ಟರ್ಕಿ ನಗರದಲ್ಲಿ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.0 ಕಂಪನ ದಾಖಲಾಗಿದೆ. ನಗರದಲ್ಲಿನ ಬಹುತೇಕ ಕಟ್ಟಡಗಳು ನೆಲಸಮವಾಗಿದೆ.

ಗ್ರೀಸ್ ಐಸ್‌ಲೆಂಡ್(ಅ.30): ಟರ್ಕಿಯ ಗ್ರೀಸ್ ಐಸ್‌ಲೆಂಡ್ ನಗರದಲ್ಲಿ ಸಂಜೆ 5.21ಕ್ಕೆ ತೀವ್ರ ಭೂಕಂಪನ ಸಂಭವಿಸಿದೆ. ರಿಕ್ಪರ್ ಮಾಪನದಲ್ಲಿ 7.0 ತೀವ್ರತೆ ದಾಖಲಾಗಿದೆ. ಹಲವು ಕಟ್ಟಡಗಳು ನೆಲಕ್ಕುರುಳಿದೆ. 

Scroll to load tweet…

ವಿಜಯಪುರ, ಕಲಬುರಗಿಯಲ್ಲಿ ಭೂ ಕಂಪನ : ಕುಸಿದ ಗೋಡೆಗಳು

ಈ ಭೂಕಂಪನವು ಅಥೆನ್ಸ್ ಮತ್ತು ಇಸ್ತಾಂಬುಲ್‌ ನರದದಿಂದ ದೂರದಲ್ಲಿ ನಡೆದಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರದ ಪ್ರಕಾರ ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 7.0 ರಷ್ಟು ನೀಡಿದೆ.

ಹಲವು ಕಟ್ಟಡಗಳು ಧರೆಗುರುಳಿದೆ. ಸಾವು ನೋವಿನ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಈಸ್ಟರ್ನ್ ಸಮೋಸ್‌ನ ಉಪ ಮೇಯರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.