ವೆಂಟಿಲೇಟರ್ ಚಿಕಿತ್ಸೆ ಪಡೆದ 97% ಸೋಂಕಿತರು ಬದುಕುಳಿದಿಲ್ಲ, ಬೆಚ್ಚಿ ಬೀಳಿಸುತ್ತಿದೆ ವರದಿ!
ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ, ಬೆಡ್ ಸಿಗುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಲೇ ಇದೆ. ಇನ್ನೂ ಅಲೆದಾಡಿ ಬೆಡ್ ಪಡೆದು ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಗೋಳು ಹೇಳತೀರದು. ಆದರಲ್ಲೂ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸ್ಥಿತಿ ಶೋಚನೀಯವಾಗಿದೆ. ಕಾರಣ ಬೆಂಗಳೂರಿನ ಪ್ರತಿಷ್ಠಿತ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗೆ ಒಳಗಾದ ಸೋಂಕಿತರ ಪೈಕಿ ಶೇಕಡಾ 97 ರಷ್ಟು ಮಂದಿ ಬದುಕುಳಿದಿಲ್ಲ.
ಬೆಂಗಳೂರು(ಜು.17): ಕೊರೋನಾ ವೈರಸ್ ಬೆಂಗಳೂರನ್ನು ಅಕ್ಷರಶಃ ನಡುಗಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಸರ್ಕಾರದ ಕೋವಿಡ್ ಆಸ್ಪತ್ರೆಗಳು ಬೆಡ್ ಭರ್ತಿ, ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿಲ್ಲ. ಈಗಾಗಲೇ ಹಲವರು ಬೆಂಗಳೂರಿಗೆ ಗುಡ್‌ಬೈ ಹೇಳಿದ್ದಾರೆ. ಇದರ ನಡುವೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವರದಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ.
ಲಾಕ್‌ಡೌನ್ ವಿಸ್ತರಣೆಯಾಗುತ್ತಾ? ಸಭೆ ಬಳಿಕ ಸರ್ಕಾರ ನಿಲುವು ತಿಳಿಸಿದ ಅಶೋಕ್
ಬೆಂಗಳೂರು ಅತೀ ದೊಡ್ಡ ಹಾಗೂ ಪುರಾತನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರ ಪೈಕಿ ಶೇಕಡಾ 97 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮ ತನ್ನ ವರದಿಯಲ್ಲಿ ಹೇಳಿದೆ. ಲಂಡನ್, ಅಮೇರಿಕ, ಇಟಲಿಗೆ ಹೋಲಿಸಿದರೆ ಸಾವಿನ ಪ್ರಮಾಣ ಬೆಂಗಳೂರಿನಲ್ಲೇ ಅಧಿಕವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
100 ವರ್ಷ ಹಳೆಯದಾದ ಬೆಂಗಳೂರಿನ ಮೊದಲ ಕೊರೋನಾ ಸೋಂಕಿತರ ಆಸ್ಪತ್ರೆಯಾದ ವಿಕ್ಟೋರಿಯಾದಲ್ಲಿ ವಿಕ್ಟೋರಿಯಾದಲ್ಲಿ ಕೊರೋನಾದಿಂದ ತೀವ್ರ ಹದಗೆಟ್ಟ 92 ಸೋಂಕಿತರಿಗೆ ವೆಂಟಿಲೇಟರ್ ಉಸಿರಾಟ ನೀಡಲಾಗಿತ್ತು. ಇದರಲ್ಲಿ 89 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ವೆಂಟಿಲೇಟರ್ ಚಿಕಿತ್ಸೆ ಪಡೆದ ಸೋಂಕಿತರ ಪೈಕಿ 97% ಮಂದಿ ಬದುಕುಳಿದಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
ಕೊರೋನಾ ಸೋಂಕಿತರಿಗೆ 1200 ಬೆಡ್ ನೀಡಲು ನಿರ್ಧರಿಸಿತ್ತು. ಆದರೆ ಆರಂಭಿಕ ಹಂತದಲ್ಲಿ 550 ಬೆಡ್ ವ್ಯವಸ್ಥೆ ಮಾಡಿದೆ. ಜುಲೈ ಆರಂಭದಲ್ಲೇ ವಿಕ್ಟೋರಿಯಾ ಆಸ್ಪತ್ರೆಯ ಎಲ್ಲಾ ಬೆಡ್‌ಗಳು ಕೊರೋನಾ ಸೋಂಕಿತರಿಂದ ಭರ್ತಿಯಾಗಿದೆ.
ಜುಲೈ 15ಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ICU(ತೀವ್ರ ನಿಘಾ ಘಟಕ) 206 ಮಂದಿ ಕೊರೋನಾ ವೈರಸ್‌ಗೆ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 91 ಮಂದಿ ಸಾವನ್ನಪ್ಪಿದ್ದಾರೆ. 103 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.