Asianet Suvarna News Asianet Suvarna News

ತಾಲಿಬಾನ್‌ ಬಾಸ್‌ ಅಖುಂಜಾದ 2020ರಲ್ಲೇ ಪಾಕ್‌ ದಾಳಿಗೆ ಬಲಿ!

* ಉಗ್ರ ನಾಯಕನ ಮುಖದರ್ಶನವಾಗದ್ದರ ರಹಸ್ಯ ಬಯಲು

* ತಾಲಿಬಾನ್‌ ಬಾಸ್‌ ಅಖುಂಜಾದ 2020ರಲ್ಲೇ ಪಾಕ್‌ ದಾಳಿಗೆ ಬಲಿ

Taliban chief dead Baradar hostage Reports suggest big leadership crisis in Afghanistan pod
Author
Bangalore, First Published Oct 16, 2021, 8:56 AM IST
  • Facebook
  • Twitter
  • Whatsapp

ಕಾಬೂಲ್‌(ಅ.16): ಅಫ್ಘಾನಿಸ್ತಾನವನ್ನು(ಆfಗಹಾನಿಸತಾನ) ವಶಕ್ಕೆ ಪಡೆದುಕೊಂಡು ರಾಕ್ಷಸೀ ಆಡಳಿತ ಶುರು ಮಾಡಿರುವ ತಾಲಿಬಾನಿಗಳಿಂದ(Taliban) ಇದೀಗ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಹೈಬತುಲ್ಲಾಹ್‌ ಅಖುಂಜಾದ(Haibatullah Akhunzada) ಕಳೆದ ವರ್ಷ ಪಾಕ್‌ ಸೇನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಾಲಿಬಾನ್‌ ಸಂಘಟನೆಯ ಹಿರಿಯ ನಾಯಕ ಅಮೀರ್‌ ಅಲ್‌-ಮು’ಮುನಿ ಶೇಖ್‌ ಬಹಿರಂಗಪಡಿಸಿದ್ದಾನೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಹೀಗಾಗಿ ತಾಲಿಬಾನ್‌ನ ಹೊಸ ಸರ್ಕಾರದಲ್ಲಿ ಸರ್ವೋಚ್ಛ ನಾಯಕನಾಗಿ ಆಯ್ಕೆಯಾದ ಹೊರತಾಗಿಯೂ, ಇದುವರೆಗೂ ಅಖುಂಜಾದ(Haibatullah Akhunzada) ಎಲ್ಲಿಯೂ ಕಾಣಿಸಿಕೊಳ್ಳದ ರಹಸ್ಯ ಬಯಲಾಗಿದೆ.

2016ರಲ್ಲಿ ತಾಲಿಬಾನ್‌ ನೇತಾರ ಮುಲ್ಲಾ ಅಖ್ತರ್‌ ಮನ್ಸೂರ್‌ ಡ್ರೋನ್‌ ದಾಳಿಯಲ್ಲಿ(Drone Attack) ಹತನಾದ ಬಳಿ, ಇಡೀ ಸಂಘಟನೆಯನ್ನು ಮುನ್ನಡೆಸಿದ್ದು ಅಖುಂಜಾದ. ಸಂಘಟನೆಯ ರಾಜಕೀಯ, ಮಿಲಿಟರಿ ಮತ್ತು ಧಾರ್ಮಿಕ ವಿಷಯಗಳಲ್ಲೂ ಈತನದ್ದೇ ಅಂತಿಮ ಮಾತಾಗಿತ್ತು.

ಆದರೆ ಕಳೆದ ವರ್ಷ ಪಾಕಿಸ್ತಾನ ಸೇನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಈತ ಸಾವನ್ನಪ್ಪಿದ್ಧಾನೆ ಎಂಬ ಸ್ಫೋಟಕ ವಿಷಯದನ್ನು ಇದೀಗ ಸ್ವತಃ ತಾಲಿಬಾನ್‌ನ ಹಿರಿಯ ನಾಯಕನೇ ಬಹಿರಂಗಪಡಿಸುವ ಮೂಲಕ ಆತನ ಬಗ್ಗೆ ಎದ್ದಿದ್ದ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾನೆ.

ತಾಲಿಬಾನಿಗಳ ಬೆದರಿಕೆ ಹಿನ್ನೆಲೆ ಆಫ್ಘನ್‌ಗೆ ಪಾಕ್‌ ವಿಮಾನ ಸಂಚಾರ ಬಂದ್‌

ತಾಲಿಬಾನ್‌ ಬೆದರಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ(ಪಿಐಎ) ಸಂಸ್ಥೆಯು ಅಫ್ಘಾನಿಸ್ತಾನಕ್ಕೆ ಗುರುವಾರದಿಂದ ವಿಮಾನ ಸಂಚಾರ ಸ್ಥಗಿತಗೊಳಿಸಿದೆ. ಕಾಬೂಲ್‌-ಇಸ್ಲಾಮಾಬಾದ್‌ ನಡುವಿನ ವಿಮಾ®ದ ಟಿಕೆಟ್‌ ದರ ಕಡಿಮೆ ಮಾಡದಿದ್ದರೆ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ತಾಲಿಬಾನ್‌ ಬೆದರಿಕೆ ಹಾಕಿದ ಗಂಟೆಗಳ ಬಳಿಕ ಈ ಆದೇಶ ಹೊರಬಿದ್ದಿದೆ.

ಇದುವರೆಗೆ, ಪಿಐಎ ಜೊತೆ ಆಫ್ಘಾನ್‌ನ ಕಾಮ್‌ ಏರ್‌ ಹೆಚ್ಚಿನ ದರದೊಂದಿಗೆ ಕಾಬೂಲ್‌ಗೆ ವಿಮಾನ ಸಂಚಾರ ನಡೆಸುತ್ತಿತ್ತು. ಪಿಐಎ ಆಫ್ಘನ್‌ಗೆ ಸಂಚರಿಸುತ್ತಿದ್ದ ಏಕೈಕ ವಿದೇಶಿ ವಿಮಾನವಾಗಿತ್ತು. ಆದರೆ ಇಸ್ಲಾಮಾಬಾದ್‌ಗೆ ತೆರಳಲು 10 ಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡಲಾಗುತ್ತಿತ್ತು.

Follow Us:
Download App:
  • android
  • ios