ಗೂಳಿ ಕಾಳಗದ ವೇಳೆ ಗೂಳಿ ಕಾಳಗವನ್ನು ನೋಡಲು ನಿರ್ಮಿಸಿದ್ದ ಮೂರಂತಸ್ತಿನ ಪ್ರೇಕ್ಷಕರ ಗ್ಯಾಲರಿ ಕುಸಿದು ನಾಲ್ವರು ಸಾವಿಗೀಡಾಗಿ 300 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಇದ್ದಕ್ಕಿದ್ದಂತೆ ಪ್ರೇಕ್ಷಕರ ಗ್ಯಾಲರಿ ಕುಸಿಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ. 

ಗೂಳಿ ಕಾಳಗದ ವೇಳೆ ಗೂಳಿ ಕಾಳಗವನ್ನು ನೋಡಲು ನಿರ್ಮಿಸಿದ್ದ ಮೂರಂತಸ್ತಿನ ಪ್ರೇಕ್ಷಕರ ಗ್ಯಾಲರಿ ಕುಸಿದು ನಾಲ್ವರು ಸಾವಿಗೀಡಾಗಿ 300 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಇದ್ದಕ್ಕಿದ್ದಂತೆ ಪ್ರೇಕ್ಷಕರ ಗ್ಯಾಲರಿ ಕುಸಿಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ.

ಕೊರಲೆಜೊ ಎಂದು ಕರೆಯಲ್ಪಡುವ ಗೂಳಿ ಕಾಳಗದ ಈ ಜನಪ್ರಿಯ ಕಾರ್ಯಕ್ರಮದ ಸಮಯದಲ್ಲಿ ಡಜನ್‌ಗಟ್ಟಲೆ ಜನರು ಗೂಳಿಯೊಂದಿಗೆ ಮೈದಾನದಲ್ಲಿ ಆಟವಾಡುತ್ತಿದ್ದಾರೆ. ಈ ವೇಳೆ ಒಂದು ಭಾಗದಲ್ಲಿ ಮೂರು ಅಂತಸ್ಥಿನ ಗ್ಯಾಲರಿ ಒಮ್ಮೆಗೆ ಕುಸಿದಿದೆ. ಪರಿಣಾಮ ಇದರಡಿ ನೂರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಿಲುಕಿಕೊಂಡಿದ್ದಾರೆ. 

ಡ್ರೋನ್ ಸೆರೆ ಹಿಡಿದ ಮತ್ತೊಂದು ವಿಡಿಯೋದಲ್ಲಿ ಗೂಳಿಯೂ ಮೈದಾನದಲ್ಲಿ ತಿರುಗಾಡುತ್ತಿದ್ದು, ಜನರು ಅದರ ಹಿಂದೆ ಮುಂದೆ ಸುತ್ತುತ್ತ ಅದನ್ನು ಕೆರಳಿಸುತ್ತಿದ್ದಾರೆ. ಈ ವೇಳೆ ಒಮ್ಮಿಂದೊಮ್ಮೆ ಗ್ಯಾಲರಿ ಕುಸಿದಿದೆ. ಕೂಡಲೇ ಅಲ್ಲಿಗೆ ಧಾವಿಸಿ ಬಂದ ಜನರು ಗ್ಯಾಲರಿಯಡಿ ಸಿಲುಕಿದ ಜನರನ್ನು ಅಲ್ಲಿಂದ ರಕ್ಷಿಸಿ ಮೇಲೆತ್ತಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತಿದೆ. 

ಫೈರ್‌ ಬುಲ್ ಫೆಸ್ಟಿವಲ್‌: ಯುವಕನ ಎತ್ತಿ ಬಿಸಾಕಿದ ಹೋರಿ, ವಿಡಿಯೋ ವೈರಲ್

ಈ ಸಾಂಪ್ರದಾಯಿಕ ಕೊರಲೆಜೊ ಕಾರ್ಯಕ್ರಮವೂ ಗೂಳಿಗಳನ್ನು ಹುಚ್ಚೆಬ್ಬಿಸಲು ಸಾರ್ವಜನಿಕರಿಗೂ ರಿಂಗ್ ಪ್ರವೇಶಿಸಲು ಅವಕಾಶ ನೀಡುತ್ತದೆ. ಬೊಗೋಟಾದಿಂದ (Bogota) ನೈಋತ್ಯಕ್ಕೆ 95 ಮೈಲುಗಳಷ್ಟು ದೂರದಲ್ಲಿರುವ ಎಲ್ ಎಸ್ಪಿನಾಲ್ (El Espinal) ಎಂಬ ಸಣ್ಣ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ. ಪ್ರತಿ ವರ್ಷ ಇಲ್ಲಿನ ಮೇಯರ್ ಕಚೇರಿ ಮತ್ತು ಈ ಪ್ರದೇಶದ ಖಾಸಗಿ ಸಂಸ್ಥೆಗಳು ಜಂಟಿಯಾಗಿ ಜೂನ್ 29 ರಂದು ಸೇಂಟ್ ಪೀಟರ್ ಹಬ್ಬವನ್ನು ಆಚರಿಸಲು ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಕೊಲಂಬಿಯಾ (Colombia) ಸ್ಪ್ಯಾನಿಷ್ ವಸಾಹತುವಾಗಿದ್ದ (Spanish colony) ಸಂದರ್ಭದಲ್ಲಿ ಕೆರಿಬಿಯನ್ ಕರಾವಳಿಯಲ್ಲಿ (Caribbean coast) ಹುಟ್ಟಿಕೊಂಡ ಒಂದು ಚಮತ್ಕಾರದ ಸ್ಮರಣೆಗಾಗಿ ಈ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ವಾಷಿಂಗ್ಟನ್ ಪೋಸ್ಟ್ ಪ್ರಕಾರ ಸ್ಥಳೀಯವಾಗಿ ಬುಲ್ರಿಂಗ್ ಎನ್ನುವ ಈ ಗ್ಯಾಲರಿಯನ್ನು ಬಿದಿರುಗಳಿಂದ ನಿರ್ಮಿಸಲಾಗಿದೆ ಮತ್ತು ಇದರ ಬಹು ಹಂತಗಳು ಪ್ರೇಕ್ಷಕರಿಂದ ತುಂಬಿದ್ದವು. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಾದೇಶಿಕ ನಾಗರಿಕ ರಕ್ಷಣಾ ಸಂಸ್ಥೆಯ ಮುಖ್ಯಸ್ಥರು, ಗಡುವಾ ಬಿದಿರಿನ ರಚನೆಯು ದುರ್ಬಲವಾಗಿದ್ದು, ಈ ರೀತಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸಂಘಟಕರು ಊಹಿಸಬೇಕಿತ್ತು ಎಂದು ಹೇಳಿದರು.

Haveri: ಹೋರಿ ಹಬ್ಬ ವೀಕ್ಷಣೆ ವೇಳೆ ಮಂದಿಯನ್ನು ತಿವಿದ ಹೋರಿ, ಕಂಟ್ರೋಲ್ ತರಲು ಹರಸಾಹಸ

ಇನ್ನೋರ್ವ ನಾಗರಿಕ ರಕ್ಷಣಾ ಅಧಿಕಾರಿ ಲೂಯಿಸ್ ಫೆರ್ನಾಂಡೊ ವೆಲೆಜ್ (Fernando Velez) ಅವರು ಮಾತನಾಡಿ ಇದರ ಅವಶೇಷಗಳಲ್ಲಿ ಇನ್ನೂ ಎಷ್ಟು ಜನರು ಸಮಾಧಿಯಾಗಿದ್ದಾರೆ ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದರು. ಆದಾಗ್ಯೂ, ಈ ಗ್ಯಾಲರಿ ಕುಸಿದಾಗ ಅದು ಜನರಿಂದ ತುಂಬಿತ್ತು ಎಂದು ವೆಲೆಜ್ ಹೇಳಿದರು. ಟೋಲಿಮಾ ಇಲಾಖೆಯ ಗವರ್ನರ್ ಜೋಸ್ ರಿಕಾರ್ಡೊ ಒರೊಜ್ಕೊ ಮಾತನಾಡಿ, ಇಲಾಖಾ ಸರ್ಕಾರವು ಕೊರಲೆಜಾಸ್ (ಗೂಳಿ ಕಾಳಗ) ಅನ್ನು ನಿಷೇಧಿಸಲು ಯೋಚಿಸುತ್ತಿದೆ. ಈ ಘಟನೆ ಅಪಾಯಕಾರಿಯಾಗಿದ್ದು, ಪ್ರಾಣಿ ಹಿಂಸೆಯನ್ನು ಉತ್ತೇಜಿಸುತ್ತಿದೆ ಎಂದು ಅವರು ಹೇಳಿದ್ದಾರೆ. 

ಗೂಳಿ ಕಾಳಗವೂ ತುಂಬಾ ಅಪಾಯಕಾರಿಯಾದ ಕ್ರೀಡೆಯಾಗಿದೆ. ಭಾರತದಲ್ಲೂ ಇದು ಹಲವು ಹೆಸರುಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಆಚರಣೆಯಲ್ಲಿದೆ. ಇದೇ ರೀತಿಯ ಆಟವಾದ ಜಲ್ಲಿಕಟ್ಟು ತಮಿಳುನಾಡು ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಪ್ರಾಣಿ ಹಿಂಸೆ ಹಾಗೂ ಮಾನವರ ಪ್ರಾಣಕ್ಕೂ ಅಪಾಯ ಎದುರಾಗುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಆಟವನ್ನು ನಿಷೇಧಿಸಿದೆ.