ಢಾಕಾ(ನ.03): ಪ್ರವಾದಿ ಮಹಮ್ಮದ್‌ರ ವ್ಯಂಗ್ಯಚಿತ್ರ ಪ್ರದರ್ಶನ ತಪ್ಪಲ್ಲ ಎಂಬ ಫ್ರಾನ್ಸ್‌ ಅಧ್ಯಕ್ಷರ ಎಮ್ಯಾನ್ಯುಯಲ್‌ ಮ್ಯಾಕ್ರೋನ್‌ ಹೇಳಿಕೆ ಸಮರ್ಥಿಸಿದರು ಎನ್ನುವ ಕಾರಣಕ್ಕಾಗಿ ಸ್ಥಳೀಯ ಮುಸ್ಲಿಮರ ಗುಂಪೊಂದು ಹಲವು ಹಿಂದೂಗಳ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಫ್ರಾನ್ಸ್‌ನಲ್ಲಿ ನೆಲೆಸಿರುವ ಬಾಂಗ್ಲಾ ಮೂಲದ ವ್ಯಕ್ತಿಯೊಬ್ಬರು ಮ್ಯಾಕ್ರೋನ್‌ ಅವರ ಹೇಳಿಕೆ ಹೊಗಳಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಇದಕ್ಕೆ ಬಾಂಗ್ಲಾದ ಕೊಮಿಲ್ಲಾ ಜಿಲ್ಲೆಯ ಪುರ್ಬೊ ದೌರ್‌ ಎಂಬ ಹಿಂದೂ ಶಿಕ್ಷಕರೊಬ್ಬರು ಬೆಂಬಲಿಸಿ ಕಮೆಂಟ್‌ ಹಾಕಿದ್ದರು. ಆದರೆ ಪುರ್ಬೊ ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಕೆಲ ಸ್ಥಳೀಯರು ಅಪಪ್ರಚಾರ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ನೂರಾರು ಜನರ ಗುಂಪು, ಹಿಂದೂಗಳ ವಾಸಿಸುವ ಸ್ಥಳದ ಮೇಲೆ ದಾಳಿ ಮಾಡಿ, ಮನೆಗಳನ್ನು ಧ್ವಂಸಗೊಳಿಸಿ ಬಳಿಕ ಬೆಂಕಿ ಹಚ್ಚಿದ್ದಾರೆ. ಪ್ರಕರಣ ಸಂಬಂಧ ಶಿಕ್ಷಕ ಮತ್ತು ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ.