ಬ್ರಿಟನ್ನಿಂದ ಬಂದ 50% ಸೋಂಕಿತರಿಗೆ ‘ಸ್ಪೀಡ್ ವೈರಸ್’?| ಬ್ರಿಟನ್‌ನಲ್ಲಿ ಕೊರೋನಾ ಹಬ್ಬಿದ ಮಾದರಿಯನ್ನು ಆಧರಿಸಿ ಭಾರತೀಯ ವೈರಾಣು ತಜ್ಞರ ತರ್ಕ| ಬೇಗ ಪತ್ತೆ ಹಚ್ಚಿ ಟೆಸ್ಟ್ ಮಾಡಿ| ಇಲ್ಲವಾದಲ್ಲಿ ಭಾರತದಲ್ಲೂ ಬ್ರಿಟನ್ ವೈರಸ್ ಹಬ್ಬುವ ಸಾಧ್ಯತೆ: ತಜ್ಞರು
ನವದೆಹಲಿ(ಡಿ.24): ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೈಸ್ಪೀಡ್ ಕೊರೋನಾ ಭಾರತಕ್ಕೂ ಹಬ್ಬುವುದನ್ನು ತಡೆಯಲು ಕೇಂದ್ರ ಸರ್ಕಾರ ನಾನಾ ಕ್ರಮ ಕೈಗೊಂಡ ಹೊರತಾಗಿಯೂ, ಈಗಾಗಲೇ ಭಾರತಕ್ಕೆ ಬಂದಿರುವವರ ಸೋಂಕಿತರ ಪೈಕಿ ಶೇ.50ರಷ್ಟುಜನರು ಹೊಸ ಮಾದರಿಯ ಸೋಂಕಿಗೆ ತುತ್ತಾಗಿರಬಹುದು ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೀಗೆ ಹೈಸ್ಪೀಡ್ ಸೋಂಕಿಗೆ ತುತ್ತಾದವರು ಭಾರತದಲ್ಲೂ ಕೊರೋನಾ ವಾಹಕರಾಗಬಹುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
‘ಬ್ರಿಟನ್‌ನಿಂದ ಭಾರತಕ್ಕೆ ಕಳೆದ 2 ದಿನದಲ್ಲಿ ಮರಳಿದವರಲ್ಲಿ 22 ಮಂದಿಗೆ ಕೊರೋನಾ ದೃಢಪಟ್ಟಿದೆ. ಇನ್ನು ಬ್ರಿಟನ್‌ನ ಈಗಿನ ಕೊರೋನಾ ಸೋಂಕಿತರ ಪೈಕಿ ಶೇ.60 ಮಂದಿಯಲ್ಲಿ ರೂಪಾಂತರಗೊಂಡ ಹೊಸ ಕೊರೋನಾ ವೈರಾಣು ಪತ್ತೆಯಾಗಿದೆ. ಈ ಲೆಕ್ಕಾಚಾರದ ಆಧಾರದಲ್ಲಿ, ಭಾರತಕ್ಕೆ ಮರಳಿ ಕೊರೋನಾ ದೃಢಪಟ್ಟವರ ಪೈಕಿ ಅರ್ಧದಷ್ಟುಜನರಲ್ಲಿ ರೂಪಾಂತರಗೊಂಡ ಕೊರೋನಾ ವೈರಾಣು ಇರಬಹುದು. ಅಲ್ಲದೆ ಹೊಸ ವೈರಾಣು ಪತ್ತೆಯಾದ ಬ್ರಿಟನ್‌ನ ನಗರದಿಂದ ಮರಳಿದ್ದರೆ, ಹೊಸ ವೈರಾಣು ಹರಡುವಿಕೆ ಸಾಧ್ಯತೆ ತುಂಬಾ ಇದೆ’ ಎಂದು ಹೈದರಾಬಾದ್‌ನ ಸೆಂಟರ್ ಆಫ್ ಸೆಲ್ಯುಲರ್ ಹಾಗೂ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ನಿರ್ದೇಶಕ ಡಾ| ರಾಕೇಶ್ ಮಿಶ್ರಾ ಹೇಳಿದ್ದಾರೆ.
‘ಈಗಷ್ಟೇ ಬ್ರಿಟನ್‌ನಿಂದ ಮರಳಿದವರನ್ನು ಪತ್ತೆ ಮಾಡಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಆದಷ್ಟುಬೇಗ ಪತ್ತೆ ಮಾಡಬೇಕು ಕೂಡ. ಆದರೆ ತುಂಬಾ ತಿಂಗಳಿನ ಹಿಂದೆ ಮರಳಿದವರನ್ನು ಟೆಸ್ಟ್ ಮಾಡುವ ಅಗತ್ಯವಿಲ್ಲ. ಅವರಿಗೆ ಕೊರೋನಾ ಬಂದಿದ್ದರೆ ಸೋಂಕು ಲಕ್ಷಣ ಇರದೇ ಎಷ್ಟುಜನರಿಗೆ ಸೋಂಕು ಹರಡಿಸಬೇಕೋ ಅಷ್ಟುಜನರಿಗೆ ಹರಡಿಸಿ ಆಗಿರುತ್ತದೆ’ ಎಂದು ಅವರು ಹೇಳಿದ್ದಾರೆ.
ಬ್ರಿಟನ್ ಸೇರಿದಂತೆ 8 ದೇಶದಲ್ಲಿ ಪತ್ತೆಯಾಗಿರುವ ಕೊರೋನಾದ ಹೊಸ ಮಾದರಿಯ ಶೇ.70ರಷ್ಟುವೇಗವಾಗಿ ಹಬ್ಬಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿಯೇ ಈ ಮಾದರಿಯ ಬಗ್ಗೆ ಜಗತ್ತಿಲ್ಲೆಡೆ ಭಾರೀ ಆತಂಕ ವ್ಯಕ್ತವಾಗಿದೆ.
ಯಾಕೆ ಆತಂಕ?
1. ಸಾಮಾನ್ಯಕ್ಕಿಂತ ಶೇ.70ರಷ್ಟುವೇಗದಲ್ಲಿ ಹಬ್ಬುತ್ತೆ ಎನ್ನಲಾದ ಬ್ರಿಟನ್‌ನ ‘ಹೈಸ್ಪೀಡ್’ ವೈರಸ್ಸಿಂದ ವಿಶ್ವವೇ ತಲ್ಲಣ
2. ಬ್ರಿಟನ್‌ನಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ತಗುಲಿದವರಲ್ಲಿ ಶೇ.60 ಮಂದಿಗೆ ಹೊಸ ಮಾದರಿಯ ವೈರಸ್
3. ಬ್ರಿಟನ್‌ನಿಂದ ಭಾರತಕ್ಕೆ ಈ ತಿಂಗಳು ಬಂದವರ ಪೈಕಿ 23 ಮಂದಿಗೆ ಈಗಾಗಲೇ ಕೊರೋನಾ ಸೋಂಕು ದೃಢ
4. ಬ್ರಿಟನ್ ಮಾದರಿ ಆಧರಿಸಿ ತರ್ಕಿಸಿದರೆ ಅಲ್ಲಿಂದ ಬಂದ ಶೇ.50 ಅಂದರೆ, 12-13 ಜನಕ್ಕೆ ‘ಹೈಸ್ಪೀಡ್’ ವೈರಸ್
5. ಹಾಗಾಗಿ, ಈಗಷ್ಟೇ ಬ್ರಿಟನ್‌ನಿಂದ ಬಂದವರನ್ನು ತುರ್ತಾಗಿ ಪತ್ತೆ ಹಚ್ಚಿ ಪರೀಕ್ಷಿಸಿ: ವೈರಾಣು ತಜ್ಞರಿಂದ ಸಲಹೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 24, 2020, 7:15 AM IST