Asianet Suvarna News Asianet Suvarna News

ರಾವಣನ ಪುಷ್ಪಕ ವಿಮಾನ ನಿಜಕ್ಕೂ ಇತ್ತೆ?: ಶ್ರೀಲಂಕಾದಿಂದ ಅಧ್ಯಯನ!

* 50 ಲಕ್ಷ ರು. ಘೋಷಣೆ ಕೈಜೋಡಿಸಲು ಭಾರತಕ್ಕೂ ಕೋರಿಕೆ

* ರಾವಣನ ಪುಷ್ಪಕ ವಿಮಾನ ನಿಜಕ್ಕೂ ಇತ್ತೆ?: ಶ್ರೀಲಂಕಾದಿಂದ ಅಧ್ಯಯನ!

Sri Lanka to Resume Research on Aviator Ravana India Invited to Join pod
Author
Bangalore, First Published Nov 16, 2021, 9:31 AM IST
  • Facebook
  • Twitter
  • Whatsapp

ಕೊಲಂಬೋ(ನ.16): ರಾಮಾಯಣದಲ್ಲಿ ಲಂಕಾಧಿಪತಿ ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸಿಕೊಂಡು ಹೋಗುವ ಕತೆಯಿದೆ. ಹೀಗಾಗಿ ಜಗತ್ತಿನಲ್ಲಿ ಮೊಟ್ಟಮೊದಲು ವಿಮಾನ ಹಾರಿಸಿದವನು ರಾವಣ ಎಂದು ನಂಬಿರುವ ಶ್ರೀಲಂಕಾ, ಇದೀಗ ಈ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ನಿರ್ಧರಿಸಿದೆ.

ಶ್ರೀಲಂಕಾಕ್ಕೆ ರಾವಣ ರಾಜನಾಗಿದ್ದ ಕಾಲದಲ್ಲಿ ದೇಶದಲ್ಲಿ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳು ಇದ್ದವು ಎಂದು ಲಂಕನ್ನರು ನಂಬುತ್ತಾರೆ. ಇದು ಕೇವಲ ಪುರಾಣದ ಕತೆಯಲ್ಲ, ಇದಕ್ಕೆ ವೈಜ್ಞಾನಿಕ ಆಧಾರಗಳಿರಬಹುದು ಎಂದು ಆ ಸ್ಥಳಗಳ ಹುಡುಕಾಟವೂ ನಡೆದಿದೆ. ಎರಡು ವರ್ಷದ ಹಿಂದೆಯೇ ಈ ಬಗ್ಗೆ ಶ್ರೀಲಂಕಾದಲ್ಲಿ ವಿಮಾನಯಾನ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು, ವಿಜ್ಞಾನಿಗಳು ಹಾಗೂ ಭೂಗರ್ಭಶಾಸ್ತ್ರಜ್ಞರ ಸಮ್ಮೇಳನವೊಂದು ನಡೆದಿತ್ತು. ಆ ಸಮ್ಮೇಳನದಲ್ಲಿ, ‘ರಾವಣನು ಜಗತ್ತಿನಲ್ಲೇ ಮೊದಲು ವಿಮಾನ ಹಾರಿಸಿಕೊಂಡು ಭಾರತಕ್ಕೆ ಹೋಗಿ ಮರಳಿ ಬಂದಿದ್ದ’ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು.

ನಂತರ ಅಂದಿನ ಶ್ರೀಲಂಕಾ ಸರ್ಕಾರವು 50 ಲಕ್ಷ ರು. (ಶ್ರೀಲಂಕಾ ರುಪಾಯಿ) ನೆರವು ನೀಡಿ ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲು ಸೂಚಿಸಿತ್ತು. ಕೋವಿಡ್‌ ಕಾರಣದಿಂದ ಸಂಶೋಧನೆ ನಿಂತುಹೋಗಿತ್ತು. ಅದನ್ನೀಗ ಪುನಾರಂಭಿಸಲು ಹಾಲಿ ಸರ್ಕಾರದ ಅಧ್ಯಕ್ಷ ರಾಜಪಕ್ಸ ಒಲವು ತೋರಿದ್ದು, ಒಂದೆರಡು ತಿಂಗಳಲ್ಲೇ ಸಂಶೋಧನೆ ಶುರುವಾಗಲಿದೆ ಎಂದು ಮೂಲಗಳು ಹೇಳಿವೆ.

ಈ ಸಂಶೋಧನೆಯಲ್ಲಿ ಭಾರತ ಕೂಡ ಕೈಜೋಡಿಸಿ, ಪಾಶ್ಚಾತ್ಯರು ವಿಮಾನ ಕಂಡುಹಿಡಿಯುವುದಕ್ಕಿಂತ ಎಷ್ಟೋ ಶತಮಾನಗಳ ಮೊದಲೇ ಭಾರತ ಮತ್ತು ಶ್ರೀಲಂಕಾದಲ್ಲಿ ವಿಮಾನಗಳು ಇದ್ದವು ಎಂಬುದನ್ನು ಜಗತ್ತಿಗೆ ತೋರಿಸಲು ನೆರವಾಗಬೇಕು ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಸಚಿವಾಲಯದ ಮಾಜಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios