ಕೊರಿಯಾ ವಿಮಾನ ಪತನಕ್ಕೆ ಕಾರಣವಾಯ್ತಾ ಬೆಲ್ಲಿ ಲ್ಯಾಂಡಿಂಗ್? ಏನಿದು ತುರ್ತು ಭೂಸ್ಪರ್ಶ?
ಸೌತ್ ಕೊರಿಯಾ ವಿಮಾನ ಪತನದಲ್ಲಿ 179 ಪ್ರಯಾಣಿಕರು ಮೃತಪಟ್ಟರೆ, ಇಬ್ಬರು ಬದುಕುಳಿದಿದ್ದಾರೆ. ಈ ವಿಮಾನ ಪತನಕ್ಕೆ ಸ್ಪಷ್ಟ ಕಾರಣವೇನು? ಬೆಲ್ಲಿ ಲ್ಯಾಂಡಿಂಗ್‌ನಿಂದ ಅವಘಡ ಸಂಭವಿಸಿತಾ? ಏನಿದು ಬೆಲ್ಲಿ ಲ್ಯಾಂಡಿಂಗ್?
ಮುವಾನ್(ಡಿ.29) ಕಜಕಿಸ್ತಾನದಲ್ಲಿ ವಿಮಾನ ಪತನಗೊಂಡ ಬೆನ್ನಲ್ಲೇ ಇತ್ತ ದಕ್ಷಿಣ ಕೊರಿಯಾದಲ್ಲಿ 181 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ ತೀವ್ರ ಸಾವು ನೋವಿಗೆ ಕಾರಣವಾಗಿದೆ. 179 ಮಂದಿ ಮೃತಪಟ್ಟಿದ್ದರೆ, ಇಬ್ಬರು ಬದುಕುಳಿದಿದ್ದಾರೆ. ವಿಮಾನ ದುರಂತದ ತನಿಖೆ ಚುರುಕುಗೊಂಡಿದೆ. ಇದೀಗ ಒಂದೊಂದು ಮಾಹಿತಿಗಳು ಹೊರಬರುತ್ತಿದೆ. ಪ್ರಮುಖವಾಗಿ ವಿಮಾನ ಬೆಲ್ಲಿ ಲ್ಯಾಂಡಿಂಗ್‌ಗೆ ಸೂಚನೆ ನೀಡಲಾಗಿತ್ತು. ಆದರೆ ಬೆಲ್ಲಿ ಲ್ಯಾಂಡಿಂಗ್ ಸಮಪರ್ಕವಾಗಿ ಮಾಡಲು ಪೈಲೆಟ್‌ಗೆ ಸಾಧ್ಯವಾಗಿಲ್ಲ ಅನ್ನೋ ಮಾಹಿತಿಯೂ ಹೊರಬಿದ್ದಿದೆ.
ಸೌತ್ ಕೊರಿಯಾದ ಜೆಜು ಏರ್‌ಫ್ಲೈಟ್ 7C2216 ಥಾಯ್ಲೆಂಡ್‌ನ ಬ್ಯಾಂಗ್‌ಕಾಕ್‌ನಿಂದ ಸೌತ್ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿತ್ತು. ವುಮಾನ್ ತಲುಪುತ್ತಿದ್ದಂತೆ ವಿಮಾನಕ್ಕೆ ಆಗಸದಲ್ಲಿ ಹಕ್ಕಿಯೊಂದು ಡಿಕ್ಕಿಯಾಗಿದೆ. ಇದು ವಿಮಾನಕ್ಕೆ ತೀವ್ರವಾದ ಹಾನಿಯನ್ನುಂಟು ಮಾಡಿತ್ತು. ಇತ್ತ ಹವಾಮಾನ ಕೂಡ ಸೂಕ್ತವಾಗಿರಲಿಲ್ಲ. ಹಕ್ಕಿ ಬಡಿದ ಕಾರಣ ವಿಮಾನದ ಎಂಜಿನ್‌ಗೂ ಹಾನಿಯಾಗಿದೆ. ವಿಮಾನದ ಎಂಜಿನ್ ಹಾನಿಯಾದ ಕಾರಣ ಲ್ಯಾಂಡಿಂಗ್ ಗೇರ್ ಸೇರಿದಂತೆ ಇತರ ಕೆಲ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದೆ.
South Korea Plane Crash: 181ರಲ್ಲಿ 179 ಜನರ ಸಾವು, ಆ ಇಬ್ಬರು ಬದುಕಿದ್ದೇಗೆ? ಪೈಲಟ್ ತಪ್ಪು ಮಾಡಿದ್ದೆಲ್ಲಿ?
ಇನ್ನೇನು ಲ್ಯಾಂಡಿಂಗ್ ಆಗಲು ಕೆಲವೇ ಹೊತ್ತಲ್ಲಿ ಹಕ್ಕಿ ಡಿಕ್ಕಿಯಾದ ಕಾರಣ ಅನಾಹುತ ಸಂಭವಿಸಿದೆ. ತಕ್ಷಣವೇ ಪೈಲೆಟ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾನೆ. ಬಳಿಕ ಮೇಡೆ ಘೋಷಿಸಿದ್ದಾನೆ. ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದ ಪೈಲೆಟ್ ತುರ್ತಾಗಿ ಬೆಲ್ಲಿ ಲ್ಯಾಂಡಿಂಗ್ ಮಾಡಲು ಮುಂದಾಗಿದ್ದಾನೆ. ಆದರೆ ಬೆಲ್ಲಿ ಲ್ಯಾಂಡಿಂಗ್ ಅನುಭವ ಅಥವಾ ಸಮರ್ಪಕವಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿಲ್ಲ.
ವಿಮಾನ ಭೂ ಸ್ಪರ್ಶ ಮಾಡಿದ ಬೆನ್ನಲ್ಲೇ ವೇಗ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ರನ್‌ವೈನಲ್ಲಿ ವಿಮಾನ ವೇಗವಾಗಿ ಸಾಗಿತು. ರನ್ ಮುಗಿದರೂ ವಿಮಾನದ ವೇಗ ಕಡಿಮೆಯಾಗಲಿಲ್ಲ. ಹೀಗಾಗಿ ಕೌಂಪೌಂಡ್‌ಗೆ ವಿಮಾನ ಡಿಕ್ಕಿಯಾಗಿ ಸ್ಫೋಟಿಸಿದೆ. ಈ ಭೀಕರ ಅಫಘಾತದ 179 ಮಂದಿಯನ್ನು ಬಲಿತೆಗೆದುಕೊಂಡಿದೆ.
ಏನಿದು ಬೆಲ್ಲಿ ಲ್ಯಾಂಡಿಂಗ್
ಬೆಲ್ಲಿ ಲ್ಯಾಂಡಿಂಗ್ ತುರ್ತು ಸಂದರ್ಭದಲ್ಲಿ ವಿಮಾನ ಭೂಸ್ಪರ್ಶ ಮಾಡಲು ಬಳಸುವ ವಿಧಾನವಾಗಿದೆ. ಪ್ರಮುಖವಾಗಿ ವಿಮಾನದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಾಗ ಅಥವಾ ಲ್ಯಾಂಡಿಂಗ್ ಗೇರ್ ಸಮಸ್ಯೆಗಳು ಕಂಡು ಬಂದಾಗ ವಿಮಾನ ಇಳಿಸಲು ಇರುವ ತುರ್ತು ಮಾರ್ಗವಾಗಿದೆ. ಬೆಲ್ಲಿ ಲ್ಯಾಂಡಿಂಗ್ ಮೂಲಕ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಿದೆ. ವಿಮಾನ ಹಿಂಭಾಗ ಅಂದರೆ ಬೆಲ್ಲಿ ಭಾಗದ ಮೂಲಕ ಲ್ಯಾಂಡಿಂಗ್ ಮಾಡಲಾಗುತ್ತದೆ. ಆದರೆ ಒಂದು ಸಣ್ಣ ತಪ್ಪು, ಅನುಭವ ಕೊರತೆ, ಸವಾಲು ಎದುರಿಸುವಾಗ ಆತಂಕಗೊಂಡರೆ ಅಪಾಯ ಹೆಚ್ಚು. ಇದೀಗ ಕೊರಿಯಾದಲ್ಲಿ ಆಗಿರುವುದು ಇದರಲ್ಲಿ ಯಾವುದಾದರು ಒಂದು ಕಾರಣವೂ ಆಗಿರಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಬೆಲ್ಲಿಂಗ್ ಲ್ಯಾಂಡಿಂಗ್ ಅತ್ಯಂತ ಅಪಾಯಾಕಾರಿ ಲ್ಯಾಂಡಿಂಗ್ ಆಗಿದೆ. ಹೀಗಾಗಿ ಬೇರೆ ಯಾವುದೇ ದಾರಿಗಳಿಲ್ಲದಿದ್ದರೆ ಮಾತ್ರ ಬೆಲ್ಲಿ ಲ್ಯಾಂಡಿಂಗ್ ಮಮೂಲಕ ವಿಮಾನ ಲ್ಯಾಂಡಿಂಗ್ ಮಾಡಲಾಗುತ್ತದೆ. ಇಲ್ಲಿ ವಿಮಾನ ಲ್ಯಾಡಿಂಗ್ ಮಾಡುವಾಗ ಪೊಸಿಶನ್, ವೇಗದ ನಿಯಂತ್ರಣ, ಲ್ಯಾಂಡಿಂಗ್ ಬಳಿಕ ವಿಮಾನದ ವೇಗ ನಿಯಂತ್ರಣ ಎಲ್ಲವನ್ನೂ ಸರಿಯಾಗಿ ಮಾಡಬೇಕಾಗುತ್ತದೆ. ಇದರ ಜೊತೆಗೆ ಲ್ಯಾಂಡಿಂಗ್ ವೇಳೆ ಪೈಲೆಟ್ ವಿಸಿಬಿಲಿಟಿ, ಗಾಳಿ ಎಲ್ಲವೂ ಮುಖ್ಯವಾಗುತ್ತದೆ. ಬೆಲ್ಲಿ ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಹಾನಿಯಾಗುವ ಸಂಭವ ಜಾಸ್ತಿ. ಬೆಲ್ಲಿ ಲ್ಯಾಂಡಿಂಗ್ ಮೊದಲು ಹಲವು ಮುನ್ನಚ್ಚೆರಿಕೆ ಕ್ರಮಗಳನ್ನು ಪಾಲಿಸಬೇಕು. ಪ್ರಮುಖವಾಗಿ ವಿಮಾನದಲ್ಲಿರುವ ಇಂಧನ ಖಾಲಿ ಮಾಡಬೇಕು. ಹೀಗಾಗಿ ಆಗಸದಲ್ಲೇ ಸುತ್ತು ಹಾಕಲಾಗುತ್ತದೆ. ಇದರ ಜೊತೆಗೆ ತುರ್ತು ಸೇವೆಗಳನ್ನು ನಿಯೋಜಿಸಲಾಗುತ್ತದೆ. ಲ್ಯಾಂಡಿಂಗ್ ವೇಳೆ ವಿಮಾನ ನೇರವಾಗಿ, ಸಮತೋಲನದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿಲ್ಲ ಎಂದಾದರೆ, ವಿಮಾನಕ್ಕೆ ಹಾನಿಯಾಗುವ, ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ.
ಸೌತ್ ಕೊರಿಯಾ ವಿಮಾನ ಬೆಲ್ಲಿ ಲ್ಯಾಂಡಿಂಗ್ ಬಳಿಕ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಬೆಲ್ಲಿ ಲ್ಯಾಂಡಿಂಗ್ ವೇಳೆ ಆಗಸದಲ್ಲೂ ವಿಮಾನದ ವೇಗ ನಿಯಂತ್ರಿಸಲು ಸಾಧ್ಯವಾಗಿಲ್ಲ. ಏರ್ ಸ್ಪೀಡ್ ಹಾಗೂ ಲ್ಯಾಂಡಿಂಗ್ ಬಳಿಕ ಸ್ಪೀಡ್ ನಿಯಂತ್ರಿಸಲು ಸಾಧ್ಯವಾಗಿಲ್ಲ.