ನ್ಯೂಯಾರ್ಕ್(ಫೆ.09): ಲಕ್ಷಾಂತರ ಜನರು ವೀಕ್ಷಿಸುವ ಅಮೆರಿಕದ ಜನಪ್ರಿಯ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ ‘ಸೂಪರ್‌ ಬೌಲ್‌’ನಲ್ಲಿ ದಿಲ್ಲಿಯಲ್ಲಿ ನಡೆದಿರುವ ರೈತ ಹೋರಾಟದ 40 ಸೆಕೆಂಡಿನ ಟೀವಿ ಜಾಹೀರಾತು ಪ್ರದರ್ಶನಗೊಂಡಿದೆ. ಇಲ್ಲಿನ ಸಿಖ್‌ ಸಮುದಾಯ ಇದನ್ನು ಪ್ರಸಾರ ಮಾಡಿಸಿದ್ದು, ಇದು ಅನೇಕರ ಹುಬ್ಬೇರಿಸಿದೆ.

‘ಸಿಬಿಎಸ್‌ ಚಾನೆಲ್‌ನಲ್ಲಿ ಪ್ರಸಾರವಾಗುವ ಈ ಪಂದ್ಯಾವಳಿಯ ಜಾಹೀರಾತು ಅಷ್ಟುಅಗ್ಗವಲ್ಲ. 30 ಸೆಕೆಂಡಿನ ಒಂದು ಜಾಹಿರಾತಿಗೆ ಸಿಬಿಎಸ್‌, 40 ಕೋಟಿ ರು. ದರ ವಿಧಿಸುತ್ತದೆ’ ಎಂದು ಸಿಎನ್‌ಎನ್‌ ವರದಿ ಹೇಳಿದೆ.

 
 
 
 
 
 
 
 
 
 
 
 
 
 
 

A post shared by Teji Video (@tejivideo)

‘ಎಲ್ಲಾದರೂ ಒಂದು ಅನ್ಯಾಯವಾದರೆ ಎಲ್ಲೆಡೆಯ ನ್ಯಾಯಕ್ಕೆ ಬೆದರಿಕೆ’ ಎಂಬ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಘೋಷವಾಕ್ಯದೊಂದಿಗೆ ಜಾಹೀರಾತು ಆರಂಭವಾಗುತ್ತದೆ. ಫ್ರೆನ್ಸೋ ಸಿಟಿ ಮೇಯರ್‌ ಜೆರ್ರಿ ಡಯರ್‌ ಅವರ, ‘ಭಾರತೀಯ ಸೋದರ ಸೋದರಿಯರೇ ನಿಮ್ಮ ಜತೆ ನಾವಿದ್ದೇವೆ’ ಎಂದು ಹೇಳಿಕೆಯೂ ಪ್ರಸಾರವಾಗುತ್ತದೆ. ಈ ಜಾಹೀರಾತು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.