ಸಿಡ್ನಿ (ನ.  22)   ಈ ಸುದ್ದಿ ಬರೆಯುವ ಮುನ್ನ ಎಚ್ಚರ ಎಂದು ಹೇಳಲೇಬೇಕು. ಸಿಡ್ನಿಯ ಪ್ರಸಿದ್ಧ ಪ್ರವಾಸಿ ತಾಣದಲ್ಲಿಯೇ ಅವಘಡ ಸಂಭವಿಸಿದೆ.

ಶಾರ್ಕ್ ಒಂದು ಕಚ್ಚಿ ಪ್ರವಾಸಿಗ ಮೃತಪಟ್ಟಿದ್ದಾನೆ.  ಸಿಡ್ನಿಯ ಕೇಬಲ್ ಬೀಚ್ ನಲ್ಲಿ ಅವಘಡ ಸಂಭವಿಸಿದೆ.  ವ್ಯಕ್ತಿಯ ರಕ್ಷಣೆ ಮಾಡಲು ಧಾವಿಸಲಾಯಿತಾದರೂ ಪ್ರಯೋಜನ ಆಗಲಿಲ್ಲ.

ಶಾರ್ಕ್ ಬಾಯಿಂದ ಮಗಳ ರಕ್ಷಿಸಿದ ಅಪ್ಪ

ಶಾರ್ಕ್ ದಾಳಿಗೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ನೀರಿನಿಂದ ಹೊರಗೆ ತೆಗೆದು ಪ್ರಾಥಮಿಕ ಚಿಕಿತ್ಸೆ ಕೊಡುವ ಯತ್ನ ಮಾಡಿದರೂ ಫಲಪ್ರದವಾಗಲಿಲ್ಲ. ಶಾರ್ಕ್ ಗಳು ಈ ರೀತಿ ದಾಳಿ ಮಾಡುವುದು ತುಂಬಾ ಅಪರೂಪ.   ಆದರೆ ಕೇಬಲ್ ಬೀಚ್ ನಲ್ಲಿ ವರ್ಷದಲ್ಲಿ ಒಂದೆರಡು ಇಂಥ ಘಟನೆಗಳು ವರದಿಯಾಗುತ್ತವೆ.

ಒಂದೇ ಸಂದರ್ಭದಲ್ಲಿ 22 ಶಾರ್ಕ್ ಗಳು ದಂಡೆಯ ಕಡೆ ಬಂದಿದ್ದವು ಎನ್ನಲಾಗಿದೆ. ಆಸ್ಟ್ರೇಲಿಯಾ ಸಮುದ್ರ ದಂಡೆಯಲ್ಲಿ ಈ ಸಾವಿನೊಂದಿಗೆ ಈ ವರ್ಷ ಎಂಟನೇ ವ್ಯಕ್ತಿ ಶಾರ್ಕ್ ಗೆ ಬಲಿಯಾದಂತೆ ಆಗಿದೆ.