ಬಾಂಗ್ಲಾದಂತೆ ಸಿರಿಯಾದಲ್ಲೂ ದಂಗೆ: ರಾಜೀನಾಮೆ ನೀಡಿ ಪರಾರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್‌

ಬಾಂಗ್ಲಾದಂತೆ ಸಿರಿಯಾದಲ್ಲೂ ಬಂಡುಕೋರರು ವಾರದ ಕಾಲ ಶಾಸ್ತ್ರಾಸ್ತ್ರ ದಂಗೆ ನಡೆಸಿದ್ದು ಅಸ್ಸಾದ್ ಅವರ ಸುಧೀರ್ಘ ಆಡಳಿತವನ್ನು  ಉರುಳಿಸಿದ ನಂತರ ಅಸಾದ್‌ ರಾಜೀನಾಮೆ ನೀಡಿ ದೇಶ ತೊರೆದಿರುವುದಾಗಿ ವರದಿಯಾಗಿದೆ.

Syria also in turmoil like Bangladesh President Bashar Al Assad resigns and flees

ಸಿರಿಯಾ ಅಧ್ಯಕ್ಷ  ಸ್ಥಾನಕ್ಕೆ ಅಲ್ ಅಸಾದ್‌ ರಾಜೀನಾಮೆ ನೀಡಿ ದೇಶ ತೊರೆದಿರುವುದಾಗಿ ವರದಿಯಾಗಿದೆ.  ಬಾಂಗ್ಲಾದಂತೆ ಸಿರಿಯಾದಲ್ಲೂ ಬಂಡುಕೋರರು ವಾರದ ಕಾಲ ಶಾಸ್ತ್ರಾಸ್ತ್ರ ದಂಗೆ ನಡೆಸಿದ್ದು ಅಸ್ಸಾದ್ ಅವರ ಸುಧೀರ್ಘ ಆಡಳಿತವನ್ನು  ಉರುಳಿಸಿದ್ದಾರೆ. ಈ ಬೆಳವಣಿಗೆಯ ನಂತರ ಅಸಾದ್‌ ರಾಜೀನಾಮೆ ನೀಡಿ ದೇಶ ತೊರೆದಿರುವುದಾಗಿ ವರದಿಯಾಗಿದೆ.

ಬಂಡುಕೋರರ ಒಂದು ವಾರದ ಶಸ್ತ್ರಾಸ್ತ್ರ ದಂಗೆಯಲ್ಲಿ  ಅಸ್ಸಾದ್ ಅವರ ಸುದೀರ್ಘ ಆಡಳಿತವನ್ನು ಉರುಳಿಸಿದ ನಂತರನಡೆದ ಇಂದಿನ ಬೆಳವಣಿಗೆಯನ್ನು ರಷ್ಯಾ ಖಚಿತಪಡಿಸಿದೆ. ಒಂದು ವಾರದ ಕಾಲ ನಡೆದ ಗಲಾಟೆಯಲ್ಲಿ ಭಾಗಿಯಾದ ಗುಂಪುಗಳ ಜೊತೆ ಮಾತುಕತೆ ನಡೆಸಿದ ಬಳಿಕ ಅಲ್ ಅಸಾದ್‌ ಸಿರಿಯಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶಾಂತಿಯುತವಾಗಿ ಬಂಡುಕೋರರಿಗೆ ಅಧಿಕಾರವನ್ನು ಹಸ್ತಾಂತರಿಸಲು ಒಪ್ಪಿದರು ಎಂದು ತಿಳಿದು ಬಂದಿದೆ.

ಬಿ ಅಸ್ಸಾದ್ ಮತ್ತು ಎಸ್‌ಎಆರ್‌(SAR)ನಲ್ಲಿನ ಸಶಸ್ತ್ರ ಸಂಘರ್ಷದಲ್ಲಿ ಭಾಗವಹಿಸುವವರ ನಡುವಿನ ಮಾತುಕತೆಗಳ ಪರಿಣಾಮವಾಗಿ, ಅವರು ಅಧ್ಯಕ್ಷ ಸ್ಥಾನವನ್ನು ತೊರೆಯಲು ನಿರ್ಧರಿಸಿ ದೇಶವನ್ನು ತೊರೆದರು, ಶಾಂತಿಯುತವಾಗಿ ಅಧಿಕಾರವನ್ನು ವರ್ಗಾಯಿಸಲು ಸೂಚನೆಗಳನ್ನು ನೀಡಿದರು ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಈ ಮಾತುಕತೆಯಲ್ಲಿ ತಾನು ಭಾಗವಹಿಸಲಿಲ್ಲ ಎಂದು ರಷ್ಯಾ ಹೇಳಿಕೊಂಡಿದೆ. ಹಿಂಸಾಚಾರ ತ್ಯಜಿಸಿ  ರಾಜಕೀಯ ವಿಧಾನಗಳ ಮೂಲಕ ಎಲ್ಲಾ ಆಡಳಿತ ಸಮಸ್ಯೆಗಳನ್ನು ಪರಿಹರಿಸಲು ವಿರೋಧಿ ಹೋರಾಟಗಾರರಿಗೆ ರಷ್ಯಾ ಮತ್ತಷ್ಟು ಮನವಿ ಮಾಡಿದೆ. ರಷ್ಯಾದ ಒಕ್ಕೂಟವು ಸಿರಿಯಾದ ಹಲವು ವಿರೋಧಿ ಗುಂಪುಗಳೊಂದಿಗೆ ಸಂಪರ್ಕದಲ್ಲಿದ್ದು, ಸಿರಿಯನ್ ಸಮಾಜದ ಎಲ್ಲಾ ಜನಾಂಗೀಯ ತಪ್ಪೊಪ್ಪಿಗೆಯ ಶಕ್ತಿಗಳ ಅಭಿಪ್ರಾಯಗಳನ್ನು ಗೌರವಿಸಲು ನಾವು ಕರೆ ನೀಡುತ್ತೇವೆ ಮತ್ತು ಅಂತರಿಕ ರಾಜಕೀಯ ಪ್ರಕ್ರಿಯೆಯನ್ನು ಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ.

ರಾಜಧಾನಿ ಡಮಾಸ್ಕಸ್‌ಗೆ ದಾಳಿ ಮಾಡಿದ ನಂತರ ಮತ್ತು ಅಧ್ಯಕ್ಷ ಅಸ್ಸಾದ್ ರಾಜಧಾನಿಯಿಂದ ಅಜ್ಞಾತ ತಾಣಕ್ಕೆ ಪಲಾಯನ ಮಾಡಿದ್ದಾರೆ ಎಂದು ತಿಳಿದ ನಂತರ ಸಿರಿಯನ್ ವಿರೋಧಿ ಬಣದ ಹೋರಾಟಗಾರರು ಸಿರಿಯಾ ದೇಶವನ್ನು ವಿಮೋಚನೆಗೊಳಿಸಲಾಗಿದೆ ಎಂದು ಘೋಷಿಸಿದ್ದರು. 

ಅಜ್ಞಾತಸ್ಥಳಕ್ಕೆ ಅಸಾದ್

ಇತ್ತ ಅಲ್ ಅಸಾದ್‌ ಅಜ್ಞಾತ ಸ್ಥಳಕ್ಕೆ ಓಡಿ ಹೋಗಿದ್ದಾರೆ ಎಂದು ವರದಿ ಆಗಿದೆ. ತಾನು ಎಲ್ಲಿಗೆ ಹೋಗುತ್ತೇನೆ ಎಂಬುದನ್ನು ತಿಳಿಸದೇ ಶನಿವಾರ ರಾತ್ರಿ 10:00 ಗಂಟೆಗೆ (1900 GMT) ಡಮಾಸ್ಕಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಖಾಸಗಿ ವಿಮಾನದಲ್ಲಿ ಅಸ್ಸಾದ್ ಹೊರಟು ಹೋದರು ಎಂದು ಸಿರಿಯನ್ ಮಾನವ ಹಕ್ಕುಗಳ ಯುದ್ಧ ವೀಕ್ಷಕ ಸಂಸ್ಥೆ(The Syrian Observatory for Human Rights war monitor) ಹೇಳಿದೆ. ಇದಾದ ನಂತರ, ಸೇನೆ ಮತ್ತು ಭದ್ರತಾ ಪಡೆಗಳನ್ನು ವಿಮಾನ ನಿಲ್ದಾಣದಿಂದ ಹೊರ ತೆಗೆಯಲಾಗಿದ್ದು,, ವಾಣಿಜ್ಯ ವಿಮಾನಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. 

ಪರಾರಿಯಾದ ಅಲ್ ಅಸಾದ್ ಸಾವಿನ ವದಂತಿ

ಹೋಮ್ಸ್ ನಗರದ ಬಳಿ ರಾಡಾರ್‌ನಿಂದ ಕಣ್ಮರೆಯಾಗುವ ಮೊದಲು ಅಸ್ಸಾದ್ ಹಠಾತ್ತನೆ ಮಾರ್ಗ ಬದಲಿಸಿದ ನಂತರ ಮತ್ತು ಹಲವಾರು ನಿಮಿಷಗಳ ಕಾಲ ವಿರುದ್ಧ ದಿಕ್ಕಿನಲ್ಲಿ ವಿಮಾನ ಹಾರಿದ ನಂತರ ಅವರು ಕೊಲ್ಲಲ್ಪಟ್ಟರು ಎಂಬ ಊಹಾಪೋಹಗಳಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಘಟನೆಗಳ ನಂತರ ಸಿರಿಯಾದಲ್ಲಿರುವ ರಷ್ಯಾದ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ಸೆಪ್ಟೆಂಬರ್ 2015ರಿಂದಲೂ ಸಿರಿಯಾದಲ್ಲಿ ರಷ್ಯಾವೂ ಮಿಲಿಟರಿ ಕ್ಯಾಂಪೇನ್ ನಡೆಸುತ್ತಿದೆ.  ಇತ್ತ ಅಲ್ ಅಸಾದ್ ಅವರ ಉಚ್ಚಾಟಣೆಯನ್ನು   ಸಿರಿಯಾದ  ಜನರು ಬೀದಿಗಿಳಿದು ಸಂಭ್ರಮಿಸಿದ್ದಾರೆ. ಜೊತೆಗೆ ನರದ ಬೀದಿಗಳಲ್ಲಿ ಇದ್ದ ಅಸಾದ್ ಕುಟುಂಬಕ್ಕೆ ಸೇರಿದವರ ಪ್ರತಿಮೆಗಳನ್ನು ಹೊಡೆದುರುಳಿಸಿದ್ದಾರೆ. 

ಯಾರು ಈ ಬಶರ್ ಅಲ್ ಅಸಾದ್‌?

2000 ರಲ್ಲಿ ಬಶರ್ ಅಲ್-ಅಸ್ಸಾದ್ ತಮ್ಮ ತಂದೆ ಹಫೀಜ್ ಅಲ್-ಅಸ್ಸಾದ್ ಅವರ  ನಿರ್ಗಮನದ  ನಂತರ ಅಧಿಕಾರಕ್ಕೆ ಬಂದಿದ್ದರು  ಸಿರಿಯಾದ ಸಶಸ್ತ್ರ ದಂಗೆಯು ಅವರ ಆಡಳಿತವನ್ನು ಉರುಳಿಸುವವರೆಗೆ ಅಂದರೆ  ಎರಡು ದಶಕಗಳ ಕಾಲ ಸಿರಿಯಾವನ್ನು ಅವರು ಆಳಿದ್ದಾರೆ. 

Latest Videos
Follow Us:
Download App:
  • android
  • ios