪ್ರಾರ್ಥನೆಗಾಗಿ ನಿಲ್ಲಬೇಕು.  ಈ ನಿಯಮಗಳು ಇಸ್ಲಾಮಿಕ್ ಕಾನೂನನ್ನು  ಜಾರಿಗೊಳಿಸಲು ತಾಲಿಬಾನ್‌ನ ಪ್ರಯತ್ನಗಳ ಭಾಗವಾಗಿದೆ ಎಂದಿದೆ.

ಇದಕ್ಕೆ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ, ಈ ನಿರ್ಬಂಧಗಳು ಅಫ್ಘಾನಿಸ್ತಾನದ ಜನರಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸಲಿದೆ ಎಂದು ಹೇಳಿದೆ.

ಇತ್ತೀಚೆಗಿನ UN ವರದಿಯೊಂದು ತಾಲಿಬಾನ್ ಸಚಿವಾಲಯವನ್ನು ಎಚ್ಚರಿಸಿದ್ದು,  ಸದ್ಗುಣ ಪ್ರಚಾರ ಮತ್ತು ಉಪಟಳ ತಡೆಗಟ್ಟುವಿಕೆಯಿಂದ ತಾಲಿಬಾನ್‌ ದೇಶಾದ್ಯಂತ ಬೆದರಿಕೆ ಮತ್ತು ಭಯವನ್ನು ಸೃಷ್ಟಿಸುತ್ತಿದೆ ಎಂದು ಎಚ್ಚರಿಸಿದೆ. ಸಚಿವಾಲಯದ ಬೆಳೆಯುತ್ತಿರುವ ಶಕ್ತಿಯು ಅಫಘಾನ್ ಸಮಾಜಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಯುಎನ್ ಎಚ್ಚರಿಸಿದೆ.

 

Latest Videos
Follow Us:
Download App:
  • android
  • ios