ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಭರ್ಜರಿ ವಿಜಯದಿಂದ ಆನಂದ ತುಂದಿಲರಾಗಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಂಬರುವ ಮೂರ್ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ವಾಷಿಂಗ್ಟನ್‌: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಭರ್ಜರಿ ವಿಜಯದಿಂದ ಆನಂದ ತುಂದಿಲರಾಗಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಂಬರುವ ಮೂರ್ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ವಿರುದ್ಧ ದೇಶಾದ್ಯಂತ ಗುಪ್ತ ಅಲೆ (ಅಂಡರ್‌ಕರೆಂಟ್‌) ಇದ್ದು, 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ಹೇಳಿದ್ದಾರೆ.

ಗುರುವಾರ ಅಮೆರಿಕದ ನ್ಯಾಷನಲ್‌ ಪ್ರೆಸ್‌ ಕ್ಲಬ್‌ (ಎನ್‌ಪಿಸಿ) ಹಾಗೂ ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ಫ್ರಾಂಕ್‌ ಇಸ್ಲಾಂ (Frank Islam) ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರಿಗೆ ಶೇ.60ರಷ್ಟು ಭಾರತೀಯರು ಮತ ಹಾಕಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಬಿಜೆಪಿ ವಿರುದ್ಧ ಗುಪ್ತ ಅಲೆ ದೇಶಾದ್ಯಂತ ಬಲಗೊಳ್ಳುತ್ತಿದೆ. ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಅದು ಜನರನ್ನು ಅಚ್ಚರಿಗೆ ದೂಡಲಿದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ (RSS) ಹಾಗೂ ಬಿಜೆಪಿಯ (BJP) ಮಹಾರಥವನ್ನು ತಡೆದು ನಿಲ್ಲಿಸಲಾಗದು ಎಂದು ಜನರನ್ನು ನಂಬಿಸಲಾಗಿದೆ. ಆದರೆ ಅದು ಹಾಗಿಲ್ಲ. ನಾನು ಈಗಲೇ ಹೇಳುತ್ತೇನೆ. ಮುಂದಿನ ಮೂರ್ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಜತೆ ನಾವು ನೇರವಾಗಿ ಹೋರಾಡುತ್ತೇವೆ. ಬಿಜೆಪಿಯನ್ನು ಧೂಳೀಪಟ ಮಾಡುತ್ತೇವೆ. ಕರ್ನಾಟಕದಲ್ಲಿ ಏನನ್ನು ಸಾಧಿಸಿದೇವೆಯೋ ಅದನ್ನೇ ಆ ರಾಜ್ಯಗಳಲ್ಲೂ ಮಾಡುತ್ತೇವೆ. ಆದರೆ ಭಾರತೀಯ ಮಾಧ್ಯಮಗಳನ್ನು ಈ ಬಗ್ಗೆ ಕೇಳಿ ನೋಡಿ. ಅವರು ಇದೆಲ್ಲಾ ಆಗುವುದಿಲ್ಲ ಎಂದೇ ಹೇಳುತ್ತಾರೆ’ ಎಂದು ರಾಹುಲ್‌ (Rahul Gandhi) ಹೇಳಿದರು. ವರ್ಷಾಂತ್ಯಕ್ಕೆ ಮಧ್ಯಪ್ರದೇಶ (Madhya Pradesh), ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಂ (Mizoram) ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಬೇಕಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಿಗದಿಯಾಗಿದೆ.

ಸಾಮಾನ್ಯ ವೀಸಾ: ಅಮೆರಿಕ ಏರ್‌ಪೋರ್ಟ್‌ನಲ್ಲಿ 2 ತಾಸು ಕಾದ ರಾಹುಲ್‌!

ಪ್ರಜಾಸತ್ತೆ ಅಪಾಯದಲ್ಲಿ

ಈ ನಡುವೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಪುನರುಚ್ಚರಿಸಿದ ರಾಹುಲ್‌, ಭಾರತದ ಪ್ರಜಾಸತ್ತೆಯು ಇತರ ದೇಶಗಳಿಗೂ ಒಳ್ಳೆಯದನ್ನು ಮಾಡುತ್ತದೆ. ಆದರೆ ದೇಶದಲ್ಲಿನ ಪ್ರಜಾಸತ್ತೆ ಕುಸಿಯುತ್ತಿದ್ದು, ಜಾಗತಿಕ ಪರಿಣಾಮ ಬೀರುತ್ತದೆ. ಆದಾಗ್ಯೂ ಇದು ನಮ್ಮ ಆಂತರಿಕ ವಿಚಾರ. ಹೀಗಾಗಿ ಆಂತರಿಕವಾಗಿಯೇ ಇದರ ವಿರುದ್ಧ ಹೋರಾಡಿ ಗೆಲ್ಲುತ್ತೇವೆ ಎಂದು ಹೇಳಿದರು.

ಬಿಜೆಪಿ ಸೋಲಿಸಲು ಕರ್ನಾಟಕ ತಂತ್ರವೇ ಮಾದರಿ: ರಾಹುಲ್‌ ಗಾಂಧಿ