ಕೆಳಗಿಳಿಯುವ ರಾಕೆಟ್ ಬೂಸ್ಟರ್ ‘ಕ್ಯಾಚ್’ ಮಾಡಿದ ಸ್ಪೇಸ್‌ಎಕ್ಸ್!
ತಾನೇ ಹಾರಿಸಿದ ರಾಕೆಟ್ ಬೂಸ್ಟರ್, ಉಡಾವಣೆಗೊಂಡ 7 ನಿಮಿಷಗಳ ನಂತರ ಭೂಮಿಗೆ ಮರಳಿದ್ದು, ಅದನ್ನು ಈ ಹಿಂದಿನಂತೆ ಜಲ ಪ್ರದೇಶದಲ್ಲಿ ಅಥವಾ ಸಮುದ್ರದಲ್ಲಿ ಬೀಳಿಸದೇ ಲಾಂಚ್ ಪ್ಯಾಡ್‌ನ ಟವರ್‌ನಲ್ಲಿದ್ದ ಯಾಂತ್ರಿಕ ತೋಳುಗಳ ಮೂಲಕ ‘ಕ್ಯಾಚ್’ ಮಾಡಿದೆ.
ಬೋಕಾ ಚಿಕಾ (ಅಮೆರಿಕ) (ಅ.14): ಅಪರೂಪದ ಎಂಜಿನಿಯರಿಂಗ್ ಸಾಧನೆಯೊಂದರಲ್ಲಿ ಭೂಮಿಗೆ ಮರಳಿದ ‘ಸ್ಟಾರ್‌ಶಿಪ್ ರಾಕೆಟ್ ಬೂಸ್ಟರ್’ ಅನ್ನು ಎಲಾನ್ ಮಸ್ಕ್ ಒಡೆತನದ ‘ಸ್ಪೇಸ್‌ಎಕ್ಸ್’ ಕಂಪನಿ ಯಶಸ್ವಿಯಾಗಿ ಭಾನುವಾರ ‘ಕ್ಯಾಚ್’ ಮಾಡಿದೆ. ಗಲ್ಫ್ ಆಫ್ ಮೆಕ್ಸಿಕೋ ಬಳಿ ಭಾನುವಾರ ಪ್ರಯೋಗಾರ್ಥವಾಗಿ ಈ ಪರೀಕ್ಷೆ ನಡೆದಿದ್ದು, ಅದ್ಭುತ ಸಾಧನೆ ಎಂದು ಬಣ್ಣಿಸಲಾಗಿದೆ.
ಸ್ಪೇಸ್‌ಎಕ್ಸ್ ತನ್ನದೇ ಲಾಂಚ್ ಪ್ಯಾಡ್‌ನಲ್ಲಿ ‘ಯಾಂತ್ರಿಕ ತೋಳಿನ’ ಟವರ್ ನಿರ್ಮಿಸಿತ್ತು. ತಾನೇ ಹಾರಿಸಿದ ರಾಕೆಟ್ ಬೂಸ್ಟರ್, ಉಡಾವಣೆಗೊಂಡ 7 ನಿಮಿಷಗಳ ನಂತರ ಭೂಮಿಗೆ ಮರಳಿದ್ದು, ಅದನ್ನು ಈ ಹಿಂದಿನಂತೆ ಜಲ ಪ್ರದೇಶದಲ್ಲಿ ಅಥವಾ ಸಮುದ್ರದಲ್ಲಿ ಬೀಳಿಸದೇ ಲಾಂಚ್ ಪ್ಯಾಡ್‌ನ ಟವರ್‌ನಲ್ಲಿದ್ದ ಯಾಂತ್ರಿಕ ತೋಳುಗಳ ಮೂಲಕ ‘ಕ್ಯಾಚ್’ ಮಾಡಿದೆ.
ತಿರುಪತಿ ಮಾದರಿಯಲ್ಲಿ ಸವದತ್ತಿ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ
‘ಇದೊಂದು ಅದ್ಭುತ ಸಾಧನೆ. ಕಂಪನಿಯು ರಾಕೆಟ್ ಬೂಸ್ಟರ್ ಅನ್ನು ಸಾಗರಗಳಲ್ಲಿ ಅಥವಾ ನೀರಿನ ಪ್ರದೇಶದಲ್ಲಿ ಇಳಿಸುವ ಬದಲು ಲಾಂಚ್ ಪ್ಯಾಡ್‌ನಲ್ಲಿಯೇ ಮರಳಿ ಪಡೆದಿದ್ದು ಇದೇ ಮೊದಲು. ಇದು ಭವಿಷ್ಯದ ಉಡ್ಡಯನಕ್ಕೆ ಮಾದರಿ’ ಎಂದು ಎಲಾನ್ ಮಸ್ಕ್ ಹರ್ಷಿಸಿದ್ದಾರೆ.