ಟೊಕಿಯೋ(ಫೆ.13):  ಭಾರತದ ಉತ್ತರ ಭಾಗದಲ್ಲಿ ಲಘು ಭೂಕಂಪನ ಹೆಚ್ಚು ಆತಂಕ ತಂದೊಡ್ಡಿತು. ಇದೀಗ ಜಪಾನ್‌‌ನ ಫುಕುಶಿಮಾ ವಲಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಜಪಾನ್ ಭೂಕಂಪ 60 ಕಿ.ಮೀ ವ್ಯಾಪ್ತಿ ಹೊಂದಿದ್ದು, ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದೆ.

BREAKING: ದೆಹಲಿ ಹಾಗೂ ಉತ್ತರ ಭಾರತದಲ್ಲಿ ಭೂಕಂಪ!.

ಜಪಾನ್ ಭೂಕಂಪನಿಂದ ಸುನಾಮಿ ಆತಂಕ ಇಲ್ಲ ಎಂದು ಜಪಾನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೂ ಮುಂಜಾಗ್ರತ ಕ್ರಮವಾಗಿ ಕಡಲ ತೀರದ, ಬಂದರು ತೀರದ ಜರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಸೂಚನೆ ನೀಡಿದ್ದಾರೆ.