* ವಿದೇಶಿ ಪಡೆಗಳ ಬೆಂಬಲಿಸಿದವರ ಮನೆಗೆ ರಾತ್ರಿ ವೇಳೆ ಬೆದರಿಕೆ ಪತ್ರ* ಶರಣಾಗಿ, ಇಲ್ಲ ಸಾಯಲು ಸಿದ್ಧರಾಗಿ

ಲಂಡನ್‌(ಸೆ.01): ಅಮೆರಿಕ ಸೇನೆ ಅಷ್ಘಾನಿಸ್ತಾನದಿಂದ ಹೊರಟಿರುವ ಬೆನ್ನಲ್ಲೇ, ಇತ್ತ ತಾಲಿಬಾನ್‌ ಉಗ್ರರು ಈ ಹಿಂದೆ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಪರ ಕೆಲಸ ಮಾಡಿದ್ದಾರೆ ಎನ್ನಲಾದ ಆರೋಪಿಗಳ ಮನೆಗಳ ಮೇಲೆ ತಾವೇ ಶರಣಾಗಬೇಕು. ಇಲ್ಲದಿದ್ದರೆ ನಿಮಗೆ ಸಾವಿನ ಶಿಕ್ಷೆ ನೀಡಬೇಕಾಗುತ್ತದೆ ಎಂಬ ಭಯಾನಕವಾದ ‘ಬೆದರಿಕೆ ಪತ್ರ’ ಅಂಟಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿಂದೆ ತಾಲಿಬಾನ್‌ ಉಗ್ರರನ್ನು ಶೋಧಿಸಲು ಅಮೆರಿಕದ ಪಡೆಗಳಿಗೆ ನೆರವು ನೀಡಿದ್ದಾರೆ ಎನ್ನಲಾದ ಆರೋಪಿಗಳನ್ನು ಉದ್ದೇಶಿಸಿ ಈ ಪತ್ರದಲ್ಲಿ ನೀವು ನ್ಯಾಟೋ ಪಡೆಗಳ ಗುಲಾಮರಾಗಿದ್ದು, ಅವರಿಗೆ ಸಹಕಾರ ನೀಡಬಾರದು ಎಂಬ ನಮ್ಮ ಎಚ್ಚರಿಕೆಯನ್ನು ಕಡೆಗಣಿಸುತ್ತಲೇ ಬಂದಿದ್ದೀರಿ. ಇದೀಗ ನೀವಾಗಿಯೇ ತಾಲಿಬಾನ್‌ ನ್ಯಾಯಾಲಯಕ್ಕೆ ಶರಣಾಗಿ ಎಂದಿದ್ದಾರೆ.

ಹೀಗಾಗದಿದ್ದರೆ ಈ ಪತ್ರವನ್ನು ಶರಿಯಾ ನ್ಯಾಯಾಲಯಕ್ಕೆ ರವಾನಿಸಲಾಗುತ್ತದೆ. ಅಲ್ಲಿ ನಿಮ್ಮ ಅನುಪಸ್ಥಿತಿಯಲ್ಲಿ ನಿಮಗೆ ಮರಣದಂಡನೆ ವಿಧಿಸಲಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ.