ಎದೆ ಝಲ್‌ ಎನಿಸುವ ದೃಶ್ಯ ವೈರಲ್ ಪೈಲಟ್‌ಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ ಭಾರಿ ಗಾಳಿಯಿಂದಾಗಿ ಲ್ಯಾಂಡಿಂಗ್ ವೇಳೆ ಮುಗ್ಗರಿಸಿದಂತಾದ ವಿಮಾನ

ಬ್ರಿಟನ್‌(ಫೆ.4): ತೀವ್ರ ಗಾಳಿಯಿಂದಾಗಿ ವಿಮಾನವೊಂದು ಲ್ಯಾಂಡಿಂಗ್‌ ವೇಳೆ ಮುಗ್ಗರಿಸಿದಂತಾದ ಘಟನೆಯೊಂದು ಲಂಡನ್‌ನಲ್ಲಿ ನಡೆದಿದ್ದು, ಪೈಲಟ್‌ಗಳ ಚಾಣಾಕ್ಷತನದಿಂದಾಗಿ ಅನಾಹುತವೊಂದು ತಪ್ಪಿದೆ. ಬ್ರಿಟನ್‌ನ ಹೀಥ್ರೂ(Heathrow) ನಲ್ಲಿ ವಿಮಾನ ಇಳಿಯುವಾಗ ಬಲವಾದ ಗಾಳಿಯು ವಿಮಾನವನ್ನು ಬಹುತೇಕ ತಿರುಗಿಸುತ್ತದೆ. ಕೊರ್ರಿ ಚಂಡಮಾರುತದಿಂದಾಗಿ ಈ ಬಲವಾದ ಗಾಳಿ ಬೀಸಿದೆ ಎಂದು ತಿಳಿದು ಬಂದಿದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋದಲ್ಲಿ ಬಲವಾದ ಗಾಳಿಯಿಂದಾಗಿ ವಿಮಾನವೊಂದು ಇಳಿಯಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಏವಿಯೇಷನ್ ​​ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಬಿಗ್ ಜೆಟ್ ಟಿವಿ (Big Jet TV) ಯಿಂದ ಸೆರೆಹಿಡಿಯಲಾದ ದೃಶ್ಯ ಇದಾಗಿದ್ದು, ಆ ವಿಮಾನದ ಪೈಲಟ್‌ಗಳು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಏರ್‌ಲೈನ್‌ಗೆ (British Airline) ಸೇರಿದ ವಿಮಾನವನ್ನುಇಳಿಸಲು ಪ್ರಯತ್ನಿಸುತ್ತಿರುವಾಗ ವಿಮಾನ ಬಹುತೇಕ ಪಲ್ಟಿಯಾಗುಂತೆ ಕಾಣಿಸುತ್ತದೆ. 

Scroll to load tweet…

ಈ ಸಣ್ಣ ವೀಡಿಯೊದಲ್ಲಿ, ವಿಮಾನದ ಟೈರ್‌ಗಳು ನೆಲಕ್ಕೆ ಇಳಿದು ಇನ್ನೇನು ಲ್ಯಾಂಡ್‌ ಆಗುತ್ತಿದೆ ಎನ್ನುವಷ್ಟರಲ್ಲಿ ಗಾಳಿಯು ಅಪಾಯಕಾರಿಯಾಗಿ ವಿಮಾನವನ್ನು ಎಡಕ್ಕೆ ತಿರುಗಿಸುವುದನ್ನು ಕಾಣಬಹುದು. ಈ ದೃಶ್ಯವನ್ನು ವಿಡಿಯೋ ಮಾಡುತ್ತಿರುವವರು. ಸುಲಭ, ಸುಲಭ, ಸುಲಭ, ಓ ಮೈ ಗಾಡ್ ಎಂದು ದೃಶ್ಯವನ್ನು ನೋಡಿ ಉದ್ಘರಿಸುವುದನ್ನು ಕಾಣಬಹುದು. ಅದಾಗ್ಯೂ ವಿಮಾನವೂ ನೆಲಕ್ಕೆ ಬೀಳದೇ ಮತ್ತೆ ನಿಧಾನವಾಗಿ ಟೇಕಾಫ್ ಆಗುತ್ತದೆ. 

5G Rollout Concerns: USನ ಹಲವು ನಗರಗಳಿಗೆ ಏರ್ ಇಂಡಿಯಾ ಸೇರಿದಂತೆ ಇತರ ವಿಮಾನಗಳು ರದ್ದು!

ಈ ವಿಮಾನವು ಅಬರ್ಡೀನ್‌ನಿಂದ( Aberdeen) ಹೊರಟು ಸೋಮವಾರ ಲಂಡನ್‌ಗೆ ( London) ಬರುತ್ತಿತ್ತು. ಈ ತುರ್ತು ಸಂದರ್ಭದಲ್ಲಿ ವಿಮಾನ ಅಪಘಾತವನ್ನು ತಡೆಗಟ್ಟಲು, ಪೈಲಟ್‌ಗಳು "ಟಚ್ ಮತ್ತು ಗೋ" ವಿಧಾನವನ್ನು ಪ್ರಯೋಗಿಸಿದರು. ಅಂದರೆ ಅವರು ವಿಮಾನವನ್ನು ಕೆಳಗೆ ಇಳಿಸದೆ ರನ್‌ವೇಯಿಂದ ಮತ್ತೆ ಟೇಕ್ ಆಫ್ ಮಾಡಿದರು ಮತ್ತು ನಂತರ ಲ್ಯಾಂಡಿಂಗ್ ಮಾಡಲು ಎರಡನೇ ಬಾರಿ ಪ್ರಯತ್ನಿಸಿದರು. 

ಡೈಲಿ ಮೇಲ್ (Daily Mail) ವರದಿ ಪ್ರಕಾರ, ಈ ಬಗ್ಗೆ ಬ್ರಿಟಿಷ್ ಏರ್‌ವೇಸ್ ವಕ್ತಾರರು ಪ್ರತಿಕ್ರಿಯಿಸಿದ್ದು, 'ನಮ್ಮ ಪೈಲಟ್‌ಗಳು ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಸನ್ನಿವೇಶಗಳನ್ನು ನಿರ್ವಹಿಸಲು ಹೆಚ್ಚು ತರಬೇತಿ ಪಡೆದಿದ್ದಾರೆ ಮತ್ತು ನಮ್ಮ ವಿಮಾನ ಸಿಬ್ಬಂದಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿ ಎಲ್ಲರೂ ಸಾಮಾನ್ಯರಂತೆ ಕೆಳಗೆ ಇಳಿದರು ಎಂದು ಪೈಲಟ್‌ಗಳ ಕಾರ್ಯವನ್ನು ಶ್ಲಾಘಿಸಿದರು. 

Air India Takeover ಮರಳಿ ಅರಮನೆಗೆ ಬಂದ ಮಹಾರಾಜ, 69 ವರ್ಷಗಳ ಬಳಿಕ ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ!

ಈ ವಿಮಾನದಲ್ಲಿ ಅಬರ್ಡೀನ್ ಸೌತ್‌ನ (Aberdeen South) ಸಂಸತ್ ಸದಸ್ಯ ಸ್ಟೀಫನ್ ಫ್ಲಿನ್ (Stephen Flynn) ಪ್ರಯಾಣಿಸುತ್ತಿದ್ದರು. ಘಟನೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡ ಅವರು, 'ಸಂತಸ ಪಡುವಂತಹ ಸ್ಥಿತಿ ಇದಾಗಿರಲಿಲ್ಲ ಎಂದು ಖಚಿತಪಡಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಕೊರಿ ಚಂಡಮಾರುತದಿಂದಾಗಿ 92mph ವೇಗವಾಗಿ ಗಾಳಿ ಬೀಸಿದ ಪರಿಣಾಮ ಈ ಘಟನೆ ಸಂಭವಿಸಿದೆ. ಕೊರಿ ಚಂಡಮಾರುತವು (Storm Corrie) ಕೆಲವು ಸಾವುನೋವುಗಳಿಗೆ ಕಾರಣವಾಗಿದೆ. ಜೊತೆಗೆ ವಿದ್ಯುತ್ ಕಡಿತ ಮತ್ತು ಸಾವಿರಾರು ವಿಮಾನ ಮತ್ತು ರೈಲುಗಳ ಪ್ರಯಾಣ ಸ್ಥಗಿತಗೊಂಡಿತ್ತು.

Scroll to load tweet…

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಪೈಲಟ್‌ಗಳ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.