Asianet Suvarna News Asianet Suvarna News

ಕಿಡ್ನಾ​ಪ​ರ್‌ ಕೊಂದು ಕ್ರೇನ್‌​ಗೆ ಶವ ನೇತು ಹಾಕಿದ ತಾಲಿಬಾನ್‌!

* ಕಾನೂ​ನು​ಬಾ​ಹಿರ ಕೃತ್ಯ ಎಸ​ಗಿದರೆ ಇದೇ ಗತಿ: ಉಗ್ರ​ರ ಎಚ್ಚ​ರಿ​ಕೆ

* ಹೆರಾತ್‌ ಪ್ರಾಂತ್ಯ​ದಲ್ಲಿ ಪಾಶವೀ ಕೃತ್ಯ

* 4 ಶವ ತಂದು, ಅದ​ರಲ್ಲಿ ಒಂದನ್ನು ಕ್ರೇನ್‌ಗೆ ನೇತು​ಹಾ​ಕಿ​ದ​ರು

Taliban hang dead body from crane in main square of Afghanistan Herat city Report pod
Author
Bangalore, First Published Sep 26, 2021, 7:29 AM IST

ಕಾಬೂಲ್‌(ಸೆ.26): 1990ರ ದಶಕದಲ್ಲಿ ಅಷ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್‌(Taliban) ನಡೆಸುತ್ತಿದ್ದ ಹೇಯ ಕೃತ್ಯಗಳನ್ನು ಈಗಲೂ ಮುಂದುವರೆಸುತ್ತಿದ್ದಾರೆ. ಪಶ್ಚಿಮ ಅಷ್ಘಾನಿಸ್ತಾನದ ಹೆರಾತ್‌(Herat) ನಗರದ ಮುಖ್ಯ ಚೌಕದಲ್ಲಿ ಶನಿವಾರ ಅಪ​ಹ​ರ​ಣ​ಕಾರ ಎನ್ನ​ಲಾದ ವ್ಯಕ್ತಿಯೊಬ್ಬನನ್ನು ಕೊಂದು ಶವವನ್ನು ಕ್ರೇನ್‌ನ ಸಹಾಯದಿಂದ ತೂಗುಹಾಕಿದ್ದಾರೆ.

‘ನಾವು ಗಲ್ಲು ಹಾಗೂ ಕೈ-ಕಾಲು ಕತ್ತರಿ​ಸುವ ಶಿಕ್ಷೆ ಆರಂಭಿ​ಸು​ತ್ತೇ​ವೆ. ಇಂಥ ಕಠಿಣ ಕ್ರಮ​ಗ​ಳನ್ನು ಕೈಗೊ​ಳ್ಳದೇ ಇದ್ದರೆ ತಪ್ಪು ಮಾಡು​ವು​ದ​ರಿಂದ ಜನ​ರನ್ನು ತಡೆ​ಯು​ವುದು ಕಷ್ಟ’ ಎಂದು 2 ದಿನದ ಹಿಂದೆ ತಾಲಿ​ಬಾನ್‌ ಸಂಸ್ಥಾ​ಪ​ಕ​ರಲ್ಲಿ ಒಬ್ಬ​ನಾದ ಮುಲ್ಲಾ ನೂರು​ದ್ದೀನ್‌ ತುರಾಬಿ ಇತ್ತೀ​ಚೆಗೆ ಹೇಳಿದ್ದ. ಆದರೆ ಸಾರ್ವ​ಜ​ನಿ​ಕ​ವಾಗಿ ತಾವು ಹೀಗೆ ಮಾಡು​ವು​ದಿಲ್ಲ ಎಂದು ಆತ ಸ್ಪಷ್ಟ​ಪ​ಡಿ​ಸಿ​ದ್ದ. ಅದರ ಬೆನ್ನಲ್ಲೇ ಈ ಭಯ ಹುಟ್ಟಿ​ಸುವ ಘಟನೆ ನಡೆ​ದಿ​ದೆ.

4 ಶವ​ಗಳಲ್ಲಿ 1 ಪ್ರದ​ರ್ಶ​ನ:

‘ತಾಲಿಬಾನ್‌(Taliban) ಉಗ್ರಗಾಮಿಗಳು ಚೌಕಕ್ಕೆ 4 ಶವಗಳನ್ನು ತಂದಿದ್ದರು. ಅದರಲ್ಲಿ ಒಂದನ್ನು ಕ್ರೇನ್‌ ಸಹಾಯದಿಂದ ತೂಗು ಹಾಕಿ ಉಳಿದ ಶವಗಳನ್ನು ಬೇರೆ ಬೇರೆ ಚೌಕಗಳಲ್ಲಿ ಪ್ರದರ್ಶನಕ್ಕಾಗಿ ಕೊಂಡೊಯ್ದರು’ ಎಂದು ಘಟನೆಯ ಪ್ರತ್ಯಕ್ಷದರ್ಶಿಯಾದ ವಜೀರ್‌ ಅಹ್ಮದ್‌ ಹೇಳಿದ್ದಾರೆ.

ಹತ್ಯೆಯಾಗಿರುವ ನಾಲ್ಕು ಜನರು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಅವರಿಗೆ ಮರಣದಂಡನೆ ನೀಡಿ ಉಳಿದವರಿಗೆ ಎಚ್ಚರಿಕೆ ನೀಡಲು ಈ ರೀತಿ ಅವರನ್ನು ನೇತುಹಾಕುತ್ತಿರುವುದಾಗಿ ತಾಲಿಬಾನ್‌ ಹೇಳಿದ್ದಾಗಿ ವಜೀರ್‌ ತಿಳಿಸಿದ್ದಾರೆ. ನೇತಾ​ಡು​ತ್ತಿ​ರುವ ಶವದ ಮೇಲೆ ಅಪ​ರಾ​ಧಿ​ಗ​ಳ ಮೇಲೆ ಅಂಟಿ​ಸುವ ಅಪ​ರಾಧ ವಿವ​ರದ ಕಾಗ​ದ​ವನ್ನು ಅಂಟಿ​ಸ​ಲಾ​ಗಿ​ದೆ.

ಕ್ರೇನ್‌ ಮೇಲೆ ಶವ ನೇತಾ​ಡು​ತ್ತಿ​ರು​ವು​ದನ್ನು ನೂರಾರು ಜನರು ಭಯ​ದಿಂದ ನೋಡು​ತ್ತಿ​ರುವ ದೃಶ್ಯ​ಗಳು ಹಾಗೂ ಚಿತ್ರ​ಗಳು ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ವೈರಲ್‌ ಆಗಿ​ವೆ. ಆದರೆ, ಈ ಬಗ್ಗೆ ತಾಲಿ​ಬಾನ್‌ ವಕ್ತಾ​ರರು ಯಾವುದೇ ಅಧಿ​ಕೃತ ಹೇಳಿಕೆ ನೀಡಿ​ಲ್ಲ.

ಆಗಸ್ಟ್‌ 15ರಂದು ಅಷ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 1990ರ ದಶಕದ ಹೇಯ ಕೃತ್ಯಗಳನ್ನು ನಡೆಸುವುದಿಲ್ಲ ತಾಲಿಬಾನ್‌ ಬದಲಾಗಿದೆ ಎಂದು ತಾಲಿಬಾನ್‌ ನಾಯಕರು ಹೇಳಿದ್ದರು. ಆದರೆ, ಅಧಿ​ಕಾ​ರಕ್ಕೆ ಬಂದ ನಂತರ ತಾಲಿ​ಬಾನ್‌ ವರಸೆ ನಿಧಾ​ನ​ವಾಗಿ ಬದ​ಲಾ​ಗು​ತ್ತಿದ್ದು, ಮಹಿ​ಳೆ​ಯರ ಮೇಲೆ ದೌರ್ಜನ್ಯ ನಡೆ​ಸು​ತ್ತಿ​ದ್ದಾರೆ ಹಾಗೂ ತಮ್ಮ ಮಾತು ಕೇಳದ ಜನರಿಗೆ ನಾನಾ ಥರದ ಚಿತ್ರ​ಹಿಂಸೆ ನೀಡು​ತ್ತಿ​ದ್ದಾರೆ ಎಂದು ಸತ​ತ​ವಾಗಿ ವರದಿ ಆಗು​ತ್ತಲೇ ಇವೆ.

Follow Us:
Download App:
  • android
  • ios