Asianet Suvarna News Asianet Suvarna News

ಬುರ್ಖಾ ಧರಿಸುವಂತೆ ಒತ್ತಾಯಿಸಿದರೆ 3 ವರ್ಷ ಜೈಲೂಟ!

ಮುಸ್ಲಿಂ ಹೆಣ್ಣುಮಕ್ಕಳಿಗೆ ಬುರ್ಖಾ ಧರಿಸುವಂತೆ ಒತ್ತಾಯಿಸುವಂತಿಲ್ಲ

ಹೊಸ ಕಾನೂನು ಜಾರಿಗೆ ತಂದ ಸ್ವಿಡ್ಜರಲ್ಯಾಂಡ್

ಮುಸ್ಲಿಂ ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾದ ಸ್ವಿಸ್

ಫ್ರಾನ್ಸ್, ಬೆಲ್ಜಿಯಂ, ಸ್ಪೇನ್ ರಾಷ್ಟ್ರಗಳಲ್ಲೂ ಇದೆ ಕಾನೂನು  
 

Switzerland considers making it illegal to force a woman to wear a burqa or niqab

ಜ್ಯೂರಿಚ್(ಜೂ.28): ಮುಸ್ಲಿಂ ಹೆಣ್ಣುಮಕ್ಕಳಿಗೆ ಬುರ್ಖಾ ಧರಿಸುವಂತೆ ಒತ್ತಾಯ ಮಾಡುವಂತಿಲ್ಲ ಎಂಬ ಹೊಸ ಕಾನೂನನ್ನು ಸ್ವಿಡ್ಜರಲ್ಯಾಂಡ್ ಸರ್ಕಾರ ಜಾರಿಗೆ ತಂದಿದೆ. ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು ರಕ್ಷಣೆಗೆ ಈ ಕಾನೂನು ಮಾಡಲಾಗಿದೆ ಎನ್ನಲಾಗಿದೆ.

ಮುಸ್ಲಿಂ ಹೆಣ್ಣುಮಕ್ಕಳಿಗೆ ಬುರ್ಖಾ ಧರಿಸುವಂತೆ ಒತ್ತಾಯ ಮಾಡಿದರೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ನಿಗದಿಗೊಳಿಸಲಾಗಿದೆ. ಬುರ್ಖಾ ಧರಿಸುವುದು ಅಥವಾ ಬಿಡುವುದು ಮುಸ್ಲಿಂ ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯ ಎಂದು ಈ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಮುಸ್ಲಿಂ ಹೆಣ್ಣುಮಕ್ಕಳ ಬುರ್ಖಾ ವಿಷಯಕ್ಕೆ ಸಂಬಂಧಿಸಿದಂತೆ ಫ್ರಾನ್ಸ್, ಬೆಲ್ಜಿಯಂ ಮತ್ತು ಸ್ಪೇನ್ ರಾಷ್ಟ್ರಗಳಲ್ಲೂ ಇಂತದ್ದೇ ಕಾನೂನು ಅಸ್ತಿತ್ವದಲ್ಲಿದ್ದು, ಇದೀಗ ಸ್ವಿಡ್ಜರಲ್ಯಾಂಡ್ ರಾಷ್ಟ್ರ ಕೂಡ ಇದೇ ರೀತಿಯ ಕಾನೂನು ಪಾಸು ಮಾಡಿದೆ.

Follow Us:
Download App:
  • android
  • ios