ಕೊಲಂಬೋ[ನ.23]: ಗೋಟಬಯ ರಾಜಪಕ್ಸ ಅವರು ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ಚಿಕ್ಕ ಅಣ್ಣ ಮಹಿಂದಾ ರಾಜಪಕ್ಸರನ್ನು ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದರು. ಇದೀಗ ಇನ್ನೋರ್ವ ದೊಡ್ಡ ಅಣ್ಣ ಚಾಮಲ್‌ ರಾಜಪಕ್ಸರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ವ್ಯಾಪಾರ ಮತ್ತು ಆಹಾರ ಭದ್ರತೆ ಖಾತೆಯಂತಹ ಪ್ರಮುಖ ಖಾತೆ ನೀಡಿದ್ದಾರೆ.

ಶ್ರೀಲಂಕಾ ರಾಜ್ಯಪಾಲರಾಗಿ ಸ್ಪಿನ್ನರ್‌ ಮತ್ತಯ್ಯ ಮುರಳೀಧರನ್‌?

ಅಧ್ಯಕ್ಷರಾದವರು ಯಾವುದೇ ಪ್ರಮುಖ ಖಾತೆಗಳನ್ನು ಹೊಂದಲು ಅವಕಾಶ ಇಲ್ಲದ ಕಾರಣ ಅವರ ಸಹೋದರರಿಗೆ ಖಾತೆಗಳ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಮಹಿಂದಾ ರಾಜಪಕ್ಸ ಪ್ರಧಾನಮಂತ್ರಿ ಹುದ್ದೆ ಅಲ್ಲದೇ ರಕ್ಷಣೆ ಮತ್ತು ಹಣಕಾಸು ಖಾತೆಯನ್ನು ಪಡೆದುಕೊಂಡಿದ್ದಾರೆ.

16 ಸಚಿವರ ಮಧ್ಯಂತರ ಸಂಪುಟ ರಚನೆ ಮಾಡಲಾಗಿದ್ದು, ಇದರಲ್ಲಿ ಭಾರತದ ತಮಿಳುನಾಡು ಮೂಲದ ಮಾರ್ಕ್ಸ್‌ವಾದಿ ರಾಜಕಾರಣಿ ದಿನೇಶ್‌ ಗುಣವರ್ಧನ ಅವರು ಸ್ಥಾನ ಪಡೆದಿದ್ದಾರೆ. ಇವರಿಗೆ ವಿದೇಶಾಂಗ ಖಾತೆ ನೀಡಲಾಗಿದೆ.

ಮಹಿಂದ ರಾಜಪಕ್ಸ ಸೋದರ ಲಂಕಾಧಿಪತಿ!