Asianet Suvarna News Asianet Suvarna News

ರಕ್ತಪಾತವಿಲ್ಲದೆ ಶೀತಲ ಸಮರ ಮುಕ್ತಾಯ ಮಾಡಿದ್ದ ಸೋವಿಯತ್ ಮಾಜಿ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ನಿಧನ

ಒಂದು ಹನಿ ರಕ್ತ ಚೆಲ್ಲದೆ ಶೀತಲ ಸಮರವನ್ನು ಅಂತ್ಯ ಮಾಡಿದ್ದ ನಾಯಕ, ಆಧುನಿಕ ಜಗತ್ತು ಕಂಡ ಅತ್ಯಂತ ಘೋರ ಅಣುದುರಂತ ಚರ್ನೋಬಿಲ್‌ ಘಟನೆಯ ವೇಳೆ ಸೋವಿಯತ್‌ ಒಕ್ಕೂಟದ ನಾಯಕರಾಗಿದ್ದ ಮಿಖಾಯಿಲ್‌ ಗೋರ್ಬಚೇವ್‌ ಮಂಗಳವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
 

Soviet leader Mikhail Gorbachev passed away played a key role in ending the Cold War san
Author
First Published Aug 31, 2022, 10:31 AM IST

ಮಾಸ್ಕೋ (ಆ. 31): ಮಾಜಿ ಸೋವಿಯತ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಮಂಗಳವಾರ ತಮ್ಮ 91 ವರ್ಷದಲ್ಲಿ ನಿಧನರಾದರು. ಗೋರ್ಬಚೇವ್ ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಒಂದು ಹನಿ ರಕ್ಯ ಚೆಲ್ಲದೆ, ಶೀತಲ ಸಮರವನ್ನು ಕೊನೆ ಮಾಡಿದ ನಾಯಕ ಎನಿಸಿಕೊಂಡಿದ್ದ ಗೋರ್ಬಚೇವ್‌, 20ನೇ ಶತಮಾನದ ಮಹಾನ್‌ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ್ದರು. ಹೀಗಿದ್ದರೂ, ಅವರು ಸೋವಿಯತ್‌ ಒಕ್ಕೂಟದ ಪತನವನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಮಿಖಾಯಿಲ್‌ ಗೋರ್ಬಚೇವ್ ಸೋವಿಯತ್‌ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿದ್ದರು. ಮಾಸ್ಕೋದಲ್ಲು ಗೋರ್ಬಚೇವ್ ನಿಧರಾಗಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ಮಂಗಳವಾರ ಘೋಷಣೆ ಮಾಡಿವೆ.  ಗೋರ್ಬಚೇವ್ ಮಾಸ್ಕೋದ ಕೇಂದ್ರ ಆಸ್ಪತ್ರೆಯಲ್ಲಿ "ಗಂಭೀರ ಮತ್ತು ದೀರ್ಘಕಾಲದ ಅನಾರೋಗ್ಯದ' ಕಾರಣದಿಂದಾಗಿ ಅಸುನೀಗಿದರು ಎಂದು ವರದಿ ಮಾಡಿವೆ. ಗೋರ್ಬಚೇವ್, 1985 ಮತ್ತು 1991 ರ ನಡುವೆ ಅಧಿಕಾರದಲ್ಲಿದ್ದರು, ಯುಎಸ್-ಸೋವಿಯತ್ ಸಂಬಂಧಗಳನ್ನು ಬಿರುಕು ಮೂಡುವುದನ್ನು ತಡೆಯಲು ಸಹಾಯ ಮಾಡಿದ ನಾಯಕರಾಗಿ ಮಿಖಾಯಿಲ್ ಗೋರ್ಬಚೇವ್ ಹೆಸರು ಮಾಡಿದ್ದರು. ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದ ಇವರ ಹಲವಾರು ಸುಧಾರಣೆಗಳು ದೇಶವನ್ನು ಪರಿವರ್ತನೆ ಮಾಡಿದವು ಮತ್ತು  ಪೂರ್ವ ಯುರೋಪ್ ಸೋವಿಯತ್ ಆಳ್ವಿಕೆಯಿಂದ ಮುಕ್ತವಾಗಲು ಅವಕಾಶ ಮಾಡಿಕೊಟ್ಟಿತು.


ಸೋವಿಯತ್ ಒಕ್ಕೂಟದ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದ ಗೋರ್ಬಚೇವ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನೂ ನೀಡಲಾಯಿತು. ಅವರ ನಿಧನಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ.

ಸೋವಿಯತ್ ಒಕ್ಕೂಟದ ಕುಸಿತವು ಒಂದು ದುರಂತ, ಗೋರ್ಬಚೇವ್ ಅದಕ್ಕೆ ಕಾರಣ: ಇನ್ನೊಂದೆಡೆ ಇಡೀ ಸೋವಿಯತ್‌ ಒಕ್ಕೂಟ ಕುಸಿತವಾಗಲು ಗೋರ್ಬಚೇವ್ ಅವರೇ ಕಾರಣ ಎನ್ನುವುದು ಹಾಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಾದ. ಹಾಗಾಗಿ ಮಿಖಾಯಿಲ್ ಗೋರ್ಬಚೇವ್ ಅವರೊಂದಿಗನ ಸಂಬಂಧ ಕೂಡ ಉತ್ತಮವಾಗಿರಲಿಲ್ಲ. ಪುಟಿನ್ ಸೋವಿಯತ್ ಒಕ್ಕೂಟದ ಕುಸಿತವನ್ನು ದುರಂತವೆಂದು ಪರಿಗಣಿಸಿದ್ದಾರೆ. ಗೋರ್ಬಚೇವ್ ಅವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಿದ್ದರು. ಸೋವಿಯತ್ ಒಕ್ಕೂಟದ ಪತನದ ನಂತರ ರಷ್ಯಾ ದುರ್ಬಲಗೊಂಡಿತು ಮತ್ತು ಅದರ ಆರ್ಥಿಕತೆಯು ಕುಸಿಯಿತು ಎಂದು ಪುಟಿನ್ ಜೊತೆಗೆ ರಷ್ಯಾದ ಅನೇಕ ನಾಯಕರು ನಂಬುತ್ತಾರೆ. ಈ ಸಮಯದಲ್ಲಿ ರಷ್ಯಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
 

ವಿಶ್ವ ನಾಯಕರ ಕಂಬನಿ

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ (British Prime Minister Boris Johnson): ಮಿಖಾಯಿಲ್ ಗೋರ್ಬಚೇವ್ ಅವರ ಸಾವಿನ ಸುದ್ದಿ ಕೇಳಿ ನನಗೆ ದುಃಖವಾಗಿದೆ. ಶೀತಲ ಸಮರವನ್ನು ಕೊನೆಗೊಳಿಸಲು ಅವರು ಪ್ರದರ್ಶಿಸಿದ ಧೈರ್ಯ ಮತ್ತು ಪ್ರಾಮಾಣಿಕತೆ ಶ್ಲಾಘನೀಯ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (French President Emmanuel Macron ): ಮಿಖಾಯಿಲ್ ಗೋರ್ಬಚೇವ್  'ಶಾಂತಿಯ ಮನುಷ್ಯ'.  ಮಿಖಾಯಿಲ್ ರಷ್ಯನ್ನರಿಗೆ ಸ್ವಾತಂತ್ರ್ಯದ ಮಾರ್ಗವನ್ನು ತೋರಿಸಿದರು. ಯುರೋಪ್‌ನಲ್ಲಿ ಶಾಂತಿಗಾಗಿ ಅವರ ಬದ್ಧತೆ ನಮ್ಮ ಇತಿಹಾಸವನ್ನು ಬದಲಾಯಿಸಿತು.

Russia Ukraine Crisis: ಪುಟಿನ್‌ ಅಂತಿಮವಾಗಿ ಸಾಧಿಸಲು ಹೊರಟಿರುವುದು ಏನನ್ನು?

ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರಸ್(UN chief Antonio Guterres ) : ಗೋರ್ಬಚೇವ್ ಇತಿಹಾಸವನ್ನು ಬದಲಿಸಿದ ರಾಜಕಾರಣಿ. ಶೀತಲ ಸಮರವನ್ನು ಶಾಂತಿಯುತವಾಗಿ ಕೊನೆಗೊಳಿಸಿದ್ದಕ್ಕಾಗಿ ಅವರನ್ನು ಪ್ರಶಂಸಿಸಬೇಕಾಗಿದೆ.

ರಷ್ಯಾ ಅಧ್ಯಕ್ಷರಿಗೆ ಭಾರತದಿಂದ ಭರ್ಜರಿ ಉಡುಗೊರೆ

ಅಮೆರಿಕದ ನಾಯಕ ಮತ್ತು ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ (Arnold Schwarzenegger ): ಮಿಖಾಯಿಲ್ ಗೋರ್ಬಚೇವ್ ಅವರ ಸಾವಿನ ಬಗ್ಗೆ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ದುಃಖ ವ್ಯಕ್ತಪಡಿಸಿದ್ದಾರೆ, ಅವರೊಂದಿಗಿನ ತಮ್ಮ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. 'ಹಳೆಯ ಮಾತಿದೆ, ನಿಮ್ಮ ನಾಯಕರನ್ನು ಎಂದಿಗೂ ಭೇಟಿಯಾಗಬೇಡಿ. ಇದು ನಾನು ಕೇಳಿದ ಕೆಟ್ಟ ಸಲಹೆ ಎಂದು ನಾನು ಭಾವಿಸುತ್ತೇನೆ. ಮಿಖಾಯಿಲ್ ಗೋರ್ಬಚೇವ್ ನನ್ನ ನಾಯಕ. ಅವರನ್ನು ಭೇಟಿಯಾಗುವುದು ಗೌರವ ಮತ್ತು ಸಂತೋಷವಾಗಿತ್ತು ಎಂದು ಬರೆದಿದ್ದಾರೆ.

Follow Us:
Download App:
  • android
  • ios