ಸ್ಪೇನ್ ಮೆಟ್ರೋ ನಿಲ್ದಾಣದಲ್ಲಿ ಸ್ಪಾನಿಷ್ ಮಹಿಳೆ ಗಾಯತ್ರಿ ಮಂತ್ರ ಪಠಿಸಿದ ಎಲ್ಲರ ಗಮನಸೆಳೆದಿದ್ದಾರೆ. ಗಾಯತ್ರಿ ಮಂತ್ರವನ್ನು ಸಂಪೂರ್ಣವಾಗಿ ಮಾತ್ರವಲ್ಲ ಸ್ವಚ್ಚ ಉಚ್ಚಾರದ ಮೂಲಕ  ಪಠಿಸಿದ್ದಾರೆ. ಈ ವಿಡಿಯೋ ಇಲ್ಲಿದೆ.

ಸ್ಪೇನ್(ಏ.12) ಭಾರತೀಯ ಸಂಸ್ಕೃತಿ, ಭಾರತದ ಪದ್ಧತಿ, ಆಹಾರ, ಉಡುಗೆ ತೊಡುಗೆ ಸೇರಿದಂತೆ ಹಲವು ವಿಚಾರಗಳು ವಿದೇಶಿಗರು ಅನುಸರಿಸಿದ ಊದಾಹರಣೆಗಳಿವೆ. ಸಂಸ್ಕೃತ ಶ್ಲೋಕಾ, ಗಾಯತ್ರಿ ಮಂತ್ರ, ಹನುಮಾನ ಚಾಲೀಸ ಪಠಿಸಿ ಭಾರತೀಯರನ್ನೇ ಅಚ್ಚರಿಸಿಗೊಳಿಸಿದ ಹಲವು ಘಟನೆಗಳಿವೆ. ಇದೀಗ ಸ್ಪೇನ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಗಾಯತ್ರಿ ಮಂತ್ರ ಪಠಿಸುತ್ತಿರುವ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಸ್ಪಾನಿಷ್ ಮಹಿಳೆ ಸ್ಪಷ್ಚ ಉಚ್ಚಾರಗಳಲ್ಲಿ ಗಾಯತ್ರಿ ಮಂತ್ರವನ್ನು ಸಂಪೂರ್ಣವಾಗಿ ಪಠಿಸಿದ್ದಾರೆ. ಸ್ಪೇನ್‌ನಲ್ಲಿ ಮೆಟ್ರೋ ಸಾಗುತ್ತಿದ್ದ ಭಾರತೀಯೊರೊಬ್ಬರು ಈ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.

ಎಂದಿನಂತೆ ಜನರು ಸ್ಪಾನಿಶ್‌ನ ಒಂದು ಮೆಟ್ರೋ ರೈಲು ಹತ್ತಿ ಪ್ರಯಾಣ ಮಾಡಲು ತೆರಳುತ್ತಿದ್ದರು. ಹಲವರು ಮೆಟ್ರೋ ರೈಲು ಸಮಯಕ್ಕೆ ಸರಿಯಾಗಿ ಹತ್ತಿ ನಿಗಧಿತ ಸಮಯಕ್ಕೆ ತಲುಪುವು ಧಾವಂತ. ಹೀಗಾಗಿ ಜನರು ವೇಗವಾಗಿ ತೆರಳುತ್ತಿದ್ದಾರೆ. ಯಾರಿಗೂ ಹೆಚ್ಚಿನ ಸಮಯವಿಲ್ಲ. ಹಿರಿಯ ಮಹಿಳೆಯೊಬ್ಬರು ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಒಳಗೆ ಸಾಗುವ ದಾರಿಯಲ್ಲಿ ನಿಂತಿದ್ದಾರೆ. ಇಷ್ಟೇ ಅಲ್ಲ ಮೈಕ್ ಹಿಡಿದು ಯಾವುದೋ ಸ್ಪಾನಿಷ್ ಹಾಡು ಅಥವಾ ಹಾಲಿವುಡ್ ಹಾಡು ಹಾಡುತ್ತಿಲ್ಲ. ಇದರ ಬದಲಾಗಿ ಸ್ಪೇನ್ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ನಿಂತ ಮಹಿಳೆ ಗಾಯತ್ರಿ ಮಂತ್ರ ಹಾಡಿದ್ದಾರೆ.

ಕಿಸ್ಸಿಂಗ್ ಮಾಡ್ತಿದ್ದ ಜೋಡಿಯ ಮಾನ-ಮರ್ಯಾದೆ ಕಳೆದ ಮೆಟ್ರೋ ಸಿಬ್ಬಂದಿ; ವಿಡಿಯೋ ನೋಡಿ

ಹಲವು ಪ್ರಯಾಣಿಕರನ್ನು ಮಹಿಳೆಯ ಗಾಯತ್ರಿ ಮಂತ್ರ ಅಚ್ಚರಿಗೊಳಿಸಿದೆ. ಸ್ಪಾನಿಷ್ ಸೇರಿದಂತೆ ಕೆಲ ದೇಶಗಳ ಜನರಿಗೆ ಹಿರಿಯ ಮಹಿಳೆ ಹಾಡುತ್ತಿರುವುದು ಅರ್ಥವಾಗಿಲ್ಲ. ಆದರೆ ಭಾರತೀಯರಿಗೆ ಅಚ್ಚರಿಯಾಗಿದೆ. ಗಾಯತ್ರಿ ಮಂತ್ರ ಪಠಣ ಕೇಳಿ ಅಲ್ಲೆ ನಿಂತಿದ್ದಾರೆ. ಕೆಲವರು ವಿಡಿಯೋ ಮಾಡಿದ್ದಾರೆ. ವಿಶೇಷ ಅಂದರೆ ಈ ಸ್ಪಾನಿಷ್ ಮಹಿಳೆ ಗಾಯತ್ರಿ ಮಂತ್ರ ಹಾಡಲು ಯಾವುದೇ ನೋಟ್ಸ್ ಇಟ್ಟುಕೊಂಡಿಲ್ಲ. ಸಂಪೂರ್ಣ ಕಂಠಪಾಠದ ಮೂಲಕ ಹಾಡಿದ್ದಾರೆ.

Scroll to load tweet…

ಈ ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಭಾರತೀಯರು ಈ ವಿಡಿಯೋ ಕುರಿತು ವಿವರಣೆ ನೀಡಿದ್ದಾರೆ. ಗಾಯತ್ರಿ ಮಂತ್ರದ ಅರ್ಥ, ವಿವರಣೆ ನೀಡಿದ್ದಾರೆ. ಇದೇ ವೇಳೆ ಕೆಲವರು ಭಾರತೀಯರು ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ.ಬಹುತೇಕರಿಗೆ ಈಗ ಗಾಯತ್ರಿ ಬರುವುದಿಲ್ಲ, ಹನುಮಾನ ಚಾಲೀಸಾ ಗೊತ್ತಿಲ್ಲ. ಅಲ್ಲಿ ಇಲ್ಲಿ ಕೇಳಿರುತ್ತಾರೆ ಹೊರತು ಯಾರ ಮನೆಯಲ್ಲೂ ಪಠನೆ ಕಡಿಮೆ. ಆದರೆ ವಿದೇಶಿಗರು ಇದೀಗ ಭಾರತೀಯ ಸಂಸ್ಕೃತಿ ಅನುಸರಿಸುತ್ತಿದ್ದಾರೆ ಎಂದು ಕಮೆಂಟ್ಸ್ ಮಾಡಿದ್ದಾರೆ.

Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!