ಸಿಡ್ನಿಯಲ್ಲಿ ಬಾಲ್ಕನಿಯಲ್ಲೇ ಮನೆ ಮಾಸಿಕ ಬಾಡಿಗೆ 81 ಸಾವಿರ ರೂಪಾಯಿ
ಈ ಬಾಲ್ಕನಿ ಅಪಾರ್ಟ್‌ಮೆಂಟ್‌ವೊಂದರ ಭಾಗವಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಬಾಲ್ಕನಿ ಬೆಡ್‌ರೂಮ್ ಡ್ರಾಯರ್‌ಗಳಂತಹ ಸೌಕರ್ಯಗಳನ್ನು ಹೊಂದಿದೆ.
ಸಿಡ್ನಿ: ಇತ್ತೀಚೆಗೆ ರೂಂ ಬಾಡಿಗೆ ಕೇಳಿಕೊಂಡು ಬರುವವರು ನಮಗೆ ಬಾಲ್ಕನಿ ಇರುಬೇಕು, ಅದರಿಂದ ಸನ್‌ಲೈಟ್ ನೇರವಾಗಿ ರೂಮಿನೊಳಗೆ ಪ್ರವೇಶಿಸಬೇಕು ಎಂದೆಲ್ಲಾ ವಿಚಿತ್ರ ಬೇಡಿಕೆಗಳನ್ನು ತಿಳಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಸಿಡ್ನಿಯ ಮಾಲೀಕನೊಬ್ಬ ತನ್ನ ಅಪಾರ್ಟ್‌ಮೆಂಟ್‌ನಲ್ಲಿರುವ ಬಾಲ್ಕನಿಯಲ್ಲೇ ಬೆಡ್‌ರೂಂ ತರ ಮಾರ್ಪಾಡು ಮಾಡಿದ್ದಾನೆ. ಬಾಡಿಗೆ ತಿಂಗಳಿಗೆ 81,000 ರೂಪಾಯಿ (360 ಆಸ್ಟೇಲಿಯನ್ ಡಾಲರ್) ಇರಿಸಿದ್ದಾನೆ. ಇದರಲ್ಲಿ ಒಬ್ಬರು ಸಿಂಗಲ್ ಬೆಡ್, ಕನ್ನಡಿ ಹಾಗೂ ರಗ್ಗನ್ನು ಒದಗಿಸಿದ್ದಾನೆ. ಸನ್‌ಲೈಟ್ ನೋಟಕ್ಕೂ ಚೆನ್ನಾಗಿರುತ್ತೆ ಎಂದು ಹೇಳಿದ್ದಾನೆ. ಈ ಬೆಡ್‌ರೂಂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ತಿಂಗಳ ಆರಂಭದಲ್ಲಿಯೇ ಬಾಲ್ಕನಿ ಕೋಣೆಯ ಬಾಡಿಗೆ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ವಾಣಿಜ್ಯ ನಗರಿ ಸಿಡ್ನಿ ಜಿಲ್ಲೆಯ ಹೇಮಾರ್ಕೆಟ್ ಬಳಿಯಲ್ಲಿ ಬಾಲ್ಕನಿ ರೂಮ್ ಬಾಡಿಗೆಗೆ ಸಿಗುತ್ತಿದೆ. ಈ ಬಾಲ್ಕನಿ ಅಪಾರ್ಟ್‌ಮೆಂಟ್‌ವೊಂದರ ಭಾಗವಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಬಾಲ್ಕನಿಗೆ ಹೊಂದಿರುವ ಫ್ಲ್ಯಾಟ್ ಎರಡು ಬೆಡ್‌ರೂಮ್ ಹೊಂದಿದ್ದು, ವಾರಕ್ಕೆ 1,300 ಡಾಲರ್ ಬಾಡಿಗೆ ಪಾವತಿಸಬೇಕಿದೆ. ಬಾಲ್ಕನಿ ಬೆಡ್‌ರೂಮ್ ಡ್ರಾಯರ್‌ಗಳಂತಹ ಸೌಕರ್ಯಗಳನ್ನು ಹೊಂದಿದೆ.
ಟೈಟ್ ಜೀನ್ಸ್ ಧರಿಸಿ ಬೈಕ್ ಏರಿ ಬಂದ ಯುವತಿಯನ್ನು ಓರೆಗಣ್ಣಿನಲ್ಲಿ ನೋಡಿದ ಅಂಕಲ್
ಹೇಗಿದೆ ಬಾಲ್ಕನಿ ಬೆಡ್‌ರೂಮ್?
ಒಂದು ಬದಿ ಸಂಪೂರ್ಣ ಗಾಜಿನ ಗೋಡೆ ಹೊಂದಿದ್ದು, ಇದರಲ್ಲಿಯ ಕಿಟಕಿಯ ವ್ಯವಸ್ಥೆ ಇದೆ. ಫ್ಲ್ಯಾಟ್‌ನಲ್ಲಿರುವ ಒಂದು ಬಾತ್‌ರೂಮ್ ಶೇರ್ ಮಾಡಿಕೊಳ್ಳಬೇಕು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಪ್ರತ್ಯೇಕ ಬಾತ್‌ರೂಮ್, ಟಾಯ್ಲೆಟ್ ವ್ಯವಸ್ಥೆ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಎಕ್ಸ್ ಖಾತೆಯಲ್ಲಿ ಬಾಲ್ಕನಿ ರೂಮ್ ಬಗ್ಗೆ ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಬ್ರದರ್, ನೀವು ತಮಾಷೆ ಮಾಡುತ್ತಿಲ್ಲ ತಾನೇ? ವ್ಯೂವ್‌ಗಾಗಿಯೇ ಇಷ್ಟೊಂದು ಬಾಡಿಗೆ ಪಾವತಿಸಬೇಕಾ? ಈ ಜಾಗದಲ್ಲಿ ಟಿವಿ, ಫ್ರಿಡ್ಜ್ ಸೇರಿದಂತೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಅವಕಾಶಗಳಿವೆ ಎಂದು ಸಲಹೆ ನೀಡಿದ್ದಾರೆ. ಆದ್ರೆ ಇದು ಕಾನೂನು ಬಾಹಿರ ಎಂದು ಸಹ ಹೇಳಿದ್ದಾರೆ.
ಸಿಡ್ನಿಯಲ್ಲಿ ಬಾಡಿಗೆ ದರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಬಾಡಿಗೆ ಪ್ರಮಾಣ ಶೇ.8.5ರಷ್ಟು ಏರಿಕೆಯಾಗಿದೆ. ವಾರಕ್ಕೆ 627 ಡಾಲರ್‌ವರೆಗೂ ಪಾವತಿ ಮಾಡುತ್ತಿದ್ದಾರೆ. ಸಿಡ್ನಿಯಲ್ಲಿ ವಾರದ ಬಾಡಿಗೆ 770 ಡಾಲರ್ ವರೆಗೆ ಇದೆ. ಇದು ಶೇ.9ರಷ್ಟು ಏರಿಕೆಯಾಗಿದೆ. 2024 ಜೂನ್ ನಲ್ಲಿ ಮಧ್ಯಮ ಪ್ಲ್ಯಾಟ್‌ಗಳ ವಾರದ ಬಾಡಿಗೆ 750 ಡಾಲರ್ ಆಗಿದೆ ಎಂದು ಕೋರ್ ಲಾಜಿಕ್ ವರದಿ ಮಾಡಿದೆ.
ಒಂದೇ ಒಂದು ಗುರಿ ಸಾಧನೆಗೆ 20 ಬಾಯ್‌ಫ್ರೆಂಡ್ ಮಾಡ್ಕೊಂಡ ಚಾಲಾಕಿ ಯುವತಿ