ಫೈರ್ ಬುಲ್ ಫೆಸ್ಟಿವಲ್: ಯುವಕನ ಎತ್ತಿ ಬಿಸಾಕಿದ ಹೋರಿ, ವಿಡಿಯೋ ವೈರಲ್
- ಸ್ಪೇನ್‌ನಲ್ಲಿ ನಡೆಯುತ್ತಿದೆ ಜನಪ್ರಿಯ ಫೈರ್‌ಬುಲ್ ಹಬ್ಬ
- ಯುವಕನ ಎತ್ತಿ ಬಿಸಾಕಿದ ಹೋರಿ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸ್ಪೇನ್‌ನಲ್ಲಿ ಜನಪ್ರಿಯ ಫೈರ್‌ಬುಲ್ ಹಬ್ಬ ನಡೆಯುತ್ತಿದ್ದು, ಇದರಲ್ಲಿ ತನ್ನ ಕೊಂಬಿನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಇರಿಸಿಕೊಂಡಿದ್ದ ಹೋರಿಯೊಂದು ತನ್ನ ಮುಂದೆ ಬಂದ ವ್ಯಕ್ತಿಯನ್ನು ಎತ್ತಿ ಬಿಸಾಕಿದೆ. ನಮ್ಮ ದೇಶದಲ್ಲಿ ನಡೆಯುವ ಜಲ್ಲಿಕಟ್ಟು ಹೋರಿ ಬೆದರಿಸುವ ಸ್ಪರ್ಧೆ ಮುಂತಾದ ಅಪಾಯಕಾರಿ ಕ್ರೀಡೆಯಂತೆಯೇ ಸ್ಪೇನ್‌ನಲ್ಲಿ ಫೈರ್ ಬುಲ್ ಫೈಟ್ ಆಯೋಜಿಸುತ್ತಾರೆ. ಇದರಲ್ಲಿ ಹೋರಿಯ ಮುಂದೆ ಮುನ್ನುಗುವ ಜನ ಜೀವವನ್ನು ಅಪಾಯಕ್ಕೊಡಿ ಈ ರೋಚಕ ಕ್ರೀಡೆಯನ್ನು ಆಡುತ್ತಾರೆ.
ಈ ಕ್ರೀಡೆಯಲ್ಲಿ ಸುಮ್ಮನಿರುವ ಹೋರಿಯನ್ನು ರೊಚ್ಚಿಗೇಳಿಸಲಾಗುತ್ತದೆ. ಈ ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ರೊಚ್ಚಿಗೆದ್ದು ದುರುಗುಡುತ್ತಾ ನೋಡುತ್ತಿರುವ ಹೋರಿಯ ಮುಂದೆ ಅದನ್ನು ಕೆಣಕುವಂತೆ ಮುಂದೆ ನೋಡುತ್ತಾನೆ. ಈ ವೇಳೆ ಈಗಾಗಲೇ ರೊಚಿಗೆದ್ದ ಹೋರಿ ಆತನನ್ನು ಬೆನ್ನಟ್ಟಿ ತನ್ನ ಕೊಂಬಿನಿಂದ ತಿವಿದು ಮೇಲಕ್ಕೆಸೆದು ಬಿಡುತ್ತದೆ. ಹೋರಿಯಿಂದ ತಿವಿತಕ್ಕೊಳಗಾದ ವ್ಯಕ್ತಿ ಪ್ರಜ್ಞೆ ತಪ್ಪಿ ಬೀಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.
ಟೊರೊ ಡೆ ಜುಬಿಲೊ ಎಂದು ಕರೆಯಲ್ಪಡುವ ಈ ಫೈರ್ ಬುಲ್ ಹಬ್ಬ ಸ್ಪೇನಿಸ್ ಸಂಪ್ರದಾಯಿಕ ಹಬ್ಬವಾಗಿದ್ದು, 16ನೇ ಶತಮಾನದಿಂದಲೂ ಇದು ನಡೆದುಕೊಂಡು ಬರುತ್ತಿದೆ. ಪ್ರತಿವರ್ಷ ಮಧ್ಯರಾತ್ರಿ ಸ್ಪೇನ್‌ನ ಮೆಡಿನಾಸೆಲಿ ಪ್ರದೇಶದಲ್ಲಿ ಈ ಹಬ್ಬ ನಡೆಯುತ್ತದೆ. ಹೋರಿಯ ಕೊಂಬಿನ ಮೇಲೆ ಬೆಂಕಿ ಹೊತ್ತಿ ಉರಿಯಬಲ್ಲ ಎರಡು ಬಾಲ್‌ಗಳನ್ನು ಅಂಟಿಸಲಾಗುತ್ತದೆ. ಬೆಂಕಿಯಿಂದ ಅದನ್ನು ರಕ್ಷಿಸಲು ಅದರ ಮುಖಕ್ಕೆ ಹಸಿ ಮಣ್ಣನ್ನು ಮೆತ್ತಲಾಗುತ್ತದೆ. ನಂತರ ಒಂದು ಕಡೆ ಕಟ್ಟಿ ಹಾಕಲಾಗುತ್ತದೆ. ನಂತರ ಅದರ ಕೊಂಬಿನಲ್ಲಿರುವ ಬಾಲ್‌ಗೆ ಬೆಂಕಿ ಹಚ್ಚಿ ಹಗ್ಗವನ್ನು ಬಿಚ್ಚಿ ಬಿಡಲಾಗುತ್ತದೆ. ಹೊತ್ತಿ ಉರಿಯುತ್ತಿರುವ ಚೆಂಡು ಕೊಂಬಿನಿಂದ ಜಾರಿ ಹೋಗುವವರೆಗೂ ಈ ಆಟ ನಡೆಯುತ್ತದೆ.
Haveri: ಹೋರಿ ಹಬ್ಬ ವೀಕ್ಷಣೆ ವೇಳೆ ಮಂದಿಯನ್ನು ತಿವಿದ ಹೋರಿ, ಕಂಟ್ರೋಲ್ ತರಲು ಹರಸಾಹಸ
ಎರಡು ಎತ್ತುಗಳ ನಡುವಿನ ಜಗಳ ಬಿಡಿಸಿದ ಗೂಳಿ
ಮಣ್ಣಿನ ರಸ್ತೆಯ ಮೇಲೆ ಭಯಾನಕವಾಗಿ ಕಾದಾಡುತ್ತಿದ್ದ ಎರಡು ಎತ್ತುಗಳ ಕಾದಾಟವನ್ನು ಹೋರಿಯೊಂದು ಮಧ್ಯೆ ಬಂದು ಬಿಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಚಾರ್ಮಿಂಗ್ ಎನಿಮಲ್ಸ್ ಡೈಲಿ(charminganimalsdaily) ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಶಾಂತಿಪಾಲಕ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ವೀಡಿಯೋದಲ್ಲಿ ಎರಡು ಬಿಳಿ ಬಣ್ಣದ ಎತ್ತುಗಳು ಮಣ್ಣಿನ ರಸ್ತೆಯಲ್ಲಿ ತೀವ್ರವಾಗಿ ಕಾದಾಡುವುದನ್ನು ಕಾಣಬಹುದು. ಎರಡು ಕೋಪಗೊಂಡ ಎತ್ತುಗಳು ತಮ್ಮ ಕೊಂಬುಗಳಿಗೆ ಗುದ್ದಿಕೊಳ್ಳುತ್ತಾ ಪರಸ್ಪರ ತಳ್ಳುವುದನ್ನು ಕಾಣಬಹುದು. ಇದೇ ವೇಳೆ ಅಲ್ಲಿಗೆ ಬಂದ ಕಡುಗಪ್ಪು ಬಣ್ಣದ ಗೂಳಿಯೊಂದು ಇವುಗಳ ನಡುವೆ ಬಂದು ಎರಡು ಗೂಳಿಗಳನ್ನು ಬೇರೆ ಬೇರೆ ಮಾಡಿ ಕಾಳಗವನ್ನು ನಿಲ್ಲಿಸುತ್ತದೆ.
ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅವಗಢ; ವ್ಯಕ್ತಿಯನ್ನು ಕಿಮೀಗಟ್ಟಲೆ ಎಳೆದುಕೊಂಡು ಹೋದ ಹೋರಿ
ನಡುರಸ್ತೆಯಲ್ಲಿ ಗೂಳಿಗಳೆರಡು ಗುದ್ದಾಡಿದ ಘಟನೆ ವಿಜಯಪುರದ ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದು, ಈ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಕಪ್ಪು ಹಾಗೂ ಬಿಳಿ ಬಣ್ಣದ ಗೂಳಿಗಳೆರಡು ನಡು ರಸ್ತೆಯಲ್ಲಿ ಮದಗಜಗಳಂತೆ ಕಾದಾಟಕ್ಕೆ ಇಳಿದಿವೆ. ನಿರಂತರ ವಾಹನ ಸಂಚಾರವನ್ನು ಲೆಕ್ಕಿಸದೇ ರಸ್ತೆಯ ಮಧ್ಯದಲ್ಲೇ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಇವುಗಳು ಗುದ್ದಾಡಿವೆ. ಅಲ್ಲದೇ ವಾಹನ ಸವಾರರು ಹಾರ್ನ್ ಮಾಡಿದ್ರೂ, ರಸ್ತೆ ಮೇಲಿಂದ ಗೂಳಿಗಳು ಹಿಂದೆ ಸರಿಯಲು ಸಿದ್ಧರಿರಲಿಲ್ಲ. ಹೀಗಾಗಿ ವಾಹನ ಸವಾರರು ರಸ್ತೆಯನ್ನು ಗೂಳಿಗಳಿಗೆ ಬಿಟ್ಟು ರಸ್ತೆ ಬದಿಯಿಂದ ಸಂಚರಿಸಲು ಶುರು ಮಾಡಿದ್ದಾರೆ. ಇನ್ನು ಈ ಸಹಜವಾಗಿ ನಡೆದ ಗೂಳಿ ಕಾಳಗವನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನ ಸೇರಿದ್ದರು.