Asianet Suvarna News Asianet Suvarna News

ಗಡ್ಡ ಬೆಳೆಸದ್ದಕ್ಕೆ 280 ಮಂದಿಯನ್ನು ಕೆಲಸದಿಂದ ವಜಾಗೊಳಿಸಿ ಮನೆಗೆ ಕಳುಹಿಸಿದ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ನೈತಿಕ ಸಚಿವಾಲಯವು 280 ಜನರನ್ನು ಗಡ್ಡ ಬೆಳೆಸದ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಿದೆ. ಕಳೆದ ವರ್ಷ 13,000 ಕ್ಕೂ ಹೆಚ್ಚು ಜನರನ್ನು ಅನೈತಿಕ ಕೃತ್ಯಗಳಿಗಾಗಿ ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Taliban moral policing fires 280 mens from government job for not growing beards
Author
First Published Aug 20, 2024, 10:02 PM IST | Last Updated Aug 20, 2024, 10:08 PM IST

ಕಾಬೂಲ್‌: ಮಾನವ ಹಕ್ಕು,  ಪ್ರಜಾಪ್ರಭುತ್ವ ಮರೀಚಿಕೆಯಾಗಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ನೈತಿಕ ಸಚಿವಾಲಯವು 280 ಜನರನ್ನು ಗಡ್ಡ ಬೆಳೆಸದ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಿದೆ.  ಹಾಗೆಯೇ ಕಳೆದ ವರ್ಷ 13,000 ಕ್ಕೂ ಹೆಚ್ಚು ಜನರನ್ನು ಅನೈತಿಕ ಕೃತ್ಯಗಳಿಗಾಗಿ ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಲಿಬಾನ್ ನೈತಿಕ ಸಚಿವಾಲಯದ ವಿಚಿತ್ರ ಆದೇಶ: 


ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದಾಗಿ ಜನರ ಜೀವನವು ಶೋಚನೀಯವಾಗಿದೆ. ಮಹಿಳೆಯರ ಮೇಲೆ ಎಲ್ಲಾ ರೀತಿಯ ವಿಲಕ್ಷಣ ನಿರ್ಬಂಧಗಳನ್ನು ಹೇರುವ ಮತ್ತು ಅವರನ್ನು ಮನೆಯೊಳಗೆ ಬಂಧಿಸುವ ಸರ್ಕಾರವು ಈಗ ಪುರುಷರ ಮೇಲೂ ದೌರ್ಜನ್ಯವನ್ನು ಹೆಚ್ಚಿಸಿದೆ. ತಾಲಿಬಾನ್ ಸರ್ಕಾರದ ನೈತಿಕ ಸಚಿವಾಲಯವು 280 ಜನರನ್ನು ಕೇವಲ ಗಡ್ಡ ಬೆಳೆಸಲು ವಿಫಲರಾದ ಕಾರಣ ಕೆಲಸದಿಂದ ವಜಾಗೊಳಿಸಿದೆ. ತಾಲಿಬಾನಿಗರ ಇಸ್ಲಾಮಿಕ್ ಕಾನೂನಿನಂತೆ ಅವರನ್ನು ವಜಾಗೊಳಿಸಲಾಗಿದೆ. ಅನೈತಿಕ ಕೃತ್ಯಗಳಿಗಾಗಿ ಕಳೆದ ವರ್ಷ 13,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಇದೇ ವೇಳೆ ಸಚಿವಾಲಯ ತಿಳಿಸಿದೆ.

21 ಸಾವಿರಕ್ಕೂ ಹೆಚ್ಚು ಸಂಗೀತ ವ್ಯವಸ್ಥೆ ಉಪಕರಣಗಳ ನಾಶ::

ನೈತಿಕ ಸಚಿವಾಲಯದ ಯೋಜನೆ ಮತ್ತು ನಿಯಮಗಳ ನಿರ್ದೇಶಕ ಮೊಹಿಬುಲ್ಲಾ ಮೊಖ್ಲಿಸ್ ಅವರು, ಗಡ್ಡ ಬೆಳೆಸದೇ ಇದಿದ್ದಕ್ಕಾಗಿ ಭದ್ರತಾ ಪಡೆಗಳಲ್ಲಿ ಕರ್ತವ್ಯದಲ್ಲಿದ್ದ 281 ಸೈನಿಕರನ್ನು ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಅನೈತಿಕ ಚಟುವಟಿಕೆಗಳಿಗಾಗಿ 13,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆದಾಗ್ಯೂ, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಯಿತು.  ಸಂಗೀತ ಕಲೆ ಮುಂತಾದ ಸಂಸ್ಕೃತಿಕ ಕಾರ್ಯಕ್ರಮಗಳಿಗೂ ನಿಷೇಧ ಹೇರಿರುವಂತೆ ಕಾಣುತ್ತಿದ್ದು, ಕಳೆದ ವರ್ಷ ಅಧಿಕಾರಿಗಳು 21,328 ಸಂಗೀತ ವಾದ್ಯಗಳನ್ನು ನಾಶಪಡಿಸಿದ್ದಾರೆ ಮತ್ತು ಸಾವಿರಾರು ಕಂಪ್ಯೂಟರ್ ಆಪರೇಟರ್‌ಗಳನ್ನು ಮಾರುಕಟ್ಟೆಗಳಲ್ಲಿ ಅನೈತಿಕ ಚಲನಚಿತ್ರಗಳನ್ನು ಮಾರಾಟ ಮಾಡುವುದನ್ನು ತಡೆದಿದ್ದಾರೆ ಎಂದು ಮೊಖ್ಲಿಸ್ ಹೇಳಿದ್ದಾರೆ. ಮಹಿಳೆಯರ ಮಾರಾಟದ 200 ಕ್ಕೂ ಹೆಚ್ಚು ಪ್ರಕರಣಗಳು ಮತ್ತು ಮಹಿಳೆಯರ ವಿರುದ್ಧದ ಹಿಂಸಾಚಾರದ 2,600 ಕ್ಕೂ ಹೆಚ್ಚು ಪ್ರಕರಣಗಳನ್ನು ತಡೆದಿದ್ದೇವೆ ಎಂದು ಮೊಖ್ಲಿಸ್ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಿ ತಾಯಿ-ಮಗಳಿಗೆ ಹೈದರಾಬಾದ್‌ನಲ್ಲಿ ತಾಲಿಬಾನ್‌ ಮಾದರಿಯ ಶಿಕ್ಷೆ; ನರಕ ತೋರಿಸಿದ ಕುಟುಂಬಸ್ಥರು

ಮಹಿಳೆಯರ ಮೇಲೆ ಹಲವು ಕಠಿಣ ನಿರ್ಬಂಧಗಳು

2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಕಾಬೂಲ್‌ನಲ್ಲಿರುವ ಮಹಿಳಾ ಸಚಿವಾಲಯದ ಕ್ಯಾಂಪಸ್ ಅನ್ನು ಹೊಸ ಸರ್ಕಾರವು ನೈತಿಕ ಸಚಿವಾಲಯವನ್ನಾಗಿ ಪರಿವರ್ತಿಸಿತು. ನೈತಿಕ ಸಚಿವಾಲಯದ ಬಗ್ಗೆ ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಿಶ್ವಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿ ಟೀಕೆ ವ್ಯಕ್ತಪಡಿಸಿದ್ದವು. ಆದರೆ ಇದಕ್ಕೆ ಪ್ರತಿಯಾಗಿ, ನೈತಿಕ ಸಚಿವಾಲಯವು ವಿಶ್ವಸಂಸ್ಥೆಯ ಕಾರ್ಯಾಚರಣೆಯಲ್ಲಿರುವ ಮಹಿಳಾ ಅಧಿಕಾರಿಗಳು ಇಸ್ಲಾಮಿಕ್ ಉಡುಪುಗಳನ್ನು ಧರಿಸಬೇಕೆಂದು ಆದೇಶ ಹೊರಡಿಸಿತು. ಹಾಗೆ ಮಾಡದಿದ್ದಕ್ಕಾಗಿ ಮಹಿಳೆಯರನ್ನು ಹಲವು ಬಾರಿ ತಡೆದಿದ್ದಲ್ಲೇ ಅವರನ್ನು ಬಂಧಿಸಿದ ಪ್ರಕರಣವೂ ನಡೆದಿತ್ತು.  ಆದರೆ ಈ ಬಂಧನ ವಿಶ್ವಮಟ್ಟದಲ್ಲಿ ಸುದ್ದಿಯಾದಾಗ, ತಾಲಿಬಾನ್ ಆ ಬಂಧನವನ್ನು ಆಧಾರರಹಿತ ಎಂದಿತ್ತು ಆದರೆ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿತು.

ಮಹಿಳೆಯರ ಉಡುಗೆ ಬಗ್ಗೆ ನಿಗಾ ಇಟ್ಟಿರುವ ತಾಲಿಬಾನ್, ಪುರುಷರು ಇಲ್ಲದೆ ಮಹಿಳೆಯರು ದೀರ್ಘ ಪ್ರಯಾಣ ಮಾಡುವುದನ್ನು ನಿಷೇಧಿಸಿದೆ. ಸರ್ವೋಚ್ಚ ನಾಯಕರ ಮಾರ್ಗದರ್ಶನದ ಆಧಾರದ ಮೇಲೆ ಮಹಿಳೆಯರ ಹಿಜಾಬ್ (ಇಸ್ಲಾಮಿಕ್ ಉಡುಗೆ) ಅನುಸರಣೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮೊಖ್ಲಿಸ್ ಹೇಳಿದ್ದಾರೆ. ಮಹಿಳೆಯರು ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು ಅಥವಾ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಬುರ್ಖಾವನ್ನು ಧರಿಸಬೇಕು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: ಬಾಂಗ್ಲಾದಲ್ಲಿ ತಾಲಿಬಾನ್ ರೀತಿ ಹಿಂಸೆ: ಅಲ್ಲೇ ಇದ್ದಿದ್ರೆ ನಮ್ಮ ಕಥೆ ಹರೋಹರ

 

Latest Videos
Follow Us:
Download App:
  • android
  • ios