ಸ್ಪೇನ್(ಜು.17): ಕೊರೋನಾ ವೈರಸ್ ಮೂಲ ಇದುವರೆಗೂ ಪತ್ತೆಯಾಗಿಲ್ಲಿ. ಆದರೆ ವೈರಸ್ ಸೃಷ್ಟಿಸುತ್ತಿರುವ ಆತಂಕ ಮಾತ್ರ ನಿಂತಿಲ್ಲ. ಚೀನಾದ ವುಹಾನಲ್ಲಿ ಕಾಣಿಸಿಕೊಂಡ ವೈರಸ್ ಇದೀಗ ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿದೆ. ಇದರ ನಡುವೆ ಹಲವು ಅಧ್ಯಯನ, ಸಂಶೋಧನೆ ನಡೆಯುತ್ತಿದೆ. ಇದರಲ್ಲಿ ಮುಂಗುಸಿ ಹೋಲುವ ಮಿಂಕ್ ಪ್ರಾಣಿಗಳಿಂದ ಮಾನವಿಗೆ ಕೊರೋನಾ ಹರಡುತ್ತಿದೆ ಅನ್ನೋ ವರದಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಮಾಂಸಕ್ಕಾಗಿ ಸಾಕುತ್ತಿದ್ದ ಮಿಂಕ್ ಪ್ರಾಣಿಗಳನ್ನು ಮಾರಣಹೋಮ ಮಾಡಲಾಗುತ್ತಿದೆ. ಇದೀಗ ಸ್ಪೇನ್‌ನಲ್ಲಿ ಈಗಾಗಲೇ 1 ಲಕ್ಷ ಮಿಂಕ್ ಪ್ರಾಣಿಗಳನ್ನು ಕೊಲ್ಲಲಾಗಿದೆ. 

ವೆಂಟಿಲೇಟರ್ ಚಿಕಿತ್ಸೆ ಪಡೆದ 97% ಸೋಂಕಿತರು ಬದುಕುಳಿದಿಲ್ಲ, ಬೆಚ್ಚಿ ಬೀಳಿಸುತ್ತಿದೆ ವರದಿ!

ಸ್ಪೇನ್‌ನ ಫರ್ ಫಾರ್ಮ್‌ನಲ್ಲಿದ್ದ ಸಿಬ್ಬಂದಿಗಳು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ. ಇದೇ ವೇಳೆ ನೆದರ್ಲೆಂಡ್ ಸೇರಿದಂತೆ ಕೆಲ ದೇಶಗಳಲ್ಲೂ ಮಿಂಕ್ ಪ್ರಾಣಿಗಳನ್ನು ಸಾಕುತ್ತಿದ್ದ ಫಾರ್ಮ್‌ ಸಿಬ್ಬಂದಿಗಳಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ ಮಿಂಕ್ ಪ್ರಾಣಿಗಳ ಪರೀಕ್ಷೆ ನಡೆಸಿದಾಗ ಶೇಕಡ 90 ರಷ್ಟು ಮಿಂಕ್ ಪ್ರಾಣಿಗಳಲ್ಲಿ ಕೊರೋನಾ ವೈರಸ್ ದೃಢಪಟ್ಟಿತು. ಈ ಮಿಂಕ್ ಪ್ರಾಣಿಗಳಿಂದ ಮಾನವನ ಮೇಲೂ ಕೊರೋನಾ ವೈರಸ್ ಹರಡುತ್ತಿದೆ ಅನ್ನೋ ಅಂಶ ಬಯಲಾಗಿದೆ. ಹೀಗಾಗಿ ಸ್ಪೇನ್ ಸರ್ಕಾರ ಎಲ್ಲಾ ಫಾರ್ಮ್‌ಗಳಲ್ಲಿರುವ ಮಿಂಕ್ ಪ್ರಾಣಿಗಳನ್ನು ಕೊಲ್ಲಲು ಆದೇಶ ನೀಡಿದೆ.

ರಾಜ್ಯಗಳಲ್ಲಿ ಯಾವಾಗ ಕೊರೋನಾ ಅಂತ್ಯವಾಗುತ್ತೆ..?.

ಸ್ಪೇನ್‌ನಲ್ಲಿ 1 ಲಕ್ಷಕ್ಕೂ ಅಧಿಕ ಮಿಂಕ್ ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ನೆದರ್ಲೆಂಡ್‌ನಲ್ಲೂ ಇದೇ ರೀತಿ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಪ್ರಾಣಿಯಿಂದ ಕೊರೋನಾ ವೈರಸ್ ಮಾನವನ ದೇಹಕ್ಕೆ ಹರಡಿಸುವ ಸಾಧ್ಯತೆ ಹೆಚ್ಚು ಎಂದಿದೆ. ಚೀನಾ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಮಿಂಕ್ ಪ್ರಾಣಿಗಳ ಪರೀಕ್ಷೆ ನಡೆಸಲಾಗಿದೆ. ಶೇಕಡ 87 ರಷ್ಟು ಮಿಂಕ್ ಪ್ರಾಣಿಗಳಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.