Asianet Suvarna News Asianet Suvarna News

ಬುರ್ಖಾ, ಇಸ್ಲಾಮಿಕ್ ಶಾಲೆ ನಿಷೇಧಕ್ಕೆ ಮುಂದಾದ ಲಂಕಾ ಸರ್ಕಾರ!

ಬುರ್ಖಾ ನಿಷೇಧ ಕುರಿತು ಕೆಲ ದೇಶಗಳಲ್ಲಿ ಚರ್ಚೆಯಾಗಿದೆ. ಈ ಕುರಿತು ಪರ ವಿರೋಧಗಳೂ ಇವೆ. ಇದರ ನಡುವೆ ಶ್ರೀಲಂಕಾ ಸರ್ಕಾರ ಬುರ್ಖಾ ಹಾಗೂ ಕೆಲ ಇಸ್ಲಾಮಿಕ್ ಶಾಲೆ ನಿಷೇಧಿಸಲು ಮುಂದಾಗಿದೆ. ಯಾವ ಕಾರಣಕ್ಕೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

Sri Lanka will ban burqa and shut more than a thousand Islamic schools ckm
Author
Bengkulu, First Published Mar 13, 2021, 7:18 PM IST

ಶ್ರೀಲಂಕ(ಮಾ.13): ಭಾರತ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಬುರ್ಖಾ ನಿಷೇಧ ಕುರಿತು ಪರ ವಿರೋಧ ಚರ್ಚೆಗಳಾಗಿವೆ. ಆದರೆ ಶ್ರೀಲಂಕಾ ಸರ್ಕಾರ ಬುರ್ಖಾ ನಿಷೇಧಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಶ್ರೀಲಂಕಾದಲ್ಲಿ ಸಂಪೂರ್ಣವಾಗಿ ಬುರ್ಖಾ ಹಾಗೂ ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್ ಶಾಲೆಗಳನ್ನು ನಿಷೇಧಿಸಲು ಲಂಕಾ ಸರ್ಕಾರ ಮುಂದಾಗಿದೆ.

ಬುರ್ಖಾ ಧರಿಸುವಂತೆ ಒತ್ತಾಯಿಸಿದರೆ 3 ವರ್ಷ ಜೈಲೂಟ!

ದೇಶದ ಭದ್ರತೆಯ ದೃಷ್ಟಿಯಿಂದ ಲಂಕಾದಲ್ಲಿ ಬುರ್ಖಾ ನಿಷೇಧಿಸಲಾಗುತ್ತಿದೆ. ಈ ಕುರಿತ ವಿಧೇಯಕಕ್ಕೆ ಸಹಿ ಹಾಕಿರುವ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಸೇಖರ ಕ್ಯಾಬಿನೆಟ್ ಅನುಮೋದನೆಗೆ ಕಳುಹಿಸಿದ್ದಾರೆ. ಬುರ್ಖಾ ದೇಶದ ಭದ್ರತೆಗೆ ಸವಾಲಾಗಿದೆ. 2019ರಲ್ಲಿನ ಚರ್ಚ್ ಮೇಲಿನ ಉಗ್ರರ ದಾಳಿ ಬಳಿಕ ಲಂಕಾದಲ್ಲಿ ಬುರ್ಖಾ ನಿಷೇಧದ ಕೂಗು ಹೆಚ್ಚಾಗಿತ್ತು. ಈ ದಾಳಿಯಲ್ಲಿ 250 ಮಂದಿ ಮೃತಪಟ್ಟಿದ್ದರು.

ಲಂಕಾ ಶಿಕ್ಷಣ ನೀತಿಯನ್ನು ಉಲ್ಲಂಘಿಸುತ್ತಿರುವ ಇಸ್ಲಾಮಿಕ್ ಮದರಾಸಗಳನ್ನು ಮುಚ್ಚಲು ಶ್ರೀಲಂಕಾ ನಿರ್ಧರಿಸಿದೆ. ಯಾರೂ ಬೇಕಾದರು ಶಾಲೆ ತೆರೆದು ಮಕ್ಕಳಿಗೆ ಏನೂ ಬೇಕಾದರು ಕಲಿಸಲು ಸಾಧ್ಯವಿಲ್ಲ. ಶಿಕ್ಷಣ ನೀತಿಯನ್ನು ಪಾಲಿಸಲೇಬೇಕು ಎಂದು ಶರತ್ ವೀರಸೇಖರ ಹೇಳಿದ್ದಾರೆ. ಲಂಕಾ ಸರ್ಕಾರದ ಈ ನಿರ್ಧಾರಕ್ಕೆ ಇಸ್ಲಾಂ ಸಮುದಾಯದ ವಿರೋಧ ವ್ಯಕ್ತಪಡಿಸಿದೆ.

Follow Us:
Download App:
  • android
  • ios